ವಿಶ್ವರತ್ನ ಸಂವಿಧಾನ ಶಿಲ್ಪಿ ಬಾಬಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ರವರ 134ನೇ ಜಯಂತೋತ್ಸವ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ) ಗ್ರಾಮ ಶಾಖೆ ಉದ್ಘಾಟನೆ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಮಂಜುನಾಥ್ ಕುಂದವಾಡ, “ಪ್ರೊ. ಬಿ ಕೃಷ್ಣಪ್ಪನವರು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ದೀನ ದಲಿತರ ಶೋಷಣೆಗೊಳಗಾದವರ ದೀನದಲಿತರ, ಮಹಿಳೆಯರ , ಬಡವರ ಏಳಿಗೆಗಾಗಿ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು. ಇಂದು ಈ ಚಳುವಳಿಯ ಹಳ್ಳಿ ಹಳ್ಳಿಗಳಲ್ಲಿ ತಲುಪಿ ಸಮಾನತೆಗಾಗಿ, ಶೋಷಿತರ ಅಭಿವೃದ್ಧಿಗಾಗಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ‘ಸರ್ವರಿಗೂ ಸಮ ಬಾಳು, ಸಮಪಾಲು’ ಎನ್ನುವ ಘೋಷವಾಕ್ಯದೊಂದಿಗೆ ಸಮಾನತೆಯನ್ನು ನೀಡಿದರು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನೀರಿನ ಗುಣಮಟ್ಟ ಪರೀಕ್ಷಿಸಿ, ಕಲುಷಿತವಿದ್ದರೆ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡಿ; ಸಚಿವ ಈಶ್ವರ ಖಂಡ್ರೆ.
“ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿ 7 ಜನರಿದ್ದರೂ ಕೂಡ ಅಂಬೇಡ್ಕರ್ ರನ್ನು ಹೊರತುಪಡಿಸಿ ಉಳಿದ ಆರು ಜನ ಇದರ ಬಗ್ಗೆ ಹೆಚ್ಚಿನ ಕೆಲಸ ಮಾಡಲೇ ಇಲ್ಲ. ಒಬ್ಬರಂತೂ ಅಮೆರಿಕಾದಿಂದ ಬರಲೇ ಇಲ್ಲ. ಆದರೂ ಎದೆಗುಂದದ ಡಾ. ಬಿಆರ್ ಅಂಬೇಡ್ಕರ್ ಸರಿಸುಮಾರು ಎರಡೂವರೆ ವರ್ಷಗಳ ಕಾಲ ಸತತ ಪ್ರಯತ್ನ, ನಿರಂತರ ಕೆಲಸದಿಂದ ಇಡೀ ಪ್ರಪಂಚವೇ ತಿರುಗಿ ನೋಡುವಂತಹ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದರು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ: ಭತ್ತ ಖರೀದಿ ಕೇಂದ್ರಕ್ಕೆ ಆಗ್ರಹಿಸಿ
ರಸ್ತೆಯಲ್ಲಿ ಭತ್ತ ಸುರಿದು ರೈತರ ಪ್ರತಿಭಟನೆ.
ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ ಚಿತ್ರ ಲಿಂಗಪ್ಪ, ರಂಗನಾಥ್ ನಾಯಕ, ಬುಳ್ಸಾಗರ ಸಿದ್ಧರಾಮಪ್ಪ, ಮಹಾಂತೇಶ್ ಹಿರೇಗಂಗೂರು, ಗ್ರಾಮ ಪಂಚಾಯಿತಿ ಸದಸ್ಯ ಸತೀಶ್, ಎಚ್.ಟಿ.ಎಂ.ಸಿ ಅಧ್ಯಕ್ಷ ತಿಮ್ಮೇಶ್ ಎಂ., ಎಚ್.ಟಿ.ಎಂಸಿ, ಮಾಜಿ ಅಧ್ಯಕ್ಷ ಬಸವರಾಜ್, ವಿದ್ಯಾರ್ಥಿ ಸಂಘದ ಒಕ್ಕೂಟ ಅಧ್ಯಕ್ಷ ಚಿರಂಜೀವಿ, ಶ್ರೀಮತಿ ಕೃತಿ ರಮೇಶ್, ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ, ಕುರುಬ ಸಮಾಜದ ಮುಖಂಡ ವಿ.ಜಿ. ವೆಂಕಟೇಶ್, ರಜಪೂತ್ ಸಮಾಜದ ಮುಖಂಡ ಗಜೇಂದ್ರ ಸಿಂಗ್, ಕುಬೇಂದ್ರ ಸ್ವಾಮಿ, ರವಿಚಂದ್ರನ್, ಲಕ್ಷ್ಮಮ್ಮ, ಸತೀಶ್, ಗೀತಮ್ಮ, ಹನುಮಂತಪ್ಪ ಶಿವಣ್ಣ, ಸಿದ್ದಪ್ಪ, ಗಂಗಾಧರಪ್ಪ, ತಿಪ್ಪೇಶ, ಕರಿಯಪ್ಪ, ನಾಗರಾಜ್, ಆಂಜಿನಪ್ಪ, ಬಸವರಾಜ್, ಮಲ್ಲೇಶ್, ರವಿಕುಮಾರ್, ಉಮೇಶ್, ಈರಪ್ಪ, ರಮೇಶ್, ಲಕ್ಷ್ಮಣ, ರುದ್ರಪ್ಪ, ಸಂದೀಪ್, ನಾಗರಾಜ್, ಚಂದ್ರಪ್ಪ, ರುದ್ರಪ್ಪ, ತಿಪ್ಪೇಶಪ್ಪ, ಚರಣ್, ಚಿನ್ಮಯಿ, ಶರತ್, ಪುನೀತ್, ಚೇತನ್, ಅಂಜನ್ ಕುಮಾರ್, ಸಂತೋಷ್, ಮನೋಜ್, ಸಂಪತ್, ಆಕಾಶ್, ಅಪ್ಪು, ಮಲ್ಲಿಕಾರ್ಜುನ್, ಗಾನವಿ, ಹೇಮಾವತಿ, ಸ್ವಾಮಿ, ರಘು, ರುದ್ರೇಶ್, ರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.