ಧಾರವಾಡ | ಸೆ.5, 6 ರಂದು ಮೂರನೇ ಅಂತಾರಾಷ್ಟ್ರೀಯ ಐಐಟಿ ಸಮ್ಮೇಳನ

Date:

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡದ ವತಿಯಿಂದ ಭಾರತೀಯ ಪಾರಂಪರಿಕ ಜ್ಞಾನ ಪ್ರಣಾಳಿ ಸಮೂಹ (BTKS) ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನ-2026 ಅನ್ನು ಸೆಪ್ಟೆಂಬರ್ 5 ಮತ್ತು 6 ರಂದು ಐಐಟಿ ಧಾರವಾಡದ ಕೇಂದ್ರ ಕಲಿಕಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಧಾರವಾಡ ಐಐಟಿ ಸಂಸ್ಥೆಯ ನಿರ್ದೇಶಕ ಪ್ರೊ ವೆಂಕಪ್ಪಯ್ಯ ಆರ್. ದೇಸಾಯಿ ಹೇಳಿದರು.

- Advertisement -

ಧಾರವಾಡ ಪಟ್ಟಣದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ (ಐಐಟಿ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಐಐಟಿ ಧಾರವಾಡದ ಭಾರತೀಯ ಜ್ಞಾನ ಪದ್ಧತಿಗಳ ಶ್ರೇಷ್ಠತಾ ಕೇಂದ್ರ (CoE-IKS) ಸಮ್ಮೇಳನವನ್ನು ಆಯೋಜಿಸುತ್ತಿದ್ದು, ನವದೆಹಲಿಯ ಕೇಂದ್ರೀಯ ಸಂಸ್ಕøತ ವಿಶ್ವವಿದ್ಯಾಲಯ, ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಿತ (ANRF), ಕೇಂದ್ರ ಶಿಕ್ಷಣ ಸಚಿವಾಲಯದ ಭಾರತೀಯ ಜ್ಞಾನ ವ್ಯವಸ್ಥೆಗಳ (IKS) ವಿಭಾಗ ಸೇರಿದಂತೆ ವಿವಿಧ ಸಂಸ್ಥೆಗಳು ಸಹಯೋಗ ನೀಡುತ್ತಿವೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಎರಡು ದಿನಗಳ ಸಮ್ಮೇಳನದಲ್ಲಿ ಭಾರತೀಯ ಪಾರಂಪರಿಕ ಜ್ಞಾನ ಪದ್ಧತಿಗಳ ಸಮಕಾಲೀನ ಪ್ರಸ್ತುತತೆ ಹಾಗೂ ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಕಲೆ, ವಾಸ್ತುಶಿಲ್ಪ, ಆಡಳಿತ ಮತ್ತು ಅಂತರ್‍ಶಿಸ್ತೀಯ ಕಲಿಕೆಯಲ್ಲಿ ಅವುಗಳ ಅನ್ವಯ ಕುರಿತು ವಿದ್ವಾಂಸರು ಹಾಗೂ ಸಂಶೋಧಕರು ವಿಚಾರ ವಿನಿಮಯ ನಡೆಸಲಿದ್ದಾರೆ” ಎಂದು ತಿಳಿಸದರು.

“ಸಮ್ಮೇಳನದಲ್ಲಿ 12 ಆಹ್ವಾನಿತ ಉಪನ್ಯಾಸಗಳು, 24 ಮೌಖಿಕ ಪ್ರಸ್ತುತಿಗಳು ನಡೆಯಲಿವೆ. ದೇಶದ ವಿವಿಧ ಐಐಟಿಗಳು, ಎನ್‍ಐಟಿಗಳು, ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ವಿದ್ವಾಂಸರು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ” ಹೇಳಿದರು.

ದೇಶ-ವಿದೇಶಗಳ ಗಣ್ಯ ವಿದ್ವಾಂಸರ ಉಪಸ್ಥಿತಿ: ಪದ್ಮಭೂಷಣ ಪುರಸ್ಕೃತ ಶತಾವಧಾನಿ ಡಾ. ಆರ್. ಗಣೇಶ್, ಪದ್ಮಶ್ರೀ ಪುರಸ್ಕೃತ ಪ್ರೊ. ಕಿರಣ್ ಸೇಠ್, ಐಐಟಿ ಕಾನ್ಪುರದ ಪ್ರೊ. ದೇಬಿ ಪ್ರಸಾದ್ ಮಿಶ್ರಾ, ಐಐಟಿ ಶಂಕರ ಗುರುಕುಲದ ಡಾ. ಚಂದ್ರಶೇಖರ ಟೆಕಲ್, ಐಐಟಿ ಬಾಂಬೆಯ ಪ್ರೊ. ಕೆ. ರಾಮಸುಬ್ರಮಣಿಯನ್, ಚಾಣಕ್ಯ ವಿಶ್ವವಿದ್ಯಾಲಯದ ಪ್ರೊ. ಕೆ.ಎಸ್. ಕಣ್ಣನ್, ರೂಸ್‍ವೆಲ್ಟ್ ವಿಶ್ವವಿದ್ಯಾಲಯದ ಚಿಕಾಗೋದ ಪ್ರೊ. ಕುರ್ಪಾಡ್ ಎಸ್. ಮೂರ್ತಿ, ಐಐಟಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರೊ. ವಿ. ರಾಮನಾಥನ್, ನಿಮ್ಹಾನ್ಸ್‍ನ ಡಾ. ಮಯೂರ್ ಕಾಕು, ಲೇಖಕ ಸಂದೀಪ್ ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಆಹ್ವಾನಿತ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಹಾಗೂ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಸಂಯೋಜಕ, ಐಐಟಿ ಇಂದೋರ್‍ನ ಪ್ರೊ ಗಂಟಿ ಎಸ್. ಮೂರ್ತಿ ಸೇರಿದಂತೆ ಹಲವು ತಜ್ಞರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಾರಂಪರಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನದ ಸಮನ್ವಯ: ಪ್ರಾಚೀನ ಭಾರತೀಯ ತಂತ್ರಜ್ಞಾನಗಳ ಪ್ರಸ್ತುತತೆ, ಯುವಜನರ ಮೇಲೆ ಭಾರತೀಯ ಜ್ಞಾನ ಪದ್ಧತಿಗಳ ಪರಿಣಾಮ, ಭಾರತೀಯ ಸೌಂದರ್ಯಶಾಸ್ತ್ರ, ಆಯುರ್ವೇದ, ಯೋಗಸೂತ್ರಗಳು, ವೈದಿಕ ವಿಜ್ಞಾನ, Sಖಿಇಒ ಶಿಕ್ಷಣ ಹಾಗೂ ಆಧುನಿಕ ವಿಜ್ಞಾನದೊಂದಿಗೆ ಭಾರತೀಯ ಜ್ಞಾನ ಪದ್ಧತಿಗಳ ಮರುಸಂಯೋಜನೆ ಕುರಿತು ಗೋಷ್ಠಿಗಳು ನಡೆಯಲಿವೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಯುರ್ವೇದದ ಮೂಲಕ ರೋಗ ನಿರ್ಣಯ, ಪಾರಂಪರಿಕ ಕಟ್ಟಡಗಳ ಭೂಕಂಪ ನಿರೋಧಕ ಮೌಲ್ಯಮಾಪನ, ಸ್ಥಳೀಯ ವಸ್ತುಗಳಿಂದ ಕಡಿಮೆ-ಕಾರ್ಬನ್ ನಿರ್ಮಾಣ ಸಾಮಗ್ರಿಗಳ ಅಭಿವೃದ್ಧಿ, ದೇವಾಲಯ ವಾಸ್ತುಶಿಲ್ಪ, ಆಡಳಿತ ಮತ್ತು ಪಾರಂಪರಿಕ ಜ್ಞಾನ ಸೇರಿದಂತೆ ವಿವಿಧ ಅಂತರ್‍ಶಿಸ್ತೀಯ ಸಂಶೋಧನಾ ವಿಷಯಗಳ ಕುರಿತು ಪ್ರಸ್ತುತಿಗಳು ನಡೆಯಲಿವೆ.

ಭಾರತೀಯ ಜ್ಞಾನ ಪರಂಪರೆ ಮತ್ತು ಅದರ ಸಮಕಾಲೀನ ಅನ್ವಯಗಳ ಕುರಿತು ಕಾರ್ಯನಿರ್ವಹಿಸುತ್ತಿರುವ ವಿದ್ವಾಂಸರು, ಸಂಶೋಧಕರು ಹಾಗೂ ತಜ್ಞರ ನಡುವೆ ವಿಚಾರ ವಿನಿಮಯಕ್ಕೆ ಸಮ್ಮೇಳನ ಪ್ರಮುಖ ವೇದಿಕೆಯಾಗಲಿದೆ. ಸೆಪ್ಟೆಂಬರ್ 7ರಂದು ಎಲ್ಲಾ ಐಐಟಿಗಳು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (IISc) ಯ ನಿರ್ದೇಶಕರ ಸಭೆಯು ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳು (IKS) ಕೇಂದ್ರದ ಮುಖ್ಯಸ್ಥ (HoC), ಪ್ರೊ. ಸೂರ್ಯ ಪ್ರಕಾಶ ರಮೇಶ, ಮೂಲಸೌಕರ್ಯ ಯೋಜನೆ ಮತ್ತು ಬೆಂಬಲ (IPS) ಸಿವಿಲ್ ಅಸೋಸಿಯೇಟ್ ಡೀನ್ ಪ್ರೊ. ರಮೇಶ್ ನಾಯಕ, ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ (BSBE) ಸಹಾಯಕ ಪ್ರಾಧ್ಯಾಪಕ ಸುಭಾಸ್ ಮೆಹ್ತೋ, ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಮತ್ತು ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗ ಸಹಾಯಕ ಪ್ರಾಧ್ಯಾಪಕ ಪೆ. ವಿಜೇತ್ ಜಿನಚಂದ್ರ ಕೊಟಗಿ ಸೇರಿದಂತೆ ಐಐಟಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಭೂರಹಿತ ದಲಿತ ಕುಟುಂಬಗಳಿಗೆ ಭೂಮಿ, ನಿವೇಶನಕ್ಕಾಗಿ ಸಮತಾ ಸೈನಿಕ ದಳ ಆಗ್ರಹ

ಶಹಾಪುರ ತಾಲೂಕಿನ ವಿವಿಧ ಗ್ರಾಮಗಳ ಭೂರಹಿತ ದಲಿತ ಕುಟುಂಬಗಳಿಗೆ ಭೂಮಿ, ನಿವೇಶನ...

ವಿಜಯಪುರ | 22ನೇ ಶರಣ ತತ್ವ ಕಮ್ಮಟಕ್ಕೆ ಸಚಿವ ಎಂ.ಬಿ ಪಾಟೀಲರಿಗೆ ಆಹ್ವಾನ

ವಿಜಯಪುರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 1ರವರೆಗೆ...

ಬೀಳಗಿ | ಛಾಯಾಗ್ರಾಹಕರಿಗಾಗಿ ಆಕಾಡೆಮಿ ಸ್ಥಾಪಿಸಲು ವಿಠ್ಠಲ ಹಿರೇಮಠ ಆಗ್ರಹ

ಛಾಯಾಗ್ರಾಹಕರ ವೃತ್ತಿ ಭದ್ರತೆ, ಕುಟುಂಬದ ಕಲ್ಯಾಣ ಹಾಗೂ ಸರಕಾರದ ಸೌಲಭ್ಯಗಳನ್ನು ಒದಗಿಸಲು...

ಅಂದು ಬೆಂಬಲ, ಇಂದು ಪಶ್ಚಾತಾಪ: 2023ರ ಚುನಾವಣಾ ಆಯುಕ್ತರ ಕಾಯ್ದೆಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆ ನಡೆದಿದೆ. ಮಾಜಿ...