ದಾವಣಗೆರೆ ನಗರದ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯಲ್ಲಿ ಬಾಲಕನ ಮೇಲೆ ಬಾಯ್ಲರ್ ಉರುಳಿಬಿದ್ದು ಸಾವನ್ನಪ್ಪಿದ ಪ್ರಕರಣದಲ್ಲಿ ಪೊಲೀಸರು ಶಾಲೆಯ ಮುಖ್ಯೋಪಾಧ್ಯಾಯ, ವಾರ್ಡನ್ ನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಮೃತಪಟ್ಟ 11 ವರ್ಷದ ಬಾಲಕ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ ಗ್ರಾಮದನಾಗಿದ್ದು, ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬಾಲಕನ ತಂದೆ ರಾಮಪ್ಪ, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ‘ಶಾಲಾ, ಹಾಸ್ಟೆಲ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಾಯ್ಲರ್ ಮೇಲುರುಳಿ ಸಾವಿಗೀಡಾಗಿದ್ದಾನೆ” ಎಂದು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ | ರಾಯಚೂರು | ಕೃಷಿ ಹೊಂಡದ ಹೆಸರಲ್ಲಿ ಕಲ್ಲು ಗಣಿಗಾರಿಕೆ: ಗ್ರಾಮಸ್ಥರ ಮನೆಯ ಗೋಡೆಯಲ್ಲಿ ಬಿರುಕು
ಶಾಲೆಯ ಕಟ್ಟಡದ ಮೇಲ್ಭಾಗದಲ್ಲಿರುವ ಬಾಯ್ಲರ್ ಹಳೆಯದಾಗಿದ್ದು, ಬಾಲಕ ಮತ್ತು ಆತನ ಸ್ನೇಹಿತರನ್ನು ಉರಿ ಹಾಕಲು ಸಿಬ್ಬಂದಿ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಉರಿ ಹಾಕುತ್ತಿರುವಾಗ ಬಾಯ್ಲರ್ ಮೇಲೆ ಬಿದ್ದು ಒಳಗಿನ ಅಂಗಾಂಗಗಳಿಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದರೂ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ ವಹಿಸಿದ್ದಾರೆ. ತನ್ನ ಮಗನ ಸಾವಿಗೆ ಆಡಳಿತ ಮಂಡಳಿ ಮತ್ತು ಶಾಲೆಯ ಸಿಬ್ಬಂದಿಗಳು ಕಾರಣವಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ದಾವಣಗೆರೆ ನಗರದ ಕೆಟಿ ಜಂಬಣ್ಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಎಸ್‌ಪಿ ಉಮಾ ಪ್ರಶಾಂತ್ ಆದೇಶಿಸಿದ್ದರು. ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್. ಎಸ್. ಸುನೀಲ್‌ಕುಮಾರ್, ಪಿಎಸ್ಐ ಲತಾ ಆರ್, ಪ್ರಕರಣದ ತನಿಖೆ ನಡೆಸಿ ಆರೋಪಿತರಾದ ಮಂಜುನಾಥ ಸ್ವಾಮಿ ಪರಿಶಿಷ್ಟ ಪಂಗಡ ವಸತಿಯುತ ಶಾಲೆಯ ಮುಖ್ಯೋಪಾಧ್ಯಾಯ, ವಾರ್ಡನ್ ನನ್ನು ಬಂಧಿಸಿ ವಿಚಾರಣೆ ನೆಡೆಸಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
