ದಾವಣಗೆರೆ | ಸಂಚಾರ ನಿಯಮ ಉಲ್ಲಂಘನೆ : ಶಾಲಾ ಬಸ್, ಆಟೋ, ವಾಹನಗಳಿಗೆ ದಂಡ

Date:

Advertisements

ದಾವಣಗೆರೆ ನಗರದ ವಿವಿಧ ವೃತ್ತಗಳಲ್ಲಿ ಪೊಲೀಸ್ ಇಲಾಖೆ ಶಾಲಾ ಕಾಲೇಜಿನ ಬಸ್‍ಗಳು ಹಾಗೂ ಆಟೋ, ವ್ಯಾನ್‍ಗಳ ಪರಿಶೀಲನೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರು, ಸವಾರರ ಮೇಲೆ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಡ್ರಂಕ್ ಅಂಡ್ ಡ್ರೈವ್, ವಾಹನ ಚಾಲನಾ ಪರವಾನಿಗೆ, ವಾಹನದ ದಾಖಲಾತಿಗಳು, ನೋಂದಣಿ ಫಲಕ, ಅತಿ ವೇಗದ ಚಾಲನೆ, ಅಪಾಯಕಾರಿ ಚಾಲನೆ, ಹೆಚ್ಚು ಶಾಲಾ ಮಕ್ಕಳನ್ನು ಹತ್ತಿಸಿಕೊಂಡು ಮತ್ತು ವಾಹನದಲ್ಲಿ ಜಿ.ಪಿ.ಎಸ್, ಸಿಸಿ ಕ್ಯಾಮಾರ ಅಳವಡಿಕೆ, ಬಗ್ಗೆ ಪರಿಶೀಲನೆ ಮಾಡಿದರು.

ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಂಚಾರ, ಎರಡು ಪೊಲೀಸ್ ಠಾಣೆಯಿಂದ ಒಟ್ಟು 77 ಶಾಲಾ ವಾಹನಗಳನ್ನು ಪರಿಶೀಲನೆ ಮಾಡಿದ್ದು, ಅದರಲ್ಲಿ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯತ್ತಿದ್ದ 38 ವಾಹನದ ಚಾಲಕರ ಮೇಲೆ ಪ್ರಕರಣ ದಾಖಲು ಮಾಡಿ 9200 ದಂಡ ವಿಧಿಸಿದರು.

Advertisements

ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡಿದ 13 ಶಾಲಾ ವಾಹನ ಚಾಲಕರಿಗೆ 6500 ದಂಡವಿಧಿಸಿದ್ದಾರೆ. ಸಿಗ್ನಲ್ ಜಂಪ್ ಮಾಡಿದ 03 ಪ್ರಕರಣಗಳನ್ನು ದಾಖಲಿಸಿ 1500 ದಂಡ ವಿಧಿಸಲಾಗಿದೆ.

ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಅಣ್ಣಯ್ಯ ಬಿ.ಎಸ್ ಹಾಗೂ ಪೊಲೀಸ್ ಕಾನ್ ಸ್ಟೇಬಲ್ ಡಿ. ನೂರ್ ಅಹ್ಮದ್, ಹಾಗೂ ಉಮೇಶ ಅಜ್ಜೊಳ ರವರು ದಕ್ಷಿಣ ಸಂಚಾರ ಠಾಣಾ ಸರಹದ್ದಿನ ಸಾರ್ವಜನಿಕ ರಸ್ತೆಯಲ್ಲಿ ಮದ್ಯಪಾನ ಮಾಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಚಾಲಕನ ಮೇಲೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

1002532223

ಎಫ್.ಸಿ ಇಲ್ಲದ ಶಾಲಾ ಬಸ್ಸನ್ನು ಜಪ್ತು ಮಾಡಿ ಮುಂದಿನ ಕ್ರಮ ಜರುಗಿಸಲು ಆರ್.ಟಿ.ಓ ರವರಿಗೆ ನೀಡಿದೆ. ಜಿಲ್ಲೆಯಾದ್ಯಂತ ಯಾವುದೇ ಶಾಲಾ ಮತ್ತು ಕಾಲೇಜ್ ವಾಹನ ಚಾಲಕರು ಕುಡಿದು ವಾಹನಗಳನ್ನು ಚಲಾಯಿಸದಂತೆ, ಮತ್ತು ವಾಹನಗಳ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ಸುರಕ್ಷಿತವಾಗಿ ಚಾಲನೆ ಮಾಡಲು ಸೂಚಿಸಲಾಗಿದೆ. ವಾಹನ ಅಧಿನಿಯಮ ಉಲ್ಲಂಘಿಸುವ ಶಾಲಾ/ಕಾಲೇಜ್ ಚಾಲಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತಗೆದುಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗದಲ್ಲಿ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ: ಕುರಿಗಾಹಿಯಿಂದ ಧ್ವಜಾರೋಹಣ

ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್.ಪಿ. ಶರಣಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ನಲುವಾಗಲು ಮಂಜುನಾಥ ಸಿಪಿಐ ನೇತೃತ್ವದಲ್ಲಿ ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಂಚಾರ ಠಾಣೆಯ ಪಿಎಸ್.ಐಗಳಾದ ಶೈಲಜಾ, ಕೆ.ಎನ್. ಮಹಾದೇವ ಭತ್ತೆ, ಜಯಶೀಲಾ ಹಾಗೂ ಎ.ಎಸ್.ಐ ಮುತ್ತು ಸಿಬ್ಬಂದಿಗಳೊಂದಿಗೆ ಗುಂಡಿಸರ್ಕಲ್,ಅಂಬೇಡ್ಕರ್ ಸರ್ಕಲ್, ಅರುಣ ಸರ್ಕಲ್, ನಿಜಲಿಂಗಪ್ಪ ಸರ್ಕಲ್, ಸಮುಧಾಯ ಭವನ ಸರ್ಕಲ್ ಶಾಮನೂರು ರಸ್ತೆ, ಹದಡಿ ರಸ್ತೆ, ಎಂ.ಜಿ. ಸರ್ಕಲ್, ಆವರಗೆರೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಆರ್.ಎಂ.ಸಿ ಲಿಂಕ್ ರಸ್ತೆ, ಕೆ.ಆರ್. ರಸ್ತೆ, ಹೊಂಡದ ಸರ್ಕಲ್ , ಅಕ್ತರ್ ರಜಾ ಸರ್ಕಲ್, ಆರ್.ಟಿ.ಓ ಸರ್ಕಲ್ , ಬೇತೂರು ರಸ್ತೆ ಗಳಲ್ಲಿ ವಿಶೇಷ ಕಾರ್ಯಚರಣೆ ನಡೆಸಲಾಯಿತು.‌

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಹಿರೇಗಂಗೂರು ಡಾ.ಬಿಆರ್ ಅಂಬೇಡ್ಕರ್ ಪ್ರತಿಮೆ ಬಳಿ ಹಾಗೂ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರು ಗ್ರಾಮದಲ್ಲಿರುವ ಸಂವಿಧಾನ ಶಿಲ್ಪಿ ಡಾ....

ದಾವಣಗೆರೆ | ಸ್ವಾತಂತ್ರ್ಯೋತ್ಸವ ದಿನ ಒಳಮೀಸಲಾತಿ ವಿಳಂಬ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಆಕ್ರೋಶ; ದಲಿತ ಮುಖಂಡರ ಬಂಧನ

ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ, ಸುಪ್ರೀಂಕೋರ್ಟ್ ಒಳಮೀಸಲಾತಿ ಆದೇಶವಾಗಿ ಒಂದು ವರ್ಷವಾದರೂ...

Download Eedina App Android / iOS

X