ದಾವಣಗೆರೆ | ಧರ್ಮಸ್ಥಳದ ಸೌಜನ್ಯಳಂತ ದೌರ್ಜನ್ಯ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ, ಆರೋಪಿಗಳ ಶಿಕ್ಷೆಗೆ ಕರ್ನಾಟಕ ಜನಶಕ್ತಿ ಆಗ್ರಹ

Date:

Advertisements

ಸೌಜನ್ಯಳಂತಹ ಅಮಾಯಕರ ಕೊಲೆಗಳು ಕೊನೆಯಾಗಬೇಕು, ಮುಚ್ಚಿ ಹಾಕಿರುವ ಅಪಹರಣ, ಅತ್ಯಾಚಾರ, ದೌರ್ಜನ್ಯ, ಕೊಲೆ ಮತ್ತು ಬೆದರಿಕೆಗಳ ತನಿಖೆ ನಡೆಸಿ ನೈಜ ಅಪರಾಧಿಗಳನ್ನು ಕಾನೂನಿನ ಮುಂದೆ ತರಬೇಕು. ಧರ್ಮಸ್ಥಳದ ದೌರ್ಜನ್ಯ ಪ್ರಕರಣಗಳ ತನಿಖೆಗೆ ನೇಮಕವಾಗಿರುವ ವಿಶೇಷ ತನಿಖಾ ದಳ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ದಾವಣಗೆರೆ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿಯ ಮುಖಂಡರು ದಾವಣಗೆರೆ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು “ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಪ್ರಕರಣ ಮತ್ತು ಇತ್ತೀಚೆಗೆ ಸಾಕ್ಷಿಯಾಗಲು ಮುಂದೆ ಬಂದಿರುವ ದೇವಾಲಯದ ಮಾಜಿ ಉದ್ಯೋಗಿ ಹೇಳಿರುವಂತೆ ನಡೆದಿರಬಹುದಾದ ಅಸಂಖ್ಯಾತ ಹೆಣ್ಣುಮಕ್ಕಳ ಅತ್ಯಾಚಾರ. ಕೊಲೆ ಮತ್ತು ದೌರ್ಜನ್ಯ ಪ್ರಕರಣಗಳು ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಕಲಕುವಂಥದ್ದಾಗಿವೆ. ಈ ಪ್ರಕರಣಗಳು ಕೇವಲ ಒಂದೆರಡು ಘಟನೆಗಳಲ್ಲ. ಇವು ಧಾರ್ಮಿಕ ಸಂಸ್ಥೆಗಳ ಪಾರದರ್ಶಕತೆ ಸರ್ಕಾರದ ಜವಾಬ್ದಾರಿ ಮತ್ತು ನಮ್ಮ ಸಮಾಜದ ನೈತಿಕತೆಯನ್ನು ಪ್ರಶ್ನಿಸುತ್ತಿರುವ ಆಕ್ರೋಶದ ಧ್ವನಿಗಳಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

1002365438

“2012ರಲ್ಲಿ ಧರ್ಮಸ್ಥಳದಲ್ಲಿ 16 ವರ್ಷದ ಶಾಲಾ ಬಾಲಕಿ ಸೌಜನ್ಯಳ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತು. ಈ ದುರಂತವು ಕೇವಲ ಒಬ್ಬ ಬಾಲಕಿಯ ಕುಟುಂಬಕ್ಕೆ ಸೀಮಿತವಾಗಿರಲಿಲ್ಲ. ಇದು ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರದಲ್ಲಿ ಭದ್ರತೆ ಮತ್ತು ನಂಬಿಕೆಯ ಪ್ರಶ್ನೆಯನ್ನು ಹುಟ್ಟುಹಾಕಿತು. ಆದರೆ, ಎಷ್ಟೆಲ್ಲ ಹೋರಾಟ, ಬಡಿದಾಟಗಳ ಹೊರತಾಗಿಯೂ ಈ ಪ್ರಕರಣದ ತನಿಖೆಯು ಸಮರ್ಪಕವಾಗಿ ನಡೆಯದಿರುವುದು, ಸತ್ಯವನ್ನು ಮುಚ್ಚಿ ಹಾಕುವ ಯತ್ನಗಳು, ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗದಿರುವುದು, ನಾಡಿನ ಎಚ್ಚೆತ್ತ ನಾಗರೀಕರಿಗೆ ಅಪಾರವಾದ ಆತಂಕ ಉಂಟುಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisements

“ಇತ್ತೀಚೆಗೆ ಧರ್ಮಸ್ಥಳದ ದೇವಸ್ಥಾನದ ಮಾಜಿ ಸ್ವಚ್ಛತಾ ಕಾರ್ಮಿಕರೊಬ್ಬರು ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಈ ವ್ಯಕ್ತಿಯ ಪ್ರಕಾರ, ಕಳೆದ ಕೆಲವು ದಶಕಗಳಿಂದ ಧರ್ಮಸ್ಥಳದ ಸುತ್ತಮುತ್ತ ನೂರಾರು ಕೊಲೆಗಳು ಮತ್ತು ಅತ್ಯಾಚಾರಗಳು ನಡೆದು, ತಾನು ಸಾಕ್ಷಿಯಾಗಿರುವ ಭಯಾನಕ ಸತ್ಯ ಮತ್ತು ಅವುಗಳಲ್ಲಿ ಹಲವು ಬಲಿಪಶುಗಳ ಹೆಣಗಳನ್ನು ಇವರೇ ಹೂತಿಟ್ಟ, ಈ ಎಲ್ಲ ಘಟನೆಗಳ ಕುರಿತ ಮಾಹಿತಿ ನೀಡಲು ತಾನು ಸಿದ್ದ ಎಂದು ಅವರು ಮುಂದೆ ಬಂದಿದ್ದಾರೆ. ಇವರು ನೀಡಿದ ದೂರು ದಾಖಲಾದ ನಂತರ, ಧರ್ಮಸ್ಥಳದ ದೇವಾಲಯದಲ್ಲಿ ಕಾಣೆಯಾಗಿದ್ದ ಅನನ್ಯ ಭಟ್ ಎಂಬ ವಿದ್ಯಾರ್ಥಿನಿಯ ತಾಯಿ ಸುಜಾತಾ ಭಟ್ ಅವರೂ ಕೂಡಾ ತನ್ನ ಮಗಳ ಸಾವಿನ ಕುರಿತು ಮತ್ತೆ ದೂರು ದಾಖಲಿಸಿದ್ದಾರೆ” ಎಂದು ತಿಳಿಸಿದರು.‌

“ಮಾಜಿ ಉದ್ಯೋಗಿಯ ದೂರು ಮತ್ತು ಮಹಿಳಾ ಆಯೋಗದ ಪತ್ರವನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ಈಗ ವಿಶೇಷ ತನಿಖಾ ದಳ (ಎಸ್ ಐಟಿ) ರಚನೆ ಮಾಡಿದೆ. ಕರ್ನಾಟಕ ಸರ್ಕಾರವು ವಿಶೇಷ ತನಿಖಾ ದಳ (SIT) ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ತನಿಖಾ ದಳದಿಂದ ಸಮರ್ಪಕ ತನಿಖೆಯಾಗುತ್ತದೆ ಎಂಬ ಬಗ್ಗೆ ಭರವಸೆ ಇಟ್ಟುಕೊಂಡಿದ್ದೇವೆ” ಎಂದು ತಿಳಿಸಿದರು.

“ಧರ್ಮಸ್ಥಳದಲ್ಲಿ ನಡೆದಿರುವ ಆರೋಪಿತ ಕೊಲೆಗಳು, ಅತ್ಯಾಚಾರಗಳು, ಮತ್ತು ಶವಗಳನ್ನು ಹೂತಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ಅಪರಾಧಿಗಳು ಎಷ್ಟೇ ಬಲಾಡ್ಯರಾಗಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸುವುದು. ಈ ಪ್ರಕರಣದಲ್ಲಿ ಸಾಕ್ಷ್ಯ ನೀಡಿರುವ ವ್ಯಕ್ತಿಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು.‌ ತನಿಖೆಯ ಪ್ರಗತಿಯ ಬಗ್ಗೆ ಜನರಿಗೆ ಪಾರದರ್ಶಕ ಮಾಹಿತಿ, ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಮತ್ತು ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು.
ಸಾರ್ವಜನಿಕ ಪ್ರಕಟಣೆ ನೀಡಿ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲಾ ಕುಟುಂಬಗಳಿಗೆ ಮುಂದೆ ಬಂದು ಮಾತನಾಡಲು ಮತ್ತು ಔಪಚಾರಿಕ ದೂರುಗಳನ್ನು ದಾಖಲಿಸಲು ಮನವಿ ಮಾಡಿ, ಅವರ ಗೌಪ್ಯತೆ ಕಾಪಾಡುವ ಮತ್ತು ರಕ್ಷಣೆ ನೀಡುವ ಭರವಸೆ ನೀಡಿ ಸಾರ್ವಜನಿಕ ಘೋಷಣೆ ಹೊರಡಿಸಬೇಕು. ಇದರಿಂದ ಅಪರಾಧಿಗಳನ್ನು ಕಾನೂನಿನ ಮುಂದೆ ತರಬಹುದು” ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರಮುಖ ವೃತ್ತಕ್ಕೆ ಶ್ರೀಮಡಿವಾಳ ಮಾಚಿದೇವ ಹೆಸರಿಸಲು ದಸಂಸ, ಮಡಿವಾಳ ಸಮಾಜ ಒತ್ತಾಯ

ಮನವಿ ಸಲ್ಲಿಸುವ ವೇಳೆ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಸತೀಶ್ ಅರವಿಂದ್, ಜಿಲ್ಲಾ ಕಾರ್ಯದರ್ಶಿ ಪವಿತ್ರ, ಗೌರವಾಧ್ಯಕ್ಷ ಖಲೀಲ್, ಜಿಲ್ಲಾ ಅಧ್ಯಕ್ಷ ಆದಿಲ್ ಖಾನ್, ರಾಮಾಂಜನೇಯ, ಸೈಯದ್ ಅಶ್ಫಾಕ್, ಸುರೇಶ್ ಶಿಡ್ವಪ್ಪ, ಅಂಜಿನಪ್ಪ ಸೇರಿದಂತೆ ಇತರ ಕಾರ್ಯಕರ್ತರು ಭಾಗವಹಿಸಿದ್ದರು.‌

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X