ದಾವಣಗೆರೆ ಜಿಲ್ಲೆಯ ಹರಿಹರದ ಪ್ರವಾಸಿ ಮಂದಿರದಲ್ಲಿ ಮೇ 29 ರಂದು ರಂದು ರಾತ್ರಿ 8ಗಂಟೆಗೆ ನಟ ಅಹಿಂಸಾ ಚೇತನ್ ರ ಸಮಾನತೆಯ ಸಭೆ ಆಯೋಜಿಸಲಾಗಿದ್ದು, ಸಮಾನತೆಯ ಆಶಯವುಳ್ಳ ಹರಿಹರದ ಎಲ್ಲಾ ನಾಗರಿಕರು, ಸಮಾನ ಮನಸ್ಕರು ಭಾಗವಹಿಸಿ ವಿಷಯ ಚರ್ಚೆಯಲ್ಲಿ ಪಾಲ್ಗೊಂಡು ವಿಚಾರಗಳನ್ನು ಹಂಚಿಕೊಳ್ಳಲು ದಸಂಸ ಸಂಚಾಲಕ ಮಹಾಂತೇಶ ಕರೆ ನೀಡಿದ್ದಾರೆ.

ಸಮಾನತೆ ಮತ್ತು ಸಾಮರಸ್ಯಕ್ಕಾಗಿ ಜನರನ್ನು ಒಗ್ಗೂಡಿಸಲು ಸಮಾನತೆಯ ಸಭೆಗಳನ್ನು ರಾಜ್ಯಾದ್ಯಂತ ಆಯೋಜಿಸುತ್ತಿರುವ ನಟ ಅಹಿಂಸಾ ಚೇತನ್, ಇದೇ ಮೇ 29ರಂದು ದಾವಣಗೆರೆ ಮತ್ತು ಜಿಲ್ಲೆಯ ಹರಿಹರ, ಮಾಯಕೊಂಡ, ಜಗಳೂರಿನಲ್ಲಿ ಸಮಾನತೆ ಸಭೆಗಳನ್ನು ನೆಡೆಸುತ್ತಿದ್ದು, ಸಮಾನ ಮನಸ್ಕರು ಅಲ್ಲಿನ ನಗರದ ಸರ್ಕೀಟ್ ಹೌಸ್, ಪ್ರವಾಸಿ ಮಂದಿರದಲ್ಲಿ ಭಾಗವಹಿಸಲು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪರಿಶಿಷ್ಟ ಜಾತಿ ಗಣತಿ ಶೇ.100ರಷ್ಟು ಸಾಧನೆಯ ಹೆಗ್ಗಳಿಕೆ; ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.
ಮೇ 30ರಂದು ದಾವಣಗೆರೆಯಲ್ಲಿ ಬೆಳಿಗ್ಗೆ 10ಕ್ಕೆ, ಮಾಯಕೊಂಡದಲ್ಲಿ ಮಧ್ಯಾಹ್ನ 1ಕ್ಕೆ ಮತ್ತು ಜಗಳೂರಿನಲ್ಲಿ ಸಂಜೆ 5ಕ್ಕೆ ಸರಣಿ ಸಮಾನತೆಯ ಸಭೆಗಳನ್ನು ಆಯೋಜಿಸಲಾಗಿದೆ. ಆಯಾ ಪ್ರದೇಶದ ಸಮಾನ ಮನಸ್ಕರು ಸೇರಿ ಸಮಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಲಾಗಿದೆ.