ದಾವಣಗೆರೆ | ಆಧುನಿಕ ಸಮಾಜದ ಜಾತಿ ಕದನಗಳಿಂದ ಮುಕ್ತಿ ಹೊಂದಲು ವಚನಗಳಿಂದ ಸಾದ್ಯ; ವಿರಕ್ತಮಠದ ಬಸವಪ್ರಭು ಶ್ರೀ

Date:

Advertisements

ಆಧುನಿಕ ಸಮಾಜದಲ್ಲಿ ಆಸ್ತಿ, ಹಣ, ಅಂತಸ್ತು, “ಅಧಿಕಾರಕ್ಕಾಗಿ, ಜಾತಿಗಾಗಿ, ಧರ್ಮಕ್ಕಾಗಿ ಕದನಗಳು ಹೆಚ್ಚಾಗಿವೆ. ಇವುಗಳಿಂದ ಮುಕ್ತಿ ಹೊಂದಲು ವಚನಗಳ ಅನುಷ್ಠಾನದ ಅವಶ್ಯವಿದೆ. ಬಸವಾದಿ ಶಿವ ಶರಣರ ವಚನಗಳು ನಮ್ಮ ಬದುಕಿನಲ್ಲಿ ಪಚನವಾದರೆ ಕದನವಿರುವುದಿಲ್ಲ”ಎಂದು ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ದಾವಣಗೆರೆ ನಗರದ ವಿರಕ್ತಮಠದಲ್ಲಿ ಬಸವಕೇಂದ್ರ ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣ ಮಾಸದ 115 ನೇ ವರ್ಷದ ವಚನಾನುಷ್ಠಾನ ಪ್ರವಚನದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು “ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬಸವಾದಿ ಶರಣರ ವಚನಗಳ ಅಧ್ಯಯನ ಮಾಡುವ ಮೂಲಕ ಚಾಚೂ ತಪ್ಪದೇ ಅಳವಡಿಸಿಕೊಳ್ಳುವುದರಿಂದ ಸಮ ಸಮಾಜ ನಿರ್ಮಾಣ ಸಾಧ್ಯ” ಎಂದರು.

“ಪ್ರಸ್ತುತ ದೇಶ ದೇಶಗಳ ನಡುವೆ ನಡೆಯುತ್ತಿರುವ ಕದನಗಳಿಗೆ ವಿರಾಮ ನೀಡಲು ವಚನಗಳು ಅವಶ್ಯ. ಬಸವಾದಿ ಶರಣರ ವಚನ ನಮಗೆ ಪಚನವಾದರೆ ಕದನ ಇರುವುದಿಲ್ಲ. ಬದಲಾಗಿ ಸ್ವರ್ಗ ನಿರ್ಮಾಣ ವಾಗುತ್ತದೆ. ಸತ್ತ ನಂತರ ಮಾನವ ಸ್ವರ್ಗ, ನರಕವನ್ನು ಕಾಣುವುದಿಲ್ಲ. ಬದಲಿಗೆ ಮಾನವನು ಜೀವಂತವಾಗಿರುವಾಗ ಸ್ವರ್ಗ ನರಕವನ್ನು ನಿರ್ಮಿಸಿಕೊಳ್ಳಲು ಸಾಧ್ಯ ಎಂಬುದನ್ನು ಬಸವಣ್ಣನವರ ಆಚಾರವೇ ಸ್ವರ್ಗ, ಅನಾಚಾರವೇ ನರಕ ವಚನ ಹೇಳುತ್ತದೆ. ಹಾಗಾಗಿ ವಚನಗಳನ್ನು ಓದುವುದು ಅಷ್ಟೇ ಅಲ್ಲದೇ ನಾವು ಬದುಕಿನಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು” ಎಂದರು.

Advertisements

“ವಚನಗಳನ್ನು ಪಾಲಿಸಿದಾಗ ನಮಗೆ ಅರಿವು, ಆಚಾರ, ಅನುಭಾವದಿಂದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ, ಜೀವನದಲ್ಲಿ ಸುಧಾರಣೆ, ಮನೆಯಲ್ಲಿಯ ಸಂಸ್ಕಾರಗಳ ಬೆಳವಣಿಗೆ, ತನ್ಮೂಲಕ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಬದುಕಿಗೆ ಮುಖ್ಯವಾಗಿ ಸಮಾಧಾನ ಸಿಗುತ್ತದೆ. ನಮ್ಮ ಜೀವನ ಶ್ರೇಷ್ಠವಾಗಲು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಈ ಸಪ್ತಶೀಲ ವಚನ ಪಾಲಿಸಿದರೆ ಸಾಕು, ಬದುಕು ದಿವ್ಯ ಮತ್ತುಭವ್ಯವಾಗಲಿದೆ” ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ “ಶರಣರ ಒಂದೊಂದು ವಚನದಲ್ಲೂ ಜೀವನ ಮೌಲ್ಯ, ಪ್ರೀತಿ ಇದೆ. ಆದರ್ಶ ಜೀವನವಿದೆ. ನಾನೂ ಕೂಡ ಮಠ ಮಾನ್ಯಗಳಲ್ಲಿ ವಿದ್ಯಾಭ್ಯಾಸ ಮಾಡುವಾಗ ವಚನಗಳನ್ನು ಅಧ್ಯಯನ ಮಾಡಿದ್ದೇನೆ. ವಚನಗಳ ಅಧ್ಯಯನದಿಂದ ಜ್ಞಾನರ್ಜನೆ ವೃದ್ಧಿಯಾಗುತ್ತದೆ” ಎಂದು ನೆನಪಿಸಿಕೊಂಡರು.

“ಯುವಜನತೆ ಒತ್ತಡ, ಮಾನಸಿಕ ತಳಮಳದಿಂದ ಬಳಲುತ್ತಿದೆ. ವಚನ ಸಾಹಿತ್ಯ, ಮಹಾತ್ಮರ ಆತ್ಮಚರಿತ್ರೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವಚನಗಳ ಅಧ್ಯಯನದಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಮೊಬೈಲ್ ಬಿಟ್ಟು ಅಧ್ಯಯನ, ಕ್ರೀಡೆಯಲ್ಲಿ ತೊಡಗಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಮಾಜಿ ಯೋಧರಿಂದ ಹೊನ್ನಾಳಿ ಸೈನಿಕ ಪ್ರತಿಮೆ ಬಳಿ ಕಾರ್ಗಿಲ್ ವಿಜಯೋತ್ಸವ ಮತ್ತು ಬೈಕ್ ರ್ಯಾಲಿ

ಕಾರ್ಯಕ್ರಮದಲ್ಲಿ ‘ವಚನಾನುಷ್ಠಾನ’ ಕುರಿತು ಪಂಚಾಕ್ಷರಿ ಶಾಸ್ತ್ರಿಗಳು ಪ್ರವಚನ ಆರಂಭಿಸಿದರು. ಧೂಡ ಅಧ್ಯಕ್ಷ ದಿನೇಶ್ ಶೆಟ್ಟಿ, ಬಸವಕೇಂದ್ರ- ಮುರುಘರಾಜೇಂದ್ರ ವಿರಕ್ತಮಠ ಹಾಗೂ ಶಿವಯೋಗಾಶ್ರಮ ಟ್ರಸ್ಟಿನ ಪದಾಧಿಕಾರಿಗಳಾದ ಎಂ. ಜಯಕುಮಾರ್, ಹಾಸಬಾವಿ ಕರಿಬಸಪ್ಪ, ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶ್, ದಾನಯ್ಯ, ನಸೀರ್ ಅಹಮದ್‌, ಅಂದನೂರು ಮುಪ್ಪಣ್ಣ, ಚಿಗಟೇರಿ ಜಯದೇವ್, ಮಂಜುನಾಥ್ ಸ್ವಾಮಿ, ಮಹದೇವಮ್ಮ, ವೀರಯ್ಯ ಕಾಡದೇವರ ಮಠ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X