ಅಕ್ರಮವಾಗಿ ಆಸ್ತಿಗಳಿಕೆ ಆರೋಪದ ಮೇಲೆ ರಾಜ್ಯ ಆಹಾರ ಸುರಕ್ಷತೆ ಇಲಾಖೆಯ ದಾವಣಗೆರೆ ಆಹಾರ ನಿರೀಕ್ಷಕ ಡಾ.ನಾಗರಾಜ್ ಅವರ ಕಚೇರಿ, ನಿವಾಸ, ಫಾರ್ಮ್ ಹೌಸ್ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ.
ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಭವನದ ಬಳಿಯಿರುವ ಡಾ.ನಾಗರಾಜ್ ಅವರ ನಿವಾಸದ ಮೇಲೆ ಲೋಕಾಯುಕ್ತ ಎಸ್‌ಪಿ ಎಂ ಎಸ್ ಕೌಲಾಪುರೆ, ಲೋಕಾಯುಕ್ತ ನಿರೀಕ್ಷಕ ಪ್ರಭು ನೇತೃತ್ವದಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ ಆಹಾರ ನಿರೀಕ್ಷಕಗೆ ಶಾಕ್ ನೀಡಿದ್ದಾರೆ. ಡಾ.ನಾಗರಾಜ್ ದಾವಣಗೆರೆ ಆಹಾರ ಸುರಕ್ಷತೆ ಇಲಾಖೆ(ಎಫ್‌ಎಎಸ್‌ಎಸ್‌ಎಐ)ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೋಮಾಳ, ಸ್ಮಶಾನ ಅಳತೆಗೆ ಆಗಮಿಸಿದ ಅಧಿಕಾರಿಗಳೊಂದಿಗೆ ಗ್ರಾಮಸ್ಥರ ವಾಗ್ವಾದ.
ದಾಳಿ ಸಂದರ್ಭ ಎಷ್ಟು ಪ್ರಮಾಣದ ಚಿನ್ನ, ನಗದನ್ನು ವಶಪಡಿಸಿಕೊಂಡಿದ್ದಾರೆಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಆದರೆ ದಾಳಿಯ ವೇಳೆ ಅಪಾರ ಪ್ರಮಾಣದ ಚಿನ್ನ, ನಗದು ಸೇರಿದಂತೆ ವಿವಿಧ ವಸ್ತುಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
