ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರು ತಮ್ಮ ಮಗಳ ಫೋಟೋವನ್ನು ಬಹಿರಂಗಪಡಿಸಿದ್ದಾರೆ. ಅನನ್ಯಾ ಭಟ್ ನಾಪತ್ತೆಯಾಗಿರುವುದೆಲ್ಲವೂ ಸುಳ್ಳು ಕಥೆ ಎಂಬ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಸುಜಾತಾ ಭಟ್ ಅವರಿಗೆ ಮಗಳೇ ಇರಲಿಲ್ಲ ಎಂಬ ಊಹಾಪೋಹಗಳು ಹರಡಿತ್ತು. ಇವೆಲ್ಲವುದರ ಬೆನ್ನಲ್ಲೇ ಸ್ಪಷ್ಟನೆ ನೀಡಲು ಮುಂದಾಗಿರುವ ತಾಯಿ ಸುಜಾತಾ ಭಟ್ ತಮ್ಮ ಮಗಳು ಅನನ್ಯಾಳ ಫೋಟೋವನ್ನು ಬಹಿರಂಗಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೊದಲ ದೂರುದಾರ ಗುರುತಿಸಿದ 17 ಸ್ಥಳಗಳಲ್ಲಿ ಹಂತ ಹಂತವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಆರನೇ ಪಾಯಿಂಟ್ ಮತ್ತು ಹನ್ನೊಂದನೇ ಪಾಯಿಂಟ್‌ನ ಸಮೀಪದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ರೇಡಾರ್ ಬಳಸಿ ಕಾರ್ಯಾಚರಣೆ ನಡೆಸಲು ಸುಜಾತಾ ಭಟ್ ಪರ ವಕೀಲರ ಆಗ್ರಹ
ಇವೆಲ್ಲವುದರ ನಡುವೆಯೇ ಸುಜಾತಾ ಭಟ್ ಎಂಬವರು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ತಮ್ಮ ಮಗಳು ಅನನ್ಯಾ ಭಟ್ 2003ರಲ್ಲಿ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಳು. ಇಬ್ಬರು ಸ್ನೇಹಿತರು ಬಟ್ಟೆ ತರಲು ಹೋಗುತ್ತೇವೆ ಎಂದು ಹೇಳಿ ದೇವಾಲಯದ ಬಳಿ ಬಿಟ್ಟುಹೋಗಿದ್ದು, ವಾಪಸ್ ಬಂದಾಗ ಅನನ್ಯಾ ಇರಲಿಲ್ಲ. ಅಂದಿನಿಂದ ಅನನ್ಯಾ ನಾಪತ್ತೆಯಾಗಿದ್ದಾಳೆ ಎಂದು ತಾಯಿ ಸುಜಾತಾ ಭಟ್ ಹೇಳಿದ್ದಾರೆ.
ಹಾಗೆಯೇ ಅನನ್ಯಾ ಭಟ್ ನಾಪತ್ತೆಯಾದ ನಂತರ ದೂರು ನೀಡಲು ಹೋರಾಗ ಅಂದಿನ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆ ನಡುವೆ ಇತ್ತೀಚೆಗೆ ಸುಜಾತಾ ಭಟ್ ಅವರು ದಕ್ಷಿಣ ಕನ್ನಡ ಎಸ್‌ಪಿ ಅವರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಆದರೆ ಇವೆಲ್ಲವೂ ಕಟ್ಟುಕಥೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಸುಜಾತಾ ಭಟ್ ತಮ್ಮ ಮಗಳ ಫೋಟೋ ಬಹಿರಂಗಪಡಿಸಿದ್ದಾರೆ.

It’s not 25 years old photo. It’s looking like new photo