ದಾವಣಗೆರೆ | ಹಣದ ಅವ್ಯವಹಾರ ಕರ್ತವ್ಯಲೋಪ; ಮಹಾನಗರ ಪಾಲಿಕೆ ದ್ವಿತೀಯ ದರ್ಜೆ ಸಹಾಯಕಿ ಅಮಾನತು

Date:

Advertisements

ದಾವಣಗೆರೆ ಮಹಾನಗರ ಪಾಲಿಕೆಯ ವಲಯ ಕಚೇರಿ-2ರಲ್ಲಿ ಜಿಲ್ಲಾಧಿಕಾರಿಗಳ ಪರಿಶೀಲನೆ ಭೇಟಿ ವೇಳೆ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೂಪಾ ಹೆಚ್ ನಗದು ವಹಿಯಲ್ಲಿ ತಪ್ಪು ನಮೂದು, ತಪಾಸಣೆ ನಡೆಸಿದ ವೇಳೆ ಅಸಹಕಾರ ಮತ್ತು ಅನಧಿಕೃತ ವ್ಯಕ್ತಿಯನ್ನು ಸಹಕಾರಕ್ಕಾಗಿ ನೇಮಿಸಿಕೊಂಡಿರುವ ಆರೋಪದ ಮೇಲೆ ಕರ್ತವ್ಯ ಲೋಪವೆಂದು ಪರಿಗಣಿಸಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅಮಾನತು ಮಾಡಿ ಆದೇಶಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ “ಎ” ಖಾತಾ ಮತ್ತು “ಬಿ” ಖಾತಾ ಆಂದೋಲನದ ಪ್ರಗತಿ ಕುರಿತು ಜೂನ್ 6 ರಂದು ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ದ್ವಿತೀಯ ದರ್ಜೆ ಸಹಾಯಕಿ ಕು. ರೂಪಾ ಹೆಚ್ ಮಹಾನಗರಪಾಲಿಕೆಯ ವಲಯ ಕಛೇರಿ-2 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವಲಯ ಕಛೇರಿ-2 ರಲ್ಲಿ ನಿರ್ವಹಿಸಲಾಗುತ್ತಿರುವ ನಗದು ವಹಿಯಲ್ಲಿ ನೌಕರಳು ತನ್ನ ಬಳಿ ರೂ.500 ಇರುವುದೆಂದು ಘೋಷಿಸಿಕೊಂಡಿರುತ್ತಾರೆ. ಆದರೆ ನೌಕರರನ್ನು ತಪಾಸಣೆ ನಡೆಸಿದ ಸಮಯದಲ್ಲಿ ಇವರ ಬಳಿ ರೂ 3600/- ಗಳ ಹಣ ಕಂಡುಬಂದಿದೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ| ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್ಓ ಸಹಿ ಸಂಗ್ರಹ ಅಭಿಯಾನ

Advertisements

ಅಲ್ಲದೇ ತಾನು ನಿರ್ವಹಿಸುತ್ತಿರುವ ಶಾಖಾ ಕಛೇರಿಯಲ್ಲಿ ಅನಧಿಕೃತ ವ್ಯಕ್ತಿಯಿಂದ ತನ್ನ ಕೆಲಸ, ಕರ್ತವ್ಯವನ್ನು ಮಾಡಿಸುತ್ತಿದ್ದುದು ಕಂಡು ಬಂದಿದ್ದು ಇದು ಸಹ ಕೆ.ಸಿ.ಎಸ್.ಆರ್ ಮತ್ತು ನಡೆತ ನಿಯಮಗಳ ವಿರುದ್ಧವಾದ ಕ್ರಮವಾಗಿರುತ್ತದೆ. ಪರಿಶೀಲನೆ ವೇಳೆ ತಾನು ಘೋಷಿಸಿದಕ್ಕಿಂತ ಹೆಚ್ಚಾಗಿರುವ ಹಣದ ಕುರಿತು ವಿವರಣೆ ನೀಡುವಲ್ಲಿ ಹಾಗೂ ತಪಾಸಣೆ ನಡೆಸಲು ಅಸಹಕಾರ ತೋರಿದ್ದರಿಂದ, ನೌಕರಳ ಬಳಿ ಲಭ್ಯವಿರುವ ಹಣವು ಲಂಚದ ಹಣವಾಗಿರಬಹುದೆಂದು ಪರಿಗಣಿಸಲಾಗಿದೆ ಅಮಾನತು ಎಂದು ಆದೇಶದಲ್ಲಿ ತಿಳಿಸಲಾಗಿದೆ.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ನಾಗಮೋಹನ ದಾಸ್ ಆಯೋಗದ ವೈಜ್ಞಾನಿಕ ಒಳಮೀಸಲಾತಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ನ್ಯಾ.ನಾಗಮೋಹನ ದಾಸ್ ಆಯೋಗದ ಒಳಮೀಸಲಾತಿ ವರದಿಯು ವೈಜ್ಞಾನಿಕವಾಗಿದ್ದು, ಪ್ರಸ್ತುತ ಅಧಿವೇಶನದಲ್ಲಿ ಜಾರಿಗೊಳಿಸಬೇಕು...

ದಾವಣಗೆರೆ | ದಲಿತ ಸಂಘಟನೆಗಳ ಒಳಮೀಸಲಾತಿ ಪ್ರತಿಭಟನೆ; ಎಸಿ ಕಛೇರಿಗೆ ಬೀಗ

"ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಒಂದು ವರ್ಷವಾದರೂ ಒಳಮೀಸಲಾತಿಯನ್ನು ಜಾರಿ ಮಾಡುವಲ್ಲಿ...

ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಹರಿಹರದಲ್ಲಿ ಆ.18ಕ್ಕೆ ಪ್ರತಿಭಟನೆ

ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ,...

Download Eedina App Android / iOS

X