ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ರೈತ ಮತ್ತು ರೈತ ಮಹಿಳೆಯರಿಗೆ ಸನ್ಮಾನಿಸಲು ಶ್ರೇಷ್ಠ ರೈತ, ರೈತ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದಾರೆ.
2024-25 ನೇ ಸಾಲಿನಲ್ಲಿ ಡಿಸೆಂಬರ್ 21 ರಿಂದ 23 ರವರೆಗೆ ಆರ್ಥಿಕತೆ ಮತ್ತು ಪೌಷ್ಠಿಕತೆಗಾಗಿ ತೋಟಗಾರಿಕೆ ಎಂಬ ಧೈಯದೊಂದಿಗೆ ತೋಟಗಾರಿಕೆ ಮೇಳವನ್ನು ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ಹಮ್ಮಿಕೊಂಡಿದ್ದಾರೆ.
ಅರ್ಹ ತೋಟಗಾರಿಕೆ ಮಾಡುತ್ತಿರುವ ರೈತ ಮತ್ತು ರೈತ ಮಹಿಳೆಯರು ಅರ್ಜಿ ನಮೂನೆಯನ್ನು ಸಹ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕರು ಆಥವಾ ಮುಖ್ಯಸ್ಥರು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಕುಂಬಾಪುರ ಫಾರ್ಮ, ಧಾರವಾಡದಲ್ಲಿ ಪಡೆಯಬಹುದು ಅಥವಾ ವೆಬ್‍ಸೈಟ್ www.uhsbagalkot.karnataka.gov.in ಮೂಲಕ ಪಡೆದು, ಭರ್ತಿ ಮಾಡಿ, ನವೆಂಬರ್ 5, 2024 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಇದನ್ನು ಓದಿದ್ದೀರಾ? ಧಾರವಾಡ | ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ: ಹಗ್ಗದ ಆಸರೆಯಿಂದ ನದಿ ದಾಟಿದ ಜನ
ಹೆಚ್ಚಿನ ಮಾಹಿತಿಗಾಗಿ 7892770955, 9449872863 ಅಥವಾ ಶುಲ್ಕ ರಹಿತ ಉದ್ಯಾನ ಸಹಾಯವಾಣಿ ಸಂಖ್ಯೆ 1800 425 7910 ಗೆ ಸಂಪರ್ಕಿಸಬಹುದು ಎಂದು ಧಾರವಾಡ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.