ಸರ್ಕಾರವೇ ಐದು ಎಕರೆ ಗೋಮಾಳ ಸಾರ್ವಜನಿಕ ಸ್ಮಶಾನ ಭೂಮಿಗೆ ಮೀಸಲಾಗಿರಿಸಿದ್ದು, ಅಕ್ಕ ಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಮಾಡಿರುವ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದ ಗೋಮಾಳ ಹದ್ದುಬಸ್ತು ಮಾಡಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಾನುವಾರುಗಳ ಮುಖಾಂತರ ತಾಲೂಕು ಕಚೇರಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ದಿಡಗೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
“ಹೊನ್ನಾಳಿ ತಾಲೂಕಿನ ದಿಡಗೂರಿನ ಗ್ರಾಮದಲ್ಲಿ ಒಟ್ಟು 100 ಎಕರೆ ಗೋಮಾಳ ಜಮೀನಿದ್ದು, ಅದರಲ್ಲಿ 30, ಎಕರೆ ಗೋಮಾಳ ಕೆಇಬಿ ಗ್ರಿಡ್- ಕೆ ಪಿ ಟಿ ಸಿ ಎಲ್ ಗೆ ಹಸ್ತಾಂತರ ಮಾಡಿದ್ದಾರೆ. ಇದರಲ್ಲಿ ಸ್ಮಶಾನಕ್ಕೆ ಮಂಜೂರಾದ ಜಮೀನು ಒತ್ತುವರಿಯಾಗಿದೆ.ಇದಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಸುತ್ತು ತಡೆಗೋಡೆ ನಿರ್ಮಾಣ ಮಾಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರು ಇಲ್ಲಿವರೆಗೂ ನಿರ್ಮಾಣ ಮಾಡಿಲ್ಲ” ಎಂದು ಮುಖಂಡರು ಆರೋಪಿಸಿದರು.
“ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡಿದ್ದ ಕಾರಣ ಗ್ರಾಮಸ್ಥರು ಹೆದರಿ ಸ್ಮಶಾನದಲ್ಲಿ ಬಂದು ಅಂತ್ಯಕ್ರಿಯೆ ಮಾಡಿಲ್ಲ. ಹಾಗೆಯೇ ಇನ್ನೂ ಸ್ವಲ್ಪ ಜಮೀನು ಗಳು ಕೆಲವರ ಹೆಸರಿಗೆ ಸರ್ಕಾರ ಬಗರ್ ಹುಕುಂ ಮಂಜೂರು ಮಾಡಲಾಗಿದೆ. ಮತ್ತೆ ಸರ್ಕಾರವು ಬಗುರು ಹುಕುಂ ಮಂಜೂರು ಮಾಡಲು ಮುಂದಾಗಿದ್ದು, ನಮ್ಮ ಗ್ರಾಮದಲ್ಲಿ 700 ಜಾನುವಾರುಗಳು ಇದ್ದು, ಸುಪ್ರೀಂ ಕೋರ್ಟ್ ಆದೇಶ 100 ಜಾನುವಾರುಗಳಿಗೆ ಎರಡುವರೆ ಎಕರೆ ಗೋಮಾಳ ಮೀಸಲು ಇರಬೇಕು ಎಂದು ಕಾನೂನಿದೆ. ಆದರೆ ಇಂದಿನ ಶಾಸಕರು ಕೆಲವರಿಗೆ ಜಮೀನು ಮಂಜೂರು ಮಾಡಲು ಮುಂದಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗ್ರಾಮಸ್ಥರು ಕೆಲವು ತಿಂಗಳ ಹಿಂದೆ ಜಾನುವಾರುಗಳ ಮುಖಾಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಸಂದರ್ಭದಲ್ಲಿ ತಾಲೂಕು
ದಂಡಾಧಿಕಾರಿಗಳು ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಅಂದು ಮುತ್ತಿಗೆ ಕಾರ್ಯಕ್ರಮ ಕೈಬಿಟ್ಟಿದ್ದೆವು. ದಂಡಾಧಿಕಾರಿ ಆದ ನೀವು ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದು ನಿಮ್ಮ ಗಮನಕ್ಕೆ ತಂದು ಶೀಘ್ರ ಒತ್ತುವರಿ ತೆರವು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸುತ್ತೇವೆ” ಎಂದು ದಂಡಾಧಿಕಾರಿ ರಾಜೇಶ್ ರವರಿಗೆ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಾಜಿ ಸೈನಿಕರ ಚಟುವಟಿಕೆಗಳಿಗೆ ಸಭೆಗಳಿಗೆ ಸೈನಿಕರ ಭವನ, ಜಮೀನು ಮಂಜೂರಿಗೆ ಒತ್ತಾಯಿಸಿ ಮನವಿ
ಈ ವೇಳೆ ಗ್ರಾಮಸ್ಥರಾದ ಓ,ಎಚ್ ವೆಂಕಟೇಶ್, ಶಿವಮೂರ್ತಿ, ಹನುಮಂತಪ್ಪ, ಟಿ, ಕಾಂತರಾಜು ಎಂ,ಗುಡ್ಡೇಶ,ವಿ, ಧರ್ಮಪ್ಪ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ; ಪ್ರಭಾಕರ್ ಡಿ ಎಂ