ಬುದ್ಧ, ಮಹಮ್ಮದ್ ಪೈಗಂಬರ್, ಯೇಸು ಕ್ರಿಸ್ತರ ಶಾಂತಿ, ಬಸವೇಶ್ವರರ ಸಮಾನತೆ, ಮಹಾತ್ಮ ಗಾಂಧೀಜಿಯವರ ಅಹಿಂಸೆ ಡಾ.ಬಿ.ಆರ್. ಅಂಬೇಡ್ಕರರ ಸಂವಿಧಾನ ನ್ಯಾಯ, ಸಮ ಸಮಾಜ ನಿರ್ಮಾಣ ಮತ್ತು ಸಮಾನತೆಯ ಭಾರತ ರಾಷ್ಟ್ರ ನಿರ್ಮಾಣ ಅಹಿಂದ ಚಳುವಳಿ ಸಂಘಟನೆಯ ಧ್ಯೇಯೋದ್ದೇಶ, ತತ್ವ, ಸಿದ್ಧಾಂತಗಳು ಮತ್ತು ಮೂಲಮಂತ್ರಗಳಾಗಿವೆ ಎಂದು ದಾವಣಗೆರೆ, ಹಾವೇರಿ ಜಿಲ್ಲೆಯ ಉಸ್ತುವಾರಿ ದೇವರಾಜ್ ಪ್ರಸಾದ್ ತಿಳಿಸಿದರು.

ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಹಿಂದ ಚಳುವಳಿ ಸಂಘಟನೆಯ ಈ
ಧ್ಯೇಯೋದ್ದೇಶಗಳೊಂದಿಗೆ ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳನ್ನು ಸಂಘಟಿಸುವ ಉದ್ದೇಶದಿಂದ ಅಹಿಂದ ಚಳುವಳಿ ಸಂಘಟನೆಯನ್ನು ಆರಂಭಿಸಲಾಗಿದೆ. ಮಾತ್ರವಲ್ಲದೆ ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ಆರಂಭ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ಅಹಿಂದ ಸಮುದಾಯಗಳ ಸದಸ್ಯರೇ ಸಂಪೂರ್ಣ ಅಧಿಕಾರ ಹೊಂದಿರುವ, ನಿರ್ವಹಿಸುವ ಮತ್ತು ನಿಯಂತ್ರಿಸುವ, ಸ್ವಸಹಾಯ ಮತ್ತು ಪರಸ್ಪರ ನೆರವಿನ ಮೇಲೆ ಆಧಾರಿತವಾದ ಭಾರತ ಸಂವಿಧಾನ ಮತ್ತು ಸಹಕಾರಿ ತತ್ವಗಳನ್ನು ಬೆಂಬಲಿಸುವ ಅಹಿಂದ ಸಮುದಾಯಗಳನ್ನು ಸಂಘಟಿಸಲಾಗುತ್ತದೆ.
ಅಹಿಂದ ಸಮುದಾಯಗಳ ಒಳಗೆ ಬಡತನದಲ್ಲಿರುವವರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ಅವರ ಕುಂದುಕೊರತೆಗಳ ನಿವಾರಣೆ, ಹಿತಾಸಕ್ತಿಗಾಗಿ ದುಡಿಯುವುದು. ಖಾಸಗಿ ವ್ಯಕ್ತಿ ಮತ್ತು ಸಂಸ್ಥೆಗಳಿಂದ ನೆರವು ಪಡೆದು ಈ ಸಮುದಾಯಗಳ ಬಡವರಿಗೆ ಸಹಾಯ ನೀಡಲಾಗುವುದು” ಎಂದರು.
“ಕೇಂದ್ರ, ರಾಜ್ಯ ಸರ್ಕಾರಗಳ, ಸರ್ಕಾರಿ ಸ್ವಾಮ್ಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಅಥವಾ ಯೋಜನೆಗಳನ್ನು ಸಂಘಟನೆ ಮೂಲಕ ಆಹಿಂದ ಸಮುದಾಯಗಳ ಸದಸ್ಯರ ಕಲ್ಯಾಣಕ್ಕಾಗಿ, ಅನುಷ್ಠಾನ ಗೊಳಿಸಲಾಗುವುದು” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಂಜಾನ್ ಮಾಸ; ಮಸೀದಿಯಲ್ಲಿ ಸರ್ವಧರ್ಮಿಯರ ಇಫ್ತಾರ್ ಕೂಟ.
“ರಾಜ್ಯಾದ್ಯಂತ ಆಸಕ್ತ ಅಹಿಂದ ಕಾರ್ಯಕರ್ತರನ್ನು ಗುರುತಿಸಿ. ಎಲ್ಲ ಸಮುದಾಯಗಳ ಪ್ರತಿನಿಧಿಗಳನ್ನು
ಒಳಗೊಂಡ ರಾಜ್ಯ ಸಮಿತಿ, ಜಿಲ್ಲಾ ಸಮಿತಿ. ಮಾಡುವುದು. ತಾಲ್ಲೂಕು ಸಮಿತಿ ಗಳೆಂದು ಕೇಡರ್‌ಗಳನ್ನು ರಚನೆ ವಿಧಾನಸಭಾ ಕ್ಷೇತ್ರವಾರು ಸಮಿತಿಗಳನ್ನು ಸಮಿತಿಗಳನ್ನು ರಚನೆ ಮಾಡಿ, ತರಬೇತಿ ಶಿಬಿರ ಏರ್ಪಡಿಸುವುದು. ಅಹಿಂದ ವರ್ಗಗಳಿಗೆ ವಿದ್ಯಾರ್ಜನೆ ಕೊಡಿಸುವುದು ಮತ್ತು ಸರ್ಕಾರಿ ಯೋಜನೆಗಳನ್ನು ಪಡೆಯುವ ಬಗೆಗಳನ್ನು ತಿಳಿಸುವುದು ನಮ್ಮ ಸಂಘಟನೆಯ ಉದ್ದೇಶಗಳಾಗಿವೆ” ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಎನ್.ಅಜ್ಜಪ್ಪ, ಡಿ.ಎನ್.ಹಾಲೇಶ್, ಬ್ಯೂನಿಯನ್ ಭಾಸ್ಕರ, ಬಾಬು ರಾವ್ ಸುತ್ರಾವೆ, ಸಿದ್ದನೂರು ಬಸವರಾಜ್, ಶಿವಾನಂದಪ್ಪ ಇತರರು ಹಾಜರಿದ್ದರು.