ಧರ್ಮಸ್ಥಳ | ಪೊಲೀಸರಿಂದ 15 ವರ್ಷಗಳ ಅಸ್ವಾಭಾವಿಕ ಸಾವುಗಳ ದಾಖಲೆ ನಾಶ!

Date:

Advertisements

ಧರ್ಮಸ್ಥಳದ ಸುತ್ತ ಹಲವಾರು ಮೃತದೇಹ ಹೂತು ಹಾಕಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ದಿನವಾದ ಶುಕ್ರವಾರ ನೇತ್ರಾವತಿ ಅರಣ್ಯ ಪ್ರದೇಶಕ್ಕೆ ಎಸ್‌.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನನ್ನು ಕರೆದುಕೊಂಡು ಬಂದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಗುರುತು ಮಾಡಲಾಗಿದ್ದ 7ನೇ ಮತ್ತು 8ನೇ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಸಿದ್ದರೂ ಯಾವುದೇ ಅಸ್ಥಿಪಂಜರದ ಕುರುಹುಗಳು ಪತ್ತೆಯಾಗಿಲ್ಲ.

ಈ ಎಲ್ಲ ಬೆಳವಣಿಗೆಗಳ ನಡುವೆ, ಬೆಳ್ತಂಗಡಿ ಪೊಲೀಸರು 2000 ಮತ್ತು 2015 ರ ನಡುವೆ ದಾಖಲಿಸಿಕೊಂಡಿದ್ದ ಗುರುತಿಸಲಾಗದ ಅಸ್ವಾಭಾವಿಕ ಪ್ರಕರಣಗಳ ಪ್ರಮುಖ ದಾಖಲೆಗಳನ್ನು ನಾಶಪಡಿಸಿದ್ದಾಗಿ ಒಪ್ಪಿಕೊಂಡಿರುವುದು ಆರ್‌ಟಿಐನಲ್ಲಿ ಬಹಿರಂಗಗೊಂಡಿದೆ.

ಈ ಬಗ್ಗೆ ದಾಖಲೆ ಈದಿನ ಡಾಟ್ ಕಾಮ್‌ಗೂ ಲಭ್ಯವಾಗಿದೆ., ಧರ್ಮಸ್ಥಳದಲ್ಲಿ ಅಕ್ರಮವಾಗಿ ಸಾಮೂಹಿಕ ಅಂತ್ಯಕ್ರಿಯೆಗಳು ನಡೆದಿರುವ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗಲೇ ಈ ವಿಚಾರ ಬಹಿರಂಗಗೊಂಡಿದೆ. ಬೆಳ್ತಂಗಡಿ ಪೊಲೀಸರು 2000 ಮತ್ತು 2015ರ ನಡುವೆ ದಾಖಲಿಸಿಕೊಂಡಿದ್ದ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸದೆಯೇ ದಾಖಲೆಗಳನ್ನು ಅಳಿಸಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

1001605268

ವರದಿಯಲ್ಲಿ ಉಲ್ಲೇಖಿಸಿದೆ.

dharmasthala police station 2

ಕಡಬ ತಾಲೂಕಿನ ಕಲ್ಮತ್ತಡ್ಕದಲ್ಲಿರುವ ‘ನೀತಿ’ ಎಂಬ ಹೋರಾಟಗಾರರ ತಂಡವು ಆರ್‌ಟಿಐ ಅರ್ಜಿಯನ್ನು ಸಲ್ಲಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ನ ಸೆಕ್ಷನ್ 174(A) ಅಡಿಯಲ್ಲಿ 15 ವರ್ಷಗಳ ಅವಧಿಯಲ್ಲಿ ದಾಖಲಾದ ಗುರುತಿಸಲಾಗದ ಅಸ್ವಾಭಾವಿಕ ಸಾವಿನ ಪ್ರಕರಣಗಳನ್ನು ಒಳಗೊಂಡ ವಿವರಗಳನ್ನು ಕೋರಿತ್ತು. ಇದಕ್ಕೆ ಉತ್ತರಿಸಿರುವ ಬೆಳ್ತಂಗಡಿ ಪೊಲೀಸ್ ಠಾಣೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, “ವಿನಂತಿಸಿದ ದಾಖಲೆಗಳು, ವಿವಿಧ ಸುತ್ತೋಲೆಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ವಿಲೇವಾರಿ ಮಾಡಲಾಗಿರುವುದರಿಂದ ಇನ್ನು ಮುಂದೆ ಲಭ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಸದ್ಯ ಎಸ್‌ಐಟಿ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿನ ಸಾಕ್ಷಿ ದೂರುದಾರನು, 1998ರಿಂದ 2014ರ ನಡುವೆ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಶವಗಳನ್ನು ಹೂಳಲು ಮತ್ತು ದಫನ ಮಾಡಲು ಒತ್ತಾಯಿಸಲಾಗಿತ್ತು. ನನಗೆ ಜೀವ ಬೆದರಿಕೆ ಇತ್ತು ಎಂದು ಹೇಳಿಕೊಂಡಿದ್ದ. ಸದ್ಯ ಎಸ್‌ಐಟಿ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಇಂಡಿಯಾ ಟುಡೇ ಕೂಡ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನು ಓದಿದ್ದೀರಾ? ಶಾಲಾ ಮಕ್ಕಳು ಕುಡಿಯುವ ನೀರಿಗೆ ಕೀಟನಾಶಕ, ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ

ಧರ್ಮಸ್ಥಳದಲ್ಲಿ ಈ ಹಿಂದೆ ಪೊಲೀಸ್ ಠಾಣೆ ಇರಲಿಲ್ಲ. ಔಟ್‌ಪೋಸ್ಟ್ ಠಾಣೆ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಹೀಗಾಗಿ, ಧರ್ಮಸ್ಥಳ ಸೇರಿದಂತೆ ಇತರೆ ಪ್ರದೇಶಗಳ ಅಸ್ವಾಭಾವಿಕ ಸಾವುಗಳನ್ನು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ದಾಖಲಿಸಿಕೊಳ್ಳಲಾಗುತ್ತಿತ್ತು. 2023ರಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯು ಉದ್ಘಾಟನೆಗೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

5 ಹುಲಿ, 20 ನವಿಲು, 19 ಕೋತಿಗಳ ಸಾವು ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ: ಈಶ್ವರ ಖಂಡ್ರೆ

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು,...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

ಉಡುಪಿ | ಉಚ್ಚಿಲ ದಸರಾ : ಇಂದು ವೈಭವದ ಭವ್ಯ ಶೋಭಾ ಯಾತ್ರೆ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲದಲ್ಲಿ...

ಹಾವೇರಿ | ನಾಳೆ ‘ಮಾದಕ ಮುಕ್ತ ಸಮಾಜ ಮತ್ತು ಡಿಜಿಟಲ್ ಸ್ವಾತಂತ್ರ್ಯ’ ಕುರಿತು ಜಿಲ್ಲಾ ಮಟ್ಟದ ಯುವ ಸಮಾವೇಶ

"ಮಾದಕ ವಸ್ತುಗಳ ಸೇವನೆ ಹಾಗೂ ಡಿಜಿಟಲ್ ವ್ಯಸನದಿಂದ ಯುವಕರು ತಮ್ಮ ಜೀವನವನ್ನು...

Download Eedina App Android / iOS

X