ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರ ಮೇಲೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆಯ ಮಾಜಿ ಮೇಯರ್ ಬಿ ಜಿ ಅಜಯ್ ಕುಮಾರ್ ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತಮಿಳುನಾಡಿನ ಮುಖ್ಯಮಂತ್ರಿ ಪುತ್ರ, ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಡಿಎಂಕೆ ಪಕ್ಷದ ಯುವ ಘಟಕದ ಅಧ್ಯಕ್ಷ ಉದಯನಿಧಿ ಸ್ಟಾಲಿನ್ ಅವರು ಓಲೈಕೆ ಮತ್ತು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಈ ರೀತಿಯ ಹೇಳಿಕೆಯನ್ನು ನೀಡಿದ್ದು, ನಮ್ಮ ಸನಾತನ ಧರ್ಮವನ್ನು ಡೆಂಗ್ಯೂ, ಕೊರೊನಾ ಮಲೇರಿಯಾಕ್ಕೆ ಸಮಾನವಾದದ್ದೆಂದು ನೀಡಿರುವ ಹೇಳಿಕೆ ಖಂಡನೀಯ” ಎಂದರು.
“ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಈ ಹಿಂದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲಷ್ಕರ್ ಎ ತೊಯ್ದಾ ಉಗ್ರವಾದಿ ಸಂಘನೆಗಿಂತ ಹಿಂದುತ್ವದ ಸಂಘಟನೆಗಳು ಅಪಾಯಕಾರಿ ಎಂದು 2010ರಲ್ಲಿ ಹೇಳಿದ್ದರು. ಕಾಂಗ್ರೆಸ್, ಡಿಎಂಕೆ ಹಾಗೂ ಐಎನ್‌ಡಿಐಎ ಮೈತ್ರಿಕೂಟ ಸನಾತನ ಧರ್ಮವಾದ ನಮ್ಮ ಹಿಂದುತ್ವದ ನಿರ್ಮೂಲನೆ ಬಗ್ಗೆ ಮಾತನಾಡುತ್ತಾ ದೇಷಿಸುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಸನಾತನ ಧರ್ಮ ವಿವಾದ | ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆ ವಿರುದ್ಧ ದೂರು ದಾಖಲು
ಸನಾತನ ಧರ್ಮದ ವಿರುದ್ಧ ದ್ವೇಷಭಾಷಣ ಮಾಡಿರುವ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಸೂಕ್ತ ತನಿಖೆ ನೆಡೆಸಿ ಕ್ರಮ ಕೈಗೊಳ್ಳಬೇಕು. ದ್ವೇಷದ ಭಾಷಣ ಮಾಡಿರುವ ಉದಯನಿಧಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಕೇಶ್ ಭಜರಂಗಿ, ಗುರುಪ್ರಸಾದ್ ಕೈದಾಳೆ, ರವಿಕಿರಣ್, ಚನ್ನಬಸವನಗೌಡ್ರು, ರಾಜುನೀಲಗುಂದ, ಕೊಟ್ರೇಶ್ ಗೌಡ್ರು, ಪ್ರದೀಪ್ ಇದ್ದರು.