ಕಳೆದ ನವೆಂಬರ್ 5ರಂದು ತಮ್ಮ 6 ಮಕ್ಕಳನ್ನು ತಮ್ಮ ಪ್ರಿಯಕರರೊಂದಿಗೆ ಸೇರಿಕೊಂಡು ಅಪಹರಿಸಿ, ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.
ಆರೋಪಿಗಳಾದ ಪ್ರಿಯಾಂಕ ಸಾಂಬ್ರಾಣಿ, ರೇಶ್ಮಾ ಸಾಂಬ್ರಾಣಿ, ನಗರದ ಭೂಸಪ್ಪ ಚೌಕ ನಿವಾಸಿ ಸುನೀಲ ಕರಿಗಾರ ಮತ್ತು ಶಿಕಾರಿಪುರ ಮೂಲದ ಮುತ್ತುರಾಜ ಬಿ. ಇವರನ್ನು ಪ್ರಕರಣ ದಾಖಲಾದ ಬೆನ್ನಲ್ಲೇ ವಿದ್ಯಾಗಿರಿ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಮಕ್ಕಳ ಅಪಹರಣದಲ್ಲಿ ಹೆತ್ತ ತಾಯಂದಿರೇ ಶಾಮೀಲು ಆಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಅಪಹರಣದ ಉದ್ದೇಶ ಮತ್ತು ಇತರ ಆರೋಪಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.