ದಾವಣಗೆರೆ ವಿಶ್ವವಿದ್ಯಾಲಯದಿಂದ ಅನುವಾದ ಕೌಶಲ್ಯ ತರಬೇತಿ ಶಿಬಿರ

Date:

ದಾವಣಗೆರೆಯ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಹಾಗೂ ಭಾರತೀಯ ಭಾಷಾ ಕೇಂದ್ರ ಜಂಟಿಯಾಗಿ ಆಯೋಜಿಸಿರುವ ಕನ್ನಡ, ತೆಲುಗು, ಉರ್ದು ಸೇರಿದಂತೆ ಭಾರತೀಯ ಭಾಷೆಗಳ ಭಾಷಾಂತರ ಕೌಶಲ್ಯ ತರಬೇತಿ ಶಿಬಿರ ದಾವಣಗೆರೆ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಸಭಾಂಗಣದಲ್ಲಿ ಜರುಗಿತು.

- Advertisement -

ಶಿಬಿರವನ್ನು ಉದ್ಘಾಟಿಸಿದ ಲೇಖಕಿ ಹಾಗೂ ಅನುವಾದಕಿ ಡಾ. ಅನುರಾಧ ಪಿ ಎಂ ಅವರು ಅನುವಾದದ ಇತಿಹಾಸದ ಬಗ್ಗೆ ಮಾತನಾಡಿ, ಅನುವಾದದ ಸ್ವರೂಪ, ವ್ಯಾಪ್ತಿ ಹಾಗೂ ತೊಡಕುಗಳ ಕುರಿತು ಸಾಹಿತ್ಯದ ಉದಾಹರಣೆ ನೀಡಿ ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ ಮಾತುಗಳಿಂದ ಹಾಲಕ್ಕಿಗಳ ಮತ ದೋಚಿ ಗೆದ್ದವರು ಕೃತಘ್ನರಾಗಿದ್ದಾರೆ. ಎಸ್ಟಿ ಮೀಸಲಾತಿ ಸೌಲಭ್ಯ ಅಷ್ಟು ಸುಲಭಕ್ಕೆ ಹಾಕ್ಕಿಗಳಿಗೆ ದಕ್ಕಲು ಪ್ರಬಲ ಮೇಲ್ವರ್ಗದ...

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಸಂಪನ್ಮೂಲ ವ್ಯಕ್ತಿ ಪ್ರೊ. ಬಿ ಎಲ್ ರಾಜು ಮಾತನಾಡಿ, “ಅನುವಾದ ಕೇವಲ ಭಾಷೆಗಳ ಅನುವಾದ ಅಷ್ಟೇ ಅಲ್ಲದೆ, ಕಲ್ಚರಲ್ ಅನುವಾದವೂ ಕೂಡ ತಿಳಿದಿರಬೇಕು. ಭಾಷೆಗಳ ಜತೆಗೆ ಅನುವಾದಕರಿಗೆ ಎರಡು ಭಾಷೆಗಳ ಸಂಸ್ಕೃತಿ, ವಿಭಿನ್ನತೆ ಗೊತ್ತಿರಬೇಕು” ಎಂದು ಅನುವಾದದ ಅಗತ್ಯತೆ ಒತ್ತಿ ಹೇಳಿದರು.

ಭಾಷಾ ತಜ್ಞ ಪ್ರೊ. ಮೇಟಿ ಮಲ್ಲಿಕಾರ್ಜುನ, ಅನುವಾದದ ಪ್ರಮುಖ ಚಿಂತಕರಾದ ವಾಲ್ಟರ್ ಬೆಂಜಾಮಿನ್, ಜಾಕ್ ಧರಿದ, ಗಾಯತ್ರಿ ಸ್ಪೀವಾಕ್, ಹೊಮಿ ಕೆ ಬಾಬಾ, ಡಿ ಆರ್ ನಾಗರಾಜ್, ತೇಜಸ್ವಿನಿ ನಿರಂಜನ್ ಮುಂತಾದ ಚಿಂತಕರು ಅನುವಾದದ ಅಧ್ಯಯನಕ್ಕೆ ನೀಡಿದ ವಿಚಾರಗಳ ಬಗ್ಗೆ ಚರ್ಚಿಸಿದರು. ಭಾರತೀಯ ಅನುವಾದದ ಮಿಷನ್ನಿನ ಡಾ. ಉಷಾ ರಾಣಿ ಅವರು, ರಾಷ್ಟ್ರೀಯ ಅನುವಾದ ಮಿಷನ್ ಕಾರ್ಯಕ್ರಮಗಳು ಹಾಗೂ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿವಿಯ ಕುಲಪತಿ ಡಾ. ವೆಂಕಟೇಶ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಲಸಚಿವ ಎಸ್ ಬಿ ಘಂಟಿ, ಕಲಾ ನಿಕಾಯದ ಡೀನ್ ಪ್ರೊ. ಲೋಕೇಶ್ ಎಂ ಯು, ಇಂಗ್ಲಿಷ್ ವಿಭಾಗದ ಸಂಯೋಜನಾಧಿಕಾರಿ ಡಾ. ಫಕೀರೇಶ ಹಳ್ಳಳ್ಳಿ, ಡಾ ಯಜ್ಞಶ್ರೀ, ಇಂಗ್ಲಿಷ್ ವಿಭಾಗದ ಡಾ ರವಿಕುಮಾರ್ ಕುಂಬಾರ್, ಮದಕರಿ ನಾಯಕ ಹಾಗೂ ಶಿಬಿರಾರ್ಥಿಗಳು ಇದ್ದರು.

ಈ ಸುದ್ದಿ ಓದಿದ್ದೀರಾ? ಜಾಗತಿಕ ಚಿತ್ರರಂಗಕ್ಕೆ ‘ವಾಸ್ತವ’ದ ಹೊಸ ದೃಷ್ಟಿಕೋನ ನೀಡಿದ ಗ್ಲೌಬರ್ ರೋಚಾ ಸಿನೆಮಾಗಳು

ಕನ್ನಡ, ತೆಲುಗು, ಉರ್ದು ಸೇರಿದಂತೆ ಭಾರತೀಯ ಭಾಷೆಗಳ ಭಾಷಾಂತರ ಕೌಶಲ್ಯ ತರಬೇತಿ ಶಿಬಿರವನ್ನು ದಾವಣಗೆರೆಯ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಹಾಗೂ ಭಾರತೀಯ ಭಾಷಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದು ಜೂನ್ 2 ರಿಂದ 4ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕನ್ನರಿಗೆ ಉದ್ಯೋಗ ವಂಚನೆ: ಕ್ಲೌಡೆರಾ ಕಂಪನಿಗೆ ಭಾರಿ ದಂಡ, ಗ್ರೀನ್ ಕಾರ್ಡ್ ಪ್ರೋಗ್ರಾಂನಿಂದ ನಿಷೇಧ

ಅಮೆರಿಕ ಸರ್ಕಾರವು ಸ್ಥಳೀಯ ಕಾರ್ಮಿಕರಿಗೆ ತಾರತಮ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ 'ಕ್ಲೌಡೆರಾ'...

ಶಿರಾಳಕೊಪ್ಪ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಮತಗಳ್ಳತನದ ರೂವಾರಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಯುಪಿ ಚುನಾವಣೆಗೆ ಕಾಂಗ್ರೆಸ್ ಪ್ಲ್ಯಾನ್: ಎಸ್‌ಪಿ ಮುಂದೆ 125+ ಸೀಟುಗಳ ಬೇಡಿಕೆ ಇಡಲು ಪ್ರಿಯಾಂಕಾ ಸಜ್ಜು!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ...

SIR | 14 ಕೋಟಿ ‘ಮತದಾರರು ಕಣ್ಮರೆ’; ಬೆಚ್ಚಿಬೀಳಿಸುವ ಅಂಕಿಅಂಶ!

ಎಸ್‌ಐಆರ್ ವಿವಾದದ ಚರ್ಚೆಗಳಲ್ಲಿ ಎರಡು ವಾದಗಳಿವೆ; ಒಂದು - ಮತಪಟ್ಟಿಯಿಂದ 13.3...