ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜಯಂತಿ ಕಾರ್ಯಕ್ರಮವನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಅಂಬೇಡ್ಕರ್ ರವರ ಕುರಿತು ಹಲವು ಪುಸ್ತಕಗಳ ಪ್ರಮುಖ ಸಾರಾಂಶಗಳಿರುವ “ಅರಿವೇ ಅಂಬೇಡ್ಕರ” ಈದಿನ ಡಾಟ್ ಕಾಮ್ ಮಾಧ್ಯಮದ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು ‘ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ತಮ್ಮ ಭಾಷಣ ಮತ್ತು ಕೃತಿಗಳ ಹಲವು ಪುಸ್ತಕಗಳ 19 ಸಂಪುಟಗಳಿದ್ದು, ಅವುಗಳ ಪ್ರಮುಖ ವಿಚಾರಧಾರೆ ಮತ್ತು ಸಾರಾಂಶಗಳನ್ನು ಈದಿನ.ಕಾಂ “ಅರಿವೇ ಅಂಬೇಡ್ಕರ” ಹೆಸರಿನಲ್ಲಿ ವಿಶೇಷ ಸಂಚಿಕೆ ಹೊರತಂದಿದ್ದು, ಡಾ.ಅಂಬೇಡ್ಕರ್ 134 ನೇ ಜಯಂತಿ ಆಚರಣೆ ಸುಸಂದರ್ಭದಲ್ಲಿ ಅದನ್ನು ನಮ್ಮಲ್ಲಿ ಬಿಡುಗಡೆಗೊಳಿಸುತ್ತಿದ್ದೇವೆ. ವಿಶ್ವ ಕಂಡ ಮಹಾಜ್ಞಾನಿ ಅಂಬೇಡ್ಕರ್ ಭಾರತಕ್ಕೆ ಸಂವಿಧಾನವನ್ನು ಕೊಡುಗೆ ನೀಡಿದ್ದಾರೆ. ಅದು ಸಮಾಜದ ಎಲ್ಲರ ಕಟ್ಟಕಡೆಯ ವ್ಯಕ್ತಿಗೂ ಕೂಡ ಸಾಮಾಜಿಕ ಗೌರವ, ಸಮಾನತೆ, ನ್ಯಾಯ ಮತ್ತು ಸಮಪಾಲು ಸಮಬಾಳನ್ನು ನೀಡುವ ಸಾರ್ಥಕ ಉದ್ದೇಶ ಹೊಂದಿದೆ’ ಎಂದು ಗೌರವ ನಮನ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂಭ್ರಮದ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ‘ಅರಿವೇ ಅಂಬೇಡ್ಕರ’ ವಿಶೇಷ ಸಂಚಿಕೆ ಬಿಡುಗಡೆ.
ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ, ಆವರಗೆರೆ ಚಂದ್ರು ಮತ್ತು ಜಿಲ್ಲಾ ಸಹಕಾರ್ಯದರ್ಶಿ ಹೆಚ್.ಜಿ. ಉಮೇಶ್, ಐರಣಿ ಚಂದ್ರು, ಬಾನಪ್ಪ, ಸರೋಜಾ, ವಿ ಲಕ್ಷ್ಮಣ್ ಸೇರಿದಂತೆ ಹಲವರು ಹಾಜರಿದ್ದರು.