ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಸಂಸ್ಥೆಯಲ್ಲಿ ಪ್ರಥಮ ಬಿವಿಎ ಸ್ನಾತಕ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಮಾಸ್ಟರ್ ಆಫ್ ವಿಜ್ಯುಯಲ್ ಆಟ್ಸ್ (ಎಂವಿಎ) ದೃಶ್ಯ ಕಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಯುಯುಸಿಎಮ್‍ಎಸ್ ಪೋರ್ಟಲ್ ಮೂಲಕ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಸ್ನಾತಕೋತ್ತರ ಪದವಿಯಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆ ವಿಭಾಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕೋತ್ತರ ಪದವಿಯಾಗಿರುತ್ತದೆ. ಪ್ರಥಮ ಮಾಸ್ಟರ್ ಆಫ್ ವಿಜುಯಲ್ ಆಟ್ರ್ಸ್ (ಎಂ.ವಿ.ಎ), ಪ್ರವೇಶಾತಿಗಾಗಿ ಚಿತ್ರಕಲೆ ಮತ್ತು ಶಿಲ್ಪಕಲೆ ವಿಭಾಗಕ್ಕೆ ಆಗಸ್ಟ್ 7ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತು ಆಗಸ್ಟ್ 11ರ ಬೆಳಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಹಾಗೂ ಮಧ್ಯಾಹ್ನ 2 ಗಂಟೆಗೆ ವೈಯಕ್ತಿಕ ಸಂದರ್ಶನವಿರುತ್ತದೆ.
ಇದನ್ನೂ ಓದಿ: ಧಾರವಾಡ | ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ, ಇಷ್ಟಪಟ್ಟು ಓದಬೇಕು: ಡಾ. ರುದ್ರೇಶ್ ಮೇಟಿ ಸಲಹೆ
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಂತರ್ಜಾಲ http://www.cavamysore.karnataka.gov.in ವಿಳಾಸ http://www.mysore.nic.in ಅಥವಾ ಕಾರ್ಯಾಲಯದ ದೂರವಾಣಿ ಸಂಖ್ಯೆ 0821-2438931 ಗೆ ಸಂಪರ್ಕಿಸಬಹುದು ಎಂದು ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.