ಬಸವಾದಿ ಶರಣರ ಆಶಯದಂತೆ ನಮ್ಮ ಮಾತು ಕೃತಿ ಒಂದಾಗಬೇಕು, ನಡೆ ನುಡಿ ಸಾಮರಸ್ಯಗೊಳ್ಳಬೇಕು, ಸತ್ಯವೇ ನಮ್ಮ ತಂದೆ ತಾಯಿ, ವಚನ ಸಾಹಿತ್ಯವೇ ನಮ್ಮ ಬಂಧು ಬಳಗ ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮ ಎಂಬುದನ್ನು ಅರಿತು ನಾವೆಲ್ಲರೂ ಬಾಳಿದಾಗ ಮಾತ್ರ ಈ ನಾಡು ಕಲ್ಯಾಣ ರಾಜ್ಯವಾಗುತ್ತದೆ ಎಂದು ಸಂಶೋದಕ ಡಾ.ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.
ಧಾರವಾಡದಲ್ಲಿ ನಡೆದ ನಿತ್ಯ ವಚನೋತ್ಸವದ ಮಂಗಳೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಸೂರಿನ ಡಾ.ಶರತ್‌ಚಂದ್ರ ಸ್ವಾಮೀಜಿ ಮಾತನಾಡಿ, “ಮಾನವನ ಬದುಕು ಅವನ ಮನಸ್ಸಿನ ತಳಹದಿ ಮೇಲೆ ಕಟ್ಟಲ್ಪಟ್ಟಿದೆ. ಅವನ ಎಲ್ಲ ಬಗೆಯ ಚಟುವಟಿಕೆಗಳಿಗೆ ಮನಸೇ ಪ್ರೇರಕ, ತಾರಕ, ಮಾರಕ. ಅದು ಮನುಷ್ಯನ ಅಸ್ತಿತ್ವದ ಮೂಲವಾಗಿದೆ. ಮನಸ್ಸು ಪವಿತ್ರವಾಗುವಂತೆ ಮಾಡಲು ಆಧ್ಯಾತ್ಮದ ಸ್ಪರ್ಶ ನೀಡಬೇಕು. ದೇಹ ಮತ್ತು ಮನಸ್ಸು ಚನ್ನಾಗಿದ್ದರೆ ಸದೃಢ ಸಶಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಸವ ಸಂಸ್ಕಾರದ ಅರಿವು ಮೂಡಿಸುವ ಕೆಲಸ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪತ್ರಿಕಾ ವಿತರಕರ ಸಮ್ಮೇಳನ ಯಶಸ್ವಿಗೆ ಭಾಗಿಯಾಗಿ : ಎನ್. ಮಾಲತೇಶ್
ನಿವೃತ್ತ ಐಎಎಸ್ ಅಧಿಕಾರಿ ಜಿ ವಿ ಕೊಂಗವಾಡ, ಸಾಹಿತಿ ಜಿ ಎ ತಿಗಡಿ, ಡಾ. ಎಸ್ ಆರ್ ಜಂಬಗಿ, ರವಿಕುಮಾರ ಕಗ್ಗಣ್ಣವರ, ಕಾಂತಿಲಾಲ ಮೆಹತಾ, ಗಿರಿಜಾ ನರೆಗಲ್ ವೇದಿಕೆಯಲ್ಲಿದ್ದರು. ಬಸವ ಕೇಂದ್ರ ಅಧ್ಯಕ್ಷ ಸಿದ್ರಾಮಣ್ಣ ನಡಕಟ್ಟಿ ಆಶಯನುಡಿ ಆಡಿದರು. ಸಂಗೀತಾ ಮಠಪತಿ ನಿರೂಪಿಸಿದರು, ಬಸವಂತ ತೋಟದ ಪ್ರಾಸ್ತಾವಿಕ ಮಾತನಾಡಿದರು, ಶಿವರುದ್ರಗೌಡ ಪಾಟೀಲ ಸ್ವಾಗತಿಸಿ, ವಂದಿಸಿದರು.