ಧಾರವಾಡ ತೋಟಗಾರಿಕೆ ಇಲಾಖೆಯ ಕಚೇರಿ ಆವರಣದಲ್ಲಿ ಏರ್ಪಡಿಸಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ವಿಧವಿಧದ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿದ್ದು, ಅದರಲ್ಲಿ ವಿಶೇಷವಾಗಿ ಜಪಾನ್‌ನ ಮಿಯಾಝಾಕಿ ಪ್ರದೇಶದ ಹಚ್ಚ ಹಸಿರಿನ ತೋಟಗಳಲ್ಲಿ ಕಂಡುಬರುವ ‘ಮಿಯಾಝಾಕಿ’ ಮಾವಿನಹಣ್ಣು ಗಮನಸೆಳೆಯಿತು. ಈ ಮಾವು ಪ್ರಪಂಚದಾದ್ಯಂತ ಹಣ್ಣು ಪ್ರಿಯರಿಂದ ಹೆಚ್ಚು ಗೌರವಿಸಲ್ಪಟ್ಟಿದೆ. ಪ್ರತಿ ಕೆಜಿಗೆ 2.7 ಲಕ್ಷದಿಂದ 3 ಲಕ್ಷದವರೆಗೆ ಮಾರಾಟವಾಗುತ್ತದೆ. ಈ ಮೇಳದಲ್ಲಿ ಒಂದು ಮಿಯಾಝಾಕಿ ಹಣ್ಣಿಗೆ ಬರೋಬ್ಬರಿ 10 ಸಾವಿರ ರೂ. ಬೆಲೆ ನಿಗದಿ ಮಾಡಿದ್ದಾರೆ.
ಮಿಯಾಝಾಕಿ ಮಾವಿನ ಮೂಲ:
ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಕಡುಗೆಂಪು ಬಣ್ಣದ ವಿದೇಶಿ ತಳಿಯ ಮಿಯಾಝಾಕಿ ಮಾವು ಜಪಾನ್‌ನ ಮಿಯಾಝಾಕಿ ಪ್ರದೇಶದಲ್ಲಿ ಕಂಡುಬರುತ್ತದೆ. ಅದರ ಆಕರ್ಷಕ ಸುವಾಸನೆ ಮತ್ತು ಪರಿಪೂರ್ಣ ವಿನ್ಯಾಸಕ್ಕೆ ಹೆಸರಾಗಿರುವ ಈ ಹಣ್ಣನ್ನು ವೈಜ್ಞಾನಿಕವಾಗಿ ‘ಮ್ಯಾಂಗಿಫೆರಾ ಇಂಡಿಕಾ ಎಲ್’ ಎಂದು ಕರೆಯುತ್ತಾರೆ. ಜಪಾನ್‌ನ ದಕ್ಷಿಣ ದ್ವೀಪ ಕ್ಯುಶುನ್‌ನ ಮಿಯಾಝಾಕಿ ಪ್ರದೇಶದಲ್ಲಿತ್ತು ಎಂಬುದಕ್ಕೆ ಈ ಹೆಸರು ಬಂದಿರಬಹುದು ಎನ್ನಲಾಗುತ್ತದೆ. ಪ್ರೀಮಿಯಂ ಹಣ್ಣುಗಳ ರಾಜನಾಗಿರುವ ಮಿಯಾಝಾಕಿ ಇತರ ಮಾವಿನ ಹಣ್ಣುಗಳಿಗಿಂತ ಭಿನ್ನವಾಗಿದ್ದು, ಇದು ಹಣ್ಣಾದಾಗ; ಗಾಢ ಕೆಂಪು ಬಣ್ಣದ ರಾಯಲ್ ನೇರಳೆ ಸಿಪ್ಪೆಯನ್ನು ಹೊಂದಿರುತ್ತದೆ. ಈ ಪ್ರಕಾಶಮಾನ ಬಣ್ಣದಿಂದಾಗಿ ಇದಕ್ಕೆ “ಸೂರ್ಯನ ಮೊಟ್ಟೆ” ಎಂಬ ಹೆಸರೂ ಬಂದಿದೆ.

ಮೂಲದಲ್ಲಿ ಆಗ್ನೇಯ ಕರಾವಳಿಯಲ್ಲಿ ಹುಟ್ಟಿಕೊಂಡ ಜಪಾನ್ ಖಾದ್ಯವಾದ ಈ ಹಣ್ಣನ್ನು ಜಾಗತಿಕ ಮಾರುಕಟ್ಟೆಯ ಗಮನದ ಬಳಿಕ ಇದೀಗ ಭಾರತದ ನಾನಾ ಕಡೆಗಳಲ್ಲಿ ಬೆಳೆಸಲಾಗುತ್ತದೆ. ಪ್ರತಿ ಕೆಜಿಗೆ ರೂ. 3,00,000 ವರೆಗಿನ ಬೆರಗುಗೊಳಿಸುವ ಬೆಲೆಯಲ್ಲಿ ಮಾರಾಟವಾಗುವ ಈ ರೀತಿಯ ಹಣ್ಣನ್ನು ಮೊದಲು 20ನೇ ಶತಮಾನದ ಮಧ್ಯಭಾಗದಲ್ಲಿ ಜಪಾನಿನ ಹವಾಮಾನದಲ್ಲಿ ಬದುಕಬಲ್ಲ ಉತ್ತಮ ಗುಣಮಟ್ಟದ ಹಣ್ಣನ್ನು ಉತ್ಪಾದಿಸಲು ಆಯ್ಕೆ ಪ್ರಕ್ರಿಯೆಯ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ ಎನ್ನಲಾಗಿದೆ. ಪ್ರತಿ ಮಾವನ್ನು ಕೀಟಗಳು ಮತ್ತು ಇತರ ರೀತಿಯ ಹಾನಿಗಳಿಂದ ರಕ್ಷಿಸಲು ಜಪಾನಿಯರು ಕೈ ಪರಾಗಸ್ಪರ್ಶ ಮಾಡುವ ಮೂಲಕ ಈ ಮಾವಿನ ಕೃಷಿಯನ್ನು ಹೆಚ್ಚಿಸಿದ್ದಾರೆ.
ಮಿಯಾಝಾಕಿ ಮಾವು ಇಷ್ಟೇಕೆ ದುಬಾರಿ?
ಮಿಯಾಝಾಕಿ ಹಣ್ಣು 350-550 ಗ್ರಾಂ ತೂಕದಲ್ಲಿರುತ್ತದೆ. ಇದರ ಸುವಾಸನೆಯು ತುಂಬಾ ತೀವ್ರವಾಗಿರುತ್ತದೆ ಮತ್ತು ಸಕ್ಕರೆ ಅಂಶವು ಶೇ. 15%ಕ್ಕಿಂತ ಹೆಚ್ಚಾಗಿರುತ್ತದೆ. ಇದರ ವಿನ್ಯಾಸವು ತುಂಬಾ ಮೃದುವಾಗಿದ್ದು, ಇದರ ಕೃಷಿ ತಂತ್ರವು ಅತ್ಯಂತ ಕಠಿಣವಾಗಿದೆ. ಇಳುವರಿ ಹೆಚ್ಚಿಗೆ ಮಾಡಲು ಸಸಿ ನೆಟ್ಟ ಸಮಯದಿಂದ ಸಂಪೂರ್ಣ ಹಣ್ಣಾಗುವವರೆಗೆ ಪ್ರತಿ ಹಣ್ಣನ್ನು ಮುಟ್ಟಿ, ಮರಗಳನ್ನು ಕೈಯಿಂದ ಪರಾಗಸ್ಪರ್ಶ ಮಾಡುತ್ತಾರೆ. ಕೀಟಗಳು ಮತ್ತು ಇತರ ರೀತಿಯ ಹಾನಿ ತಪ್ಪಿಸಲು ಪ್ರತಿ ಮಾವನ್ನು ಪ್ರತ್ಯೇಕವಾಗಿ ಮುಚ್ಚುತ್ತಾರೆ. ಚಾಂಡಿ ಬ್ಲಾಕ್‌ನ ಧಕಾನಿಯಾ ಗ್ರಾಮದ ರೈತ ಸುರೇಂದ್ರ ಸಿಂಗ್ 2021ರಲ್ಲಿ ಜಪಾನ್‌ನಿಂದ ಎರಡು ಮಿಯಾಝಾಕಿ ಸಸಿಗಳನ್ನು ಆಮದು ಮಾಡಿಕೊಳ್ಳುತ್ತಾರೆ.
ರೈತರು ಈ ಮಾವಿನ ಮರಗಳನ್ನು ಬೆಳೆಸಲು ಸಾಂಪ್ರದಾಯಿಕ ವಿಧಾನಗಳನ್ನು ಆಧುನಿಕ ನಾವೀನ್ಯತೆಗಳೊಂದಿಗೆ ಸಂಯೋಜಿಸುತ್ತಾರೆ. ಹಣ್ಣುಗಳು ಹುಲುಸಾಗಿ ಬೆಳೆಯಲು ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತಾರೆ. ಸುವಾಸನೆ, ಮಾಧುರ್ಯ ಮತ್ತು ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುವ ಗುರಿಯೊಂದಿಗೆ, ಕೃಷಿ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಎಚ್ಚರಿಕೆಯಿಂದ ಕಾರ್ಯಗತಗೊಳಿಸುತ್ತಾರೆ. ಧಾರವಾಡದ ಬೆಳೆಗಾರ ಪ್ರಮೋದ ಗಾಂವ್ಕರ್ ಅವರು 2012ರಲ್ಲಿ ಮಹಾರಾಷ್ಟ್ರದ ರತ್ನಗಿರಿಯ ನರ್ಸರಿಯಿಂದ ಎರಡು ಸಸಿ ತಂದು ಕಲಕೇರಿಯ ತಮ್ಮ ತೋಟದಲ್ಲಿ ಈ ಮಾವು ಬೆಳೆದಿದ್ದಾರೆ. ಕಾಯಿ ಚೆನ್ನಾಗಿ ಬಲಿಯಲು 150 ದಿನ ಹಿಡಿಯುತ್ತದೆ. ಹಣ್ಣು ಒಂದು ತಿಂಗಳವರೆಗೆ ಹಾಗೆಯೇ ಜೋಪಾನ ಮಾಡಿಟ್ಟರೆ ಹಾಳಾಗುವುದಿಲ್ಲ.

ಈ ಹಣ್ಣು ತಿನ್ನಲು ಬಹಳ ಸಿಹಿ ಮತ್ತು ರುಚಿಯಾಗಿದ್ದು, ಆರೋಗ್ಯಕ್ಕೆ ಬಹಳ ಒಳ್ಳೆಯದು. ಮುಂಬೈ, ಪುಣೆ ಮೊದಲಾದ ಕಡೆಗಳಲ್ಲಿ ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಈ ಹಣ್ಣು ಖರೀದಿಸುತ್ತಾರೆ. ಧಾರವಾಡ ಭಾಗದ ಹವಾಮಾನಕ್ಕೆ ಈ ತಳಿಯ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ವರ್ಷಕ್ಕೆ ಹದಿನೈದರಿಂದ ಇಪ್ಪತ್ತು ಮಾವಿನ ಕಾಯಿ ಫಸಲು ಬರುತ್ತದೆ. ಸುಮಾರು 7 ಸಾವಿರಕ್ಕೂ ಹೆಚ್ಚು ಮಾವಿನ ಗಿಡಗಳನ್ನು ಬೆಳೆಸುತ್ತಿದ್ದು ಅದರಲ್ಲಿ ಈ ಮಿಯಾಝಾಕಿ ಸೇರಿದಂತೆ ವಿವಿಧ ಮಾವಿನ ತಳಿಗಳನ್ನು ಗಾಂವ್ಕರ್ ಬೆಳೆಯುತಿದ್ದಾರೆ. ಈ ಮಾವಿನ ಮರವು ಧಾರವಾಡದ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಮರವು ಪ್ರತಿ ಋತುವಿಗೆ ಗರಿಷ್ಠ 14 ಹಣ್ಣುಗಳನ್ನು ನೀಡುತ್ತದೆ.
ಈ ಹಣ್ಣು ಆರೋಗ್ಯಕ್ಕೆ ಲಾಭದಾಯಕವಾಗಿರುವ ಕಾರಣ ಬೆಲೆ ಹೆಚ್ಚಾಗಿದೆ. ಮಾವಿನ ತಳಿಗಳಲ್ಲಿಯೇ ಅತ್ಯಂತ ದುಬಾರಿ ಹಣ್ಣಾಗಿರುವ ಕಾರಣದಿಂದ ಬಡವರು ಕೊಂಡು ತಿನ್ನುವ ಹಣ್ಣು ಇದಲ್ಲ. ಮತ್ತು ಸ್ಥಳಿಯವಾಗಿ ಇದಕ್ಕೆ ಮಾರುಕಟ್ಟೆಯ ಬೆಲೆಯೂ ಇಲ್ಲ. ಆನ್‌ಲೈನ್ ಮೂಲಕ ದೇಶದ ನೆರೆರಾಜ್ಯ ಹಾಗೂ ವಿದೇಶಕ್ಕೆ ಕಳಿಸುತ್ತೇವೆ. ಹೀಗಾಗಿ ಈ ಹಣ್ಣನ್ನು ಹೆಚ್ಚಾಗಿ ಶ್ರೀಮಂತರು ಕೊಳ್ಳುತ್ತಾರೆ ಎಂದು ಮಿಯಾಝಾಕಿ ಮಾವು ಬೆಳೆಗಾರ ಪ್ರಮೋದ್ ಗಾಂವ್ಕರ್ ಹೇಳುತ್ತಾರೆ. ಇನ್ನು ಈ ಮೇಳದಲ್ಲಿ ಇಷ್ಟೊಂದು ದುಡ್ಡು ಕೊಟ್ಟು ಯಾರು ತೆಗೆದುಕೊಳ್ಳಬೇಕು? ಎಂದು ಹಣ್ಣನ್ನು ನೋಡಿ ಕಣ್ತುಂಬಿಕೊಂಡು, ಬೆಲೆಯ ಕುರಿತು ಅಚ್ಚರಿಪಡುತ್ತಾ ಜನರು ಸಾಗುತ್ತಾರೆ.
ಇದನ್ನೂ ಓದಿ: AI ಕ್ರಾಂತಿ: ಕೆಲಸ ಕಳೆದುಕೊಳ್ಳಲಿದ್ದೀವಾ ನಾವೂ-ನೀವೂ?
ಮಿಯಾಝಾಕಿ ಮಾವಿನ ಗುಣಲಕ್ಷಣಗಳೇನು?
ಮಿಯಾಝಾಕಿ ಮಾವು ಪ್ರದೇಶದ ಅಸಾಧಾರಣ ಕೃಷಿ ಸಾಮರ್ಥ್ಯ ಮತ್ತು ಅಸಾಧಾರಣ ಹಣ್ಣುಗಳನ್ನು ಉತ್ಪಾದಿಸುವ ನಿರಂತರ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಪ್ರತಿ ವರ್ಷ, ಮಿಯಾಝಾಕಿ ಮಾವಿನ ಉತ್ಸವವು ರೈತರು ಮತ್ತು ಉತ್ಸಾಹಿಗಳನ್ನು ಸುಗ್ಗಿಯ ಋತುವನ್ನು ಆಚರಿಸಲು ಒಟ್ಟುಗೂಡಿಸುವ ಈ ಹಣ್ಣು ಎಲ್ಲಾ ಇಂದ್ರಿಯಗಳನ್ನು ಆಕರ್ಷಿಸುವ ವಿಶಿಷ್ಟ ಗುಣಲಕ್ಷಣ ಹೊಂದಿದೆ. ಈ ಹಣ್ಣನ್ನು ಕತ್ತರಿಸಿದ ಮಾವು ಪ್ರಿಯಕರಿಗೆ ಆಹ್ಲಾದಕರ ಸುವಾಸನೆಯ ಅನುಭವಾಗುತ್ತದೆ. ಈ ಹಣ್ಣಿನ ರುಚಿ ಮಾಗಿದ ಪೀಚ್, ಅನಾನಸ್ ಮತ್ತು ಸಿಟ್ರಸ್‌ನಂತಹ ಉಷ್ಣವಲಯದ ಸುವಾಸನೆಗಳ ಪರಿಪೂರ್ಣ ಮಿಶ್ರಣವಾಗಿದ್ದು, ಸ್ವಲ್ಪ ಹೂವಿನ ರುಚಿಯನ್ನು ಹೊರಸೂಸುತ್ತದೆ. ಜಪಾನ್ ಸಂಸ್ಕೃತಿಯಲ್ಲಿ ಇದು ಐಷಾರಾಮಿತನ, ಸಮೃದ್ಧಿ ಮತ್ತು ಆತ್ಮೀಯ ಆತಿಥ್ಯದ ಸಾಂಕೇತಿಕ ಪ್ರಾತಿನಿಧ್ಯಕ್ಕಾಗಿ ಹೆಚ್ಚು ಗೌರವಿಸಲ್ಪಟ್ಟಿದೆ. ಜಪಾನ್‌ನಲ್ಲಿ, ಸಂಪೂರ್ಣವಾಗಿ ಮಾಗಿದ ಮಿಯಾಝಾಕಿ ಮಾವಿನ ಪ್ರಸ್ತುತಿಯನ್ನು ಆಳವಾದ ಗೌರವ ಮತ್ತು ಮೆಚ್ಚುಗೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಮಿಯಾಝಾಕಿ ಮಾವಿನ ಆರೋಗ್ಯ ಪ್ರಯೋಜನಗಳು:
ರೋಗನಿರೋಧಕ ಶಕ್ತಿ ಹೆಚ್ಚಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಲು ಈ ಹಣ್ಣು ಸಹಾಯ ಮಾಡುತ್ತದೆ. ಇದು ಎಲ್ಲ ರೀತಿಯ ಆಹಾರಕ್ರಮಕ್ಕೆ ಪೌಷ್ಟಿಕ ಆಯ್ಕೆಯಾಗಿದೆ. ಈ ಹಣ್ಣಿನಲ್ಲಿ ಪೌಷ್ಟಿಕಾಂಶ ಸಮೃದ್ಧವಾಗಿದ್ದು, ವಿಟಮಿನ್ ಎ, ಬಿ ಮತ್ತು ಸಿ ಇದೆ. ಈ ಹಣ್ಣು ಚರ್ಮಕ್ಕೂ ಒಳ್ಳೆಯದು ಎನ್ನಲಾಗುತ್ತದೆ. ಈ ಮಾವಿನ ಹಣ್ಣು; ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ವ್ಯಾಪಕ ಶ್ರೇಣಿಯ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಹಣ್ಣಿನಲ್ಲಿ ಗಮನಾರ್ಹ ಪ್ರಮಾಣದ ಫೈಬರ್ ಅಂಶವಿದ್ದು, ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹೃದಯ ಕಾಯಿಲೆ ಮತ್ತು ಮಧುಮೇಹದಂತಹ ದೀರ್ಘಕಾಲದ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಪ್ರಕೃತಿ ಮತ್ತು ಮಾನವ ಸೃಜನಶೀಲತೆಯ ಪರಿಪೂರ್ಣ ಸಮತೋಲನವನ್ನು ಪ್ರತಿನಿಧಿಸುತ್ತದೆ. ಈ ಹಣ್ಣು ಆಸಕ್ತಿದಾಯಕ ಪ್ರಯಾಣವನ್ನು ಹೊಂದಿದ್ದು, ಇದರ ಅತ್ಯುತ್ತಮ ಸುವಾಸನೆ ಮತ್ತು ಮೋಡಿಮಾಡುವ ಆಕರ್ಷಣೆಯು ಇದನ್ನು ಶ್ರೇಷ್ಠತೆಯ ಅಧಿಕೃತ ಪ್ರಾತಿನಿಧ್ಯವನ್ನಾಗಿ ಮಾಡುತ್ತದೆ ಎಂದು ತಿಳಿದುಬಂದಿದೆ.
