ಧಾರವಾಡ ರಂಗಾಯಣದಿಂದ ಡಿಸೆಂಬರ್ ಮಾಹೆಯಲ್ಲಿ ರಂಗಭೂಮಿ ಅನುಭವವಿರುವ ನುರಿತ ಕಲಾವಿದರಿಂದ ಹೊಸ ನಾಟಕವನ್ನು ಸಿದ್ಧಪಡಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.
ಸಿದ್ಧಪಡಿಸುವ ಹೊಸ ನಾಟಕಕ್ಕೆ 15 ಜನ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಹತೆಯುಳ್ಳ 22 ರಿಂದ 35 ವರ್ಷದೊಳಗಿನ ವಯೋಮಿತಿಯುಳ್ಳ ಆಸಕ್ತ ಕಲಾವಿದರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಆಸಕ್ತ ಕಲಾವಿದರು ಸ್ವ-ವಿವರದೊಂದಿಗೆ ನವೆಂಬರ 28, 2024 ಸಂಜೆ 5 ಗಂಟೆಯ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ ಪಂ. ಬಸವರಾಜ ಬಯಲು ರಂಗಮಂದಿರ, ಕಾಲೇಜು ರಸ್ತೆ, ಧಾರವಾಡ-580001 ವಿಳಾಸಕ್ಕೆ ಮುದ್ದಾಂ, ಅಂಚೆ ಮೂಲಕ ಅಥವಾ ಇಮೇಲ್ dharwadrangayana@gmail.com ಮೂಲಕ ಅರ್ಜಿ ಸಲ್ಲಿಸಬಹುದು.
ಈ ವರದಿ ಓದಿದ್ದೀರಾ? ಧಾರವಾಡ | ಒನಕೆ ಓಬವ್ವ ಒಂದು ಜಾತಿಗೆ ಸೀಮಿತವಲ್ಲ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ, 0836-2441706ಗೆ ಸಂಪರ್ಕಿಸಲು ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.