ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಸದಾ ಬದ್ಧನಾಗಿದ್ದೇನೆ. ಅಧಿಕಾರಕ್ಕಿಂತ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಧ್ಯೇಯ. ಸ್ವಚ್ಛ ಆಡಳಿತ ನೀಡುವುದು ನನ್ನ ಗುರಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಅಷ್ಟೂರ ಗ್ರಾಮದಿಂದ ಮಲ್ಕಾಪುರ ವಾಯಾ ದೇವ-ದೇವ ವನ ತನಕ ಸುಮಾರು ₹1ಕೋಟಿ ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ʼನನ್ನ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಕೊಠಡಿ, ಶೌಚಾಲಯ, ಕಾಂಪೌಂಡ್ ನಿರ್ಮಾಣ, ಸಮುದಾಯ ಭವನ, ಸಾರ್ವಜನಿಕ ಶೌಚಾಲಯ, ಯಾತ್ರಿ ನಿವಾಸ ನಿರ್ಮಾಣ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವೆʼ ಎಂದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ರಸ್ತೆಗಳು ಮಹತ್ವದ ಪಾತ್ರ ವಹಿಸುತ್ತವೆ. ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಅಭಿವೃದ್ಧಿಯಾಗುತ್ತದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜನರ ಋಣ ತೀರಿಸುವಂತಹ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು. ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ʼಸೇವಂತಿಗೆʼ ಕೃಷಿಯಲ್ಲಿ ಯಶಸ್ಸು ಕಂಡ ಯುವ ರೈತ : ತಿಂಗಳಿಗೆ ಒಂದು ಲಕ್ಷ ಆದಾಯ!
ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಬಾಬುರಾವ ಮಲ್ಕಾಪುರೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಸುಲ್ತಾನಪುರ, ಗ್ರಾಪಂ ಸದಸ್ಯರಾದ ದಾವುದು ತೇಲಿ, ಮಲ್ಲಮ್ಮ ಹೂಗಾರ, ಸಚೀನ ಮಲ್ಕಾಪುರ, ಮುಖಂಡರಾದ ಸಂತೋಷ್ ಸಣ್ಣಗೊಂಡ, ಬಾಬು ಬರಿದಬಾದೆ, ಓಂಕಾರ, ಸಂಜು ಭಂಡೆ, ಅನೀಲ ತಿಪ್ಪರಗಿ, ನಾಗಮ್ಮ ಹೂಗಾರ, ಸುಧಾಕರ, ಗುಂಡಪ್ಪ, ರಾಹುಲ್, ಸಂಗಮೇಶ ಹಳ್ಳಿ, ಶಿವಕುಮಾರ ನಾಗಲಗಿದ್ದಿ, ಕುಶಲರಾವ, ದೀಲಿಪ್ ಗುಮ್ಮಾ, ಶೇಖರ್ ಕೋಳಾರ, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.