ಹೆತ್ತವರು ನವಜಾತ ಗಂಡು ಶಿಶುವನ್ನು ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದಾರೆ. ಧಾರವಾಡದ ಉರ್ದು ಶಾಲೆಯ ಬಳಿ ಶಿಶು ಪತ್ತೆಯಾಗಿದೆ. ಮಗುವಿನ ಪೋಷಕರು ಪತ್ತೆಗೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಆದೇಶದನ್ವಯ ಮಗುವನ್ನು ವೈದ್ಯರ ಶಿಫಾರಸಿನ ಮೇಲೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ
ಮಗುವಿನ ಪಾಲಕರು, ಪೋಷಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಆದ್ದರಿಂದ ಈ ಮಗುವಿನ ಪಾಲಕರು, ಪೋಷಕರು ಕಾನೂನು ರೀತಿ ಹಕ್ಕುಳ್ಳವರು ಎಲ್ಲಿದ್ದರೂ 02 ತಿಂಗಳ ಅವಧಿ ಮುಗಿಯುವುದರ ಒಳಗಾಗಿ ಹುಬ್ಬಳ್ಳಿಯ ಅಮೂಲ್ಯ ಶಿಶುಗೃಹದ ಅಧೀಕ್ಷಕರು ಅಥವಾ ಧಾರವಾಡ ಶಹರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಒಂದು ವೇಳೆ ಯಾರೂ ವಾರಸುದಾರರು ಬಾರದ ಪಕ್ಷದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.