ಡಿಜಿಟಲ್ ಸರ್ವೆ ನಡೆಸಿ, ಸರ್ಕಾರಿ ಭೂಮಿ ಅಕ್ರಮ ಒತ್ತುವರಿ ತೆರವುಗೊಳಿಸಿ, ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮಸ್ಥರು ದಲಿತ ಸಂಘರ್ಷ ಸಮಿತಿ, ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
‘ಗ್ರಾಮದಿಂದ ಟ್ರಾಕ್ಟರ್ ನಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿದ ಗ್ರಾಮಸ್ಥರು ದಾವಣಗೆರೆ ತಾಲೂಕು ಕಬ್ಬೂರು ಗ್ರಾಮದ ರಿಸರ್ವ್ ಸರ್ವೆ ನಂಬರ್ 31, 32 ರಲ್ಲಿ ಸುಮಾರು 40ಕ್ಕೂ ಹೆಚ್ಚು ಎಕರೆ ಭೂಮಿ ಒತ್ತುವರಿಯಾಗಿದ್ದು, ಅದರಲ್ಲಿ ಮಂಜೂರಾಗಿದ್ದ ಸ್ಮಶಾನದ ಭೂಮಿಯನ್ನು ಕೂಡ ಅಕ್ರಮವಾಗಿ ಮಣ್ಣು ಅಗೆದು ಸಾಗಾಟ ಮಾಡಲಾಗಿದೆ. ಇದರ ವಿರುದ್ಧ ಹಲವಾರು ಬಾರಿ ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ, ಕ್ರಮ ಕೈಗೊಳ್ಳುತ್ತಿಲ್ಲ. ಈ ಕೂಡಲೇ ಅಕ್ರಮದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸುಮಾರು 30-40 ವರ್ಷಗಳಿಂದಲೂ ಸ್ಮಶಾನ ಜಾಗದಲ್ಲಿ ನಮ್ಮ ಪೂರ್ವಜರ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿದ್ದೇವೆ. ಆ ಜಾಗವನ್ನು ಸ್ಮಶಾನವಾಗಿ ಮಂಜೂರು ಮಾಡದೇ, ಅಳತೆಯ ನಂತರ ಮಂಜೂರಾಗಿರುವ ಜಾಗವನ್ನು ಬೇರೆ ಕಡೆಯಿಂದ ತೋರಿಸುತ್ತಿದ್ದು, ಈಗಾಗಲೇ 30-40 ವರ್ಷಗಳಿಂದ ಅಂತ್ಯ ಸಂಸ್ಕಾರ ಮಾಡಿಕೊಂಡು ಬಂದಿರುವ ಜಾಗವನ್ನೇ ಸ್ಮಶಾನವಾಗಿ ಗುರುತಿಸಿ ಕೊಡಬೇಕು. ಈ ಬಗ್ಗೆ ಅಳತೆ ಮಾಡಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ “30-40 ವರ್ಷಗಳಿಂದ ಅಂತ್ಯ ಸಂಸ್ಕಾರ ಮಾಡಿಕೊಂಡು ಬಂದಿದ್ದ ದಲಿತರ ಸ್ಮಶಾನದ ಭೂಮಿಯನ್ನು ಅಕ್ರಮವಾಗಿ ಅಗೆದು ಅಸ್ತಿಪಂಜರಗಳನ್ನು ನಾಶ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಅಧಿಕಾರಿಗಳು ರಕ್ಷಿಸುತ್ತಿದ್ದಾರೆ. ಅಲ್ಲದೆ ಈಗ ಸ್ಮಶಾನದ ಜಾಗವನ್ನು ಬೇರೆಡೆ ತೋರಿಸುತಿದ್ದಾರೆ. ಈ ಕೂಡಲೇ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಹಿಂದಿನಿಂದಲೂ ಅಂತ್ಯ ಸಂಸ್ಕಾರ ಮಾಡಿಕೊಂಡು ಬಂದಿರುವ ಸ್ಮಶಾನದ ಜಾಗವನ್ನೇ ಮಂಜೂರು ಮಾಡಬೇಕು. ಅಕ್ರಮ ಗೋಮಾಳ, ಕೆರೆ, ಸ್ಮಶಾನ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು” ಎಂದು ಒತ್ತಾಯಿಸಿದರು.

‘ಕೆಲದಿನಗಳ ಹಿಂದೆ ಅಳತೆಗೆ ಬಂದಿದ್ದ ಭೂ ಮಾಪಕರು ಭೂಮಾಪನಕ್ಕೆ ಬೇಕಾದ ಗೋಮಾಳದ ಆಕಾರ (ನೀಲಿ ನಕ್ಷೆ) ಚೆಕ್ಕುಬಂದಿ, ಟಿಪ್ಪಣಿ, ಸುತ್ತಮುತ್ತಲಿನ ಪಹಣಿ, ಇತರೆ ಸಾಮಾಗ್ರಿಗಳಿಲ್ಲದೆ ಉತ್ತಮ ಉಪಕರಣಗಳಲ್ಲದೆ, ಸರಿಯಾಗಿ ಅಳತೆ ಮಾಡದೇ, ಗ್ರಾಮಸ್ಥರು ಸಹಕಾರ ನೀಡಲಿಲ್ಲ ಎಂದು ಹಿಂತಿರುಗಿದ್ದಾರೆ. ಡಿಜಿಟಲ್ ಉಪಕರಣಗಳನ್ನು ಉಪಯೋಗಿಸಿ, ಪ್ರಾಮಾಣಿಕವಾಗಿ ಅಳತೆ ಮಾಡುವ ಅಧಿಕಾರಗಳ ಮೂಲಕ ಹದ್ದುಬಸ್ತು ಮಾಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆಎಂ ಗಂಗಾಧರ ಸ್ವಾಮಿ, ‘ಗೋಮಾಳ ಮತ್ತು ಕೆರೆಯನ್ನು ಅಳತೆ ಮಾಡಿಸಿ ಒತ್ತುವರಿ ತೆರವುಗೊಳಿಸಿ, ಹದ್ದುಬಸ್ತುಗೊಳಿಸಲು ತಹಸೀಲ್ದಾರ್, ಭೂಮಾಪನ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಕ್ರಮವಾಗಿ ಮಣ್ಣು ಅಗೆದು ಸಶ್ಮಾನ, ಸಮಾಧಿಗಳನ್ನು ವಿರೂಪಗೊಳಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪಿ.ಲಂಕೇಶ್ ಹೆಸರಲ್ಲ, ಕರ್ನಾಟಕದಲ್ಲಿ ಜರುಗಿದ ವಿದ್ಯಮಾನ; ಪ್ರಾಧ್ಯಾಪಕ ಬಿ.ಎಲ್.ರಾಜು
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಗ್ರಾಮಸ್ಥರಾದ ಮಂಜುನಾಥ ವೈ.ಕಬ್ಬೂರು, ಚಂದ್ರಪ್ಪ, ಎನ್.ಎಂ.ಕೊಟ್ಯಪ್ಪ, ಕೆ.ಪಿ.ರಾಮಸ್ವಾಮಿ, ಧರ್ಮಣ್ಣ, ಪ್ರಸನ್ನ, ರಾಮಸ್ವಾಮಿ ಎಲ್.ಪಿ., ಎನ್.ಶಿವಕುಮಾರ್, ದೇವರಾಜ್, ಎನ್.ಎಂ.ಕೋಟಿ, ಪುಟ್ಟಮ್ಮ , ಲಲಿತಮ್ಮ ಪ್ರೇಮಮ್ಮ, ಅಂಜಿನಮ್ಮ, ಗೀತಮ್ಮ, ಬಸವರಾಜ್ ಗೋಶಾಲೆ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.