ಕೀಳು ಮಟ್ಟದ ಪದ ಬಳಸಿ ಸಚಿವರಾದ ಸಂತೋಷ ಲಾಡವರಿಗೆ ಅವಮಾನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕ್ಷಮೆ ಕೇಳಬೇಕೆಂದು ಧಾರವಾಡ ಕಾಂಗ್ರೆಸ್ ಮುಖಂಡ ಅರವಿಂದ ಏಗನಗೌಡರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯೆಂದ್ರ ಅವರೇ ನಿಮ್ಮ ತಂದೆಯ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿರುವ ನೀವು, ನಿಮ್ಮ ಹೆಸರಿನ ಮುಂದಿರುವ ಯಡಿಯೂರಪ್ಪ ಎಂಬ ಹೆಸರು ತೆಗೆದುಬಿಟ್ಟರೇ ಈ ರಾಜಕಾರಣದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ ಎಂದು ಹೇಳಿದರು.
ಯಾವುದೇ ಗಾಡ್ ಫಾದರ್‌ಗಳಿಲ್ಲದೇ ತಳಮಟ್ಟದಿಂದ ಹಂತಹಂತವಾಗಿ ಬೆಳೆದ ಸಂತೋಷ್ ಲಾಡ್ ಅವರ ಬಗ್ಗೆ ಮಾತಾಡೋಕೆ ನಿಮಗೆ ಅರ್ಹತೆ ಹಾಗೂ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಒಂದು ಸಾಮಾನ್ಯ ಕಾರ್ಪೊರೇಟರ್ ಗಿರಿಯಿಂದ ಹಿಡಿದು ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಚಿವಗಿರಿಯವರೆಗೆ ಸ್ವಂತ ಬಲದ ಮೇಲೆ ಬೆಳೆದ ನಾಯಕರಾದ ಸಂತೋಷ್ ಲಾಡ ಎಂಬುದು ಮರೆಯಬೇಡಿ ಎಂದರು.
ಲಾಡ್ ಸ್ವಂತ ಹಣದಲ್ಲಿ ಸಾವಿರಾರು ಬಡಜನರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ತಮ್ಮ ಹಾಗೆ ಕೋವಿಡ್ ಸಮಯದಲ್ಲಿ ಮಾಸ್ಕ್-ಸ್ಯಾನಿಟೈಸರ್ ಹಗರಣ ಮಾಡಿ ಸಾವಿರಾರು ಕೋಟಿ ಲೂಟಿ ಹೊಡೆದು, ಜನರ ಹೆಣದ ಮೇಲೆ ರಾಜಕಾರಣ ಮಾಡಿದವರಲ್ಲ ಎಂಬುದು ರಾಜ್ಯಕ್ಕೇ ತಿಳಿದ ಸಂಗತಿ ಎಂದರು.
ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ನಿಮ್ಮ ರಾಷ್ಟ್ರ ನಾಯಕರಿಗೆ ಆಗುತ್ತಿಲ್ಲ, ಇದರಿಂದ ಹತಾಶೆಗೊಂಡಿರುವ ನೀವು ಅವರ ದ್ವನಿ ಹತ್ತಿಕ್ಕಲು ಈ ರೀತಿಯ ಕ್ಷುಲ್ಲಕ ಮಾತುಗಳಾನ್ನಾಡುತ್ತಿದ್ದೀರೆಂದು ಜನಸಾಮಾನ್ಯರಿಗೂ ಗೊತ್ತಾಗಿದೆ. ಈ ಕೂಡಲೆ ಬಿಜೆಪಿ ರಾಜ್ಯಾಧ್ಯಕ್ಷ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
