ಪಹಲ್ಗಾಮ್ ಭಯೋತ್ಪಾದಕ ದಾಳಿ ಹೇಯಕೃತ್ಯ, ಇದನ್ನು ಖಂಡಿಸುತ್ತೇವೆ. ಮತ್ತು ಸಾವಿಗೀಡಾದ ಪ್ರವಾಸಿಗರ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ದಾವಣಗೆರೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡ ಸತೀಶ್, “ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಬೈಸರನ್ ಕಣಿವೆಯ ಪಹಲ್ಗಾಮ್ ಎಂಬ ರೆಸಾರ್ಟ್ ನಲ್ಲಿ ಏಪ್ರಿಲ್ 22 ರಂದು ಮಧ್ಯಾಹ್ನ 2:30 ರ ಸುಮಾರಿಗೆ ಕಣಿವೆ ನೋಡಲು ಬಂದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವುದನ್ನು ಕರ್ನಾಟಕ ಜನಶಕ್ತಿ ಯು ತೀವ್ರವಾಗಿ ಖಂಡಿಸುತ್ತದೆ. ಪ್ರವಾಸಿಗರ ಮೇಲೆ ಭಯೋತ್ಪಾದಕ ಕೃತ್ಯ ನಡೆಸಿ, 26 ಜನರ ಕೊಲೆ ಮಾಡಿದ ಭಯೋತ್ಪಾದಕರನ್ನು ಬೇಗನೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಮತ್ತು ದಾಳಿಗೀಡಾದ ಪ್ರವಾಸಿಗರ ಪ್ರತಿ ಕುಟುಂಬಕ್ಕೆ ಉದ್ಯೋಗ ಸೇರಿದಂತೆ ಸೂಕ್ತ ಪರಿಹಾರವನ್ನು ನೀಡಬೇಕು” ಎಂದು ಒತ್ತಾಯಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಸೂಕ್ತ ಕ್ರಮ ಮತ್ತು ಪರಿಹಾರಕ್ಕಾಗಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ದೇಶದಲ್ಲಿ ಬೌದ್ಧಿಕ ವಲಯವೂ ಕೂಡ ಜಾತಿ, ಧರ್ಮ, ಪಕ್ಷಗಳಾಗಿ ವಿಭಜಿತ ಗೊಂಡಿದೆ; ನಾಡೋಜ ಬರಗೂರು ರಾಮಚಂದ್ರಪ್ಪ.
ಪ್ರತಿಭಟನೆಯಲ್ಲಿ ಆದಿಲ್ ಖಾನ್, ರವೀಂದ್ರ ಕೆ, ಸೈಯದ್ ಅಶ್ಫಾಕ್, ಸತೀಶ್ ಅರವಿಂದ್, ಬಾಷಾ, ಶೇರ್ ಅಲಿ, ರಾಮ ಆಂಜನೇಯ, ಪವಿತ್ರ, ಮಂಜುನಾಥ್ ಭಾಗವಹಿಸಿದ್ದರು.