ಲಾರಿ ಗಾಲಿಗೆ ಸಿಕ್ಕು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ರೈತ ಭವನದ ಹತ್ತಿರ ನಡದಿದ್ದು, ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
23 ವರ್ಷದ ಮುತ್ತಪ್ಪ ಈಸರಣ್ಣವರ ಅಣ್ಣಿಗೇರಿ ತಾಲ್ಲೂಕಿನ ಬಸಾಪುರ ಗ್ರಾಮದ ನಿವಾಸಿಯೆಂದು ತಿಳಿದುಬಂದಿದೆ. ನವಲಗುಂದ ಪಟ್ಟಣದಲ್ಲಿ ಉಸುಕಿನ ಲಾರಿ ಚಲಾಯಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಮಾರ್ಚ್ 17ರಂದು ಸಾಯಂಕಾಲ ನರಗುಂದ ಕಡೆಗೆ ಬೈಕ್ ಮೇಲೆ ಹೊರಟಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.
ನವಲಗುಂದ ರೈತ ಭವನ ವೃತ್ತದ ಬಳಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ನರಗುಂದ ಕಡೆಯಿಂದ ಬಂದ ಲಾರಿಯ ಹಿಂದಿನ ಗಾಲಿಗೆ ಸಿಕ್ಕು ಸ್ಥಳದಲ್ಲೇ ಸಾವೀಗೀಡಾಗಿದ್ದಾನೆ ಎನ್ನಲಾಗಿದೆ.