ಪತ್ನಿ ಸಾವಿನಿಂದ ಮನನೊಂದ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಗುರುವಾರ ಸಂಜೆ ದಾವಣಗೆರೆಯ ಎಸ್ ಪಿಎಸ್ ನಗರದಲ್ಲಿ ನಡೆದಿದೆ.
ಉದಯಕುಮಾರ (35) ಇಂದೂಶ್ರೀ (6) ಶ್ರೀಜಯ (3.5) ಮೃತಪಟ್ಟ ದುರ್ದೈವಿಗಳು. ಉದಯಕುಮಾರ್
ಪತ್ನಿ ಆರು ತಿಂಗಳ ಹಿಂದೆ ಹೃದಯಘಾತದಿಂದ ಮೃತಪಟ್ಟಿದ್ದರು. ಅದೇ ನೋವಿನಿಂದ ಬಳಲುತ್ತಿದ್ದ ಉದಯಕುಮಾರ ಹಲವು ಬಾರಿ ಸಾವಿಗೆ ಯೋಚಿಸಿದ್ದಾನೆ. ಆದರೆ, ಮಕ್ಕಳನ್ನು ಬಿಟ್ಟು ಹೋದರೆ ಅವರನ್ನು ನೋಡಿಕೊಳ್ಳುವವರು ಯಾರು ಎಂಬ ಉದ್ದೇಶದಿಂದ ತನ್ನ ಮಕ್ಕಳನ್ನು ಕೊಂದು ಕಡೆಗೆ ತಾನು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ .
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ಪ್ರಶಸ್ತಿಗೆ ಒಂದೇ ಜಾತಿಗೆ ಪ್ರಾಶಸ್ತ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವರ ರಾಜಿನಾಮೆಗೆ ಆಗ್ರಹ.
ಜೀವನವನ್ನೇ ಸರಿಯಾಗಿ ಕಾಣದ, ಸಾವು ಎಂದರೇನು ಎಂದೇ ಗೊತ್ತಿರದ ಪುಟ್ಟ ಕಂದಮ್ಮಗಳ ಸಾವು ಎಲ್ಲರ ಹೃದಯ ಹಿಂಡುವಂತಿತ್ತು. ಅಲ್ಲಿದ್ದ ಎಲ್ಲರ ಕಣ್ಣುಗಳಲ್ಲಿ ನೀರು ತುಂಬಿ ಒದ್ದೆಯಾಗಿದ್ದವು. ಎಸ್‍ಪಿಎಸ್ ನಗರದ 2 ನೇ ಹಂತದಲ್ಲಿ ಕುಟುಂಬ ವಾಸವಾಗಿತ್ತು. ಗಾಂಧಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
