“ರಾಹುಲ್ ಗಾಂಧಿ ಅವರ ಆಪರೇಷನ್ ಸಿಂಧೂರ ಹೇಳಿಕೆಯಂತೆ ಎಲ್ಲರೂ ಒಂದೇ ಮಾತಿನ ಮೇಲೆ ನಿಲ್ಲಬೇಕು. ರಾಷ್ಟ್ರೀಯ ನಾಯಕರ ಮಾತಿನಂತೆ ನೆಡೆಯಬೇಕು. ದೇಶ ಅಂತ ಬಂದಾಗ ನಾವೆಲ್ಲ ಒಗ್ಗಟ್ಟಾಗಿರಬೇಕು” ಎಂದು ದಾವಣಗೆರೆ ಜಿಲ್ಲೆ ಭೇಟಿಯ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಪ್ರತಿಪಾದಿಸಿದರು.
ದಾವಣಗೆರೆ ಜಿಲ್ಲೆ ಹರಿಹರ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅವರ ಆಪರೇಷನ್ ಸಿಂಧೂರ ವಿಚಾರದ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಶಾಸಕರ ಮಾತು ಸರಿಯಲ್ಲ” ಎಂದು ಖಂಡನೆ ವ್ಯಕ್ತಪಡಿಸಿದರು.

“ಹಲವಾರು ವರ್ಷಗಳಿಂದ ಕಂದಾಯ ರಹಿತ ಗ್ರಾಮಗಳ ಜನರಿಗೆ ಕಂದಾಯ ಗ್ರಾಮಗಳನ್ನು ಮಾಡಬೇಕು ಹಾಗೂ ಹಕ್ಕುಪತ್ರ ವಿತರಣೆ ಮಾಡಬೇಕು ಎನ್ನುವುದು ಸುಮಾರು ವರ್ಷಗಳ ಬೇಡಿಕೆಯಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸುತ್ತಿದೆ” ಎಂದರು.
ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಈಡೇರಿಸುತ್ತೇವೆ ಎಂದು ಜನರಿಗೆ ಭರವಸೆ ನೀಡಿದ್ದೆವು. ಅದರಂತೆ ಇಂದು ನಾವು ನಡೆದುಕೊಳ್ಳುತ್ತಿದ್ದೇವೆ. ಪ್ರತಿಯೊಂದು ಗ್ಯಾರಂಟಿಯನ್ನು ಮನೆಬಾಗಿಲಿಗೆ ತಲುಪಿಸಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ನುಡಿದಂತೆ ನಡೆದಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರೇಟರ್ ಬೆಂಗಳೂರು ವಿಚಾರಕ್ಕೆ ಆರ್. ಅಶೋಕ್ ವ್ಯಂಗ್ಯದ ಬಗ್ಗೆ ಪ್ರತಿಕ್ರಿಯಿಸಿ, “ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ” ಅನ್ನೋ ರೀತಿ ವಿರೋಧ ಪಕ್ಷದವರು ವಿರೋಧಿಸುತ್ತಿದ್ದಾರೆ. ಗ್ರೇಟರ್ ಗೂ ಕ್ವಾರ್ಟರ್ ಗೂ ವ್ಯತ್ಯಾಸ ಗೊತ್ತಿಲ್ಲದಿರುವಷ್ಟು ಬುದ್ದಿವಂತ ಅಶೋಕಣ್ಣ” ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕೊಲೆ ಸುಲಿಗೆ ಜಾಸ್ತಿಯಾಗಿದೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಅಸಮಧಾನ ವ್ಯಕ್ತಪಡಿಸಿದ ಹೆಬ್ಬಾಳ್ಳರ್, ಅವರು ಸಿಎಂ ಆದಂತವರು ಅವರಿಗೆ ನಾನೇನು ಹೇಳಲ್ಲ ಪ್ರತಿಕ್ರಿಯಿಸಲು ನಿರಾಕರಿಸಿದರು.
ಇದನ್ನೂ ಓದಿ; ಚಿತ್ರದುರ್ಗ | ಸಾಲಬಾಧೆ, ಬೆಳೆ ಕೈಕೊಟ್ಟದ್ದರಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ
ಕರ್ನಲ್ ಸೋಪಿಯಾ ಖುರೇಷಿ ವಿಚಾರಕ್ಕೆ ಬಿಜೆಪಿ ಸಚಿವರ ಲೇವಡಿ ಖಂಡಿಸಿದ ಲಕ್ಷ್ಮಿ ಹೆಬ್ಬಾಳ್ಳರ್, “ಇಂತಹ ಮನಸ್ಥಿತಿ ಇರುವಂತ ಗಂಡಸರನ್ನು ಕಟುವಾಗಿ ಟೀಕಿಸುತ್ತೇನೆ ಮತ್ತು ಇಂತ ರಾಜಕಾರಣಿಗಳ ಹೇಳಿಕೆ ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ” ಎಂದರು.

ಆಪರೇಷನ್ ಸಿಂಧೂರ ನಡೆಸಿದ ಕೇಂದ್ರ ಸರ್ಕಾರದ ಪರವಾಗಿ ನಾವು ಸದಾ ಇರುತ್ತೇವೆ. ಇದರಲ್ಲಿ ಎರಡೂ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.