ಸಂವಿಧಾನವೆಂದರೆ ಬಹುವರ್ಣ, ಬಹುತ್ವದ ಸಂಕೇತ ಅದರ ಸಂಕೇತವಾಗಿಯೇ ದಾವಣಗೆರೆಯ ಸಂವಿಧಾನ ಸಂರಕ್ಷಕರ ಪರೇಡ್ ನಲ್ಲಿ ಹಲವು ಬಣ್ಣಗಳ ಬಾವುಟ ಗಳನ್ನು ಹಿಡಿದು ಸಂವಿಧಾನ ಪ್ರಿಯರು, ಸಂರಕ್ಷಕರು, ಅಂಬೇಡ್ಕರ್ ಅಭಿಮಾನಿಗಳು ಸಂವಿಧಾನ ಸಂರಕ್ಷಣೆಗಾಗಿ ಕಾರ್ಯಪಡೆ ಕಟ್ಟುವ ಮಹತ್ವದ ಕಾರ್ಯಕ್ಕೆ ಒಟ್ಟಾಗಿ ಹೆಜ್ಜೆ ಹಾಕಿದರು.

ದಾವಣಗೆರೆಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಕದ ಸಮಾವೇಶದಲ್ಲಿ ಬೆಳಿಗ್ಗೆ 11ಕ್ಕೆ ಆರಂಭವಾದ ಸಂವಿಧಾನದಲ್ಲಿ ಸಾವಿರಾರು ಸಂವಿಧಾನದ ಅಭಿಮಾನಿಗಳು ಹೆಜ್ಜೆ ಹಾಕುವ ಮೂಲಕ ಸಂವಿಧಾನ ರಕ್ಷಣೆಗೆ ನಾವು ಬದರಿದ್ದೇವೆ ಯಾವುದೇ ಬೆಲೆ ಎತ್ತಾದರೂ ಸಂವಿಧಾನವನ್ನು ರಕ್ಷಿಸಿಕೊಳ್ಳಲು ನಾವು ಸಿದ್ದ ಎಂದು ದೃಢ ಹೆಜ್ಜೆ ಹಾಕಿದರು.

ಸಂವಿಧಾನದ ಸಂರಕ್ಷಕರ ಸಮಾವೇಶ ಆಯೋಜಿಸಿರುವ ಬೀರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಸಂವಿಧಾನದ ಮಹತ್ವ ಸಾರುವ ಟ್ಯಾಬ್ಲೆನೊಂದಿಗೆ ಹೊರಟ ಸಂವಿಧಾನದ ಪೆರೇಡ್ ಎವಿಕೆ ಕಾಲೇಜು ಮಾರ್ಗವಾಗಿ ಸಾಗಿದ ಪೆರೇಡ್ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಸೇರಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪೆರೇಡ್ ಮತ್ತು ಸಮಾವೇಶಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಸಂವಿಧಾನ ಸಂರಕ್ಷಣೆಯ ಒಂದೇ ಉದ್ದೇಶದಿಂದ ದಾವಣಗೆರೆಗೆ ಬಂದು ಸೇರಿದ ನಾಗರಿಕರು ಸಂವಿಧಾನ ಸಂರಕ್ಷಕರು ಜಾತಿ, ಧರ್ಮ, ಮತ ಭೇದ ಮರೆತು ‘ಮನುಜಮತ ವಿಶ್ವಪಥ, ಎಲ್ಲರೂ ಒಂದೇ’ ಎಂದು ಬೆರೆತು ಸಾಗಿದರು.

ಪೆರೇಡ್ ನಲ್ಲಿ ಭಾಗವಹಿಸಿದ ಸಂವಿಧಾನ ಪ್ರೀಯರು ಶಿಸ್ತುಬದ್ಧವಾಗಿ ರಸ್ತೆ ಒಂದು ಬದಿಯಲ್ಲಿ ಹೆಜ್ಜೆ ಹಾಕುವ ಮೂಲಕ ರಾಷ್ಟ್ರಧ್ವಜ ಮತ್ತು ಬಾವುಟಗಳನ್ನು ಹಿಡಿದು ಅಂಬೇಡ್ಕರ್ ಮತ್ತು ಸಂವಿಧಾನದ ಮಹತ್ವ ಸರ್ವ ಘೋಷಣೆಗಳನ್ನು ಕೂಗುವ ಮೂಲಕ ಶಿಸ್ತು ಬದ್ಧವಾಗಿ ಸಾಗಿದರು. ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ನಂತರ ಜಯದೇವ ವೃತ್ತ, ನಗರಸಭೆ ಮುಂಭಾಗದ ಮೂಲಕ ಬೀರಲಿಂಗೇಶ್ವರ ಆವರಣಕ್ಕೆ ಸಮಾವೇಶಗೊಂಡಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆಯಲ್ಲಿ ಸಂವಿಧಾನ ರಕ್ಷಣೆಗಾಗಿ ಸಂರಕ್ಷಕರ ಸಮಾವೇಶ, ಸಂವಿಧಾನ ರಕ್ಷಣೆಗೆ ಕಾರ್ಯಪಡೆ ಬದ್ದ.
ತಮಟೆ, ಡೊಳ್ಳು, ಕಹಳೆ, ನಗಾರಿ ಹಾಗೂ ವಿವಿಧ ನೆಲಸಂಸ್ಕೃತಿಯ ಕಲಾವಿದರು ಪೆರೇಡ್ ನಲ್ಲಿ ಸಾಗಿದರು. ‘ನಮ್ಮ ಸಂವಿಧಾನದ ರಕ್ಷಣೆ ನಮ್ಮಿಂದಲೇ’ ಸಂವಿಧಾನ ಸಂರಕ್ಷಣೆಗೆ ನಾವು ಬದ್ಧ’ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ನಗರದಲ್ಲಿ ಸಂವಿಧಾನ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಿದರು.

ಸಂವಿಧಾನ ಪೆರೇಡ್‌ನಲ್ಲಿ ಎದ್ದೇಳು ಕರ್ನಾಟಕ ಸೆಂಟ್ರಲ್ ವರ್ಕಿಗ್ ಕಮಿಟಿ ಸದಸ್ಯ ತಾರಾ ರಾವ್, ಹಿರಿಯ ದಲಿತ ನಾಯಕ ಎನ್. ವೆಂಕಟೇಶ್, ಜಮಾತ್-ಎ-ಇಸ್ಲಾಮಿ-ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮದ್ ಯೂಸಫ್ ಖನ್ನಿ, ಕಾನೂನು ವಿಶ್ವವಿದ್ಯಾಲಯದ ನಿರ್ದೆಶಕ ಸೇಂಟ್ ಜೋಸೆಫ್, ಫಾದರ್ ಝೆರಾಲ್ಡ್ ಡಿಸೋಜಾ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಕರಿಬಸಪ್ಪ, ಸತೀಶ್ ಅರವಿಂದ್, ಎಪಿಸಿಆರ್ ಜಿಲ್ಲಾ ಕಾರ್ಯದರ್ಶಿ ನಿಜಾಮುದ್ದೀನ್, ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಅಂಬಣ್ಣ ಅರೋಲಿಕರ್, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ನೂರಾರು ಚಿಂತಕರು, ಸಂವಿಧಾನ ಪ್ರಿಯರು, ಬರಹಗಾರರು, ಹೋರಾಟಗಾರರು ಹಾಗೂ ಪತ್ರಕರ್ತರು ಪರೇಡ್‌ನಲ್ಲಿ ಭಾಗವಹಿಸಿದ್ದರು.