ಬಿಜೆಪಿಗರು ಅಸಲಿ ಗೋಡ್ಸೆಗಳಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯ ನಕಲಿ ಗಾಂಧಿವಾದಿ ಎಂಬ ವ್ಯಂಗ್ಯಕ್ಕೆ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಧಾರವಾಡದಲ್ಲಿ ತಿರುಗೇಟು ನೀಡಿದ್ದಾರೆ.
ಜ. 21ಕ್ಕೆ ‘ಜೈಬಾಪು, ಜೈಬೀಮ್, ಜೈ ಸಂವಿಧಾನ’ ಶಿರ್ಷೀಕೆ ಅಡಿಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ‘ಗಾಂಧಿ-ಭಾರತ’ ಸಮಾವೇಶದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ; ನಕಲಿ ಕಾಂಗ್ರೇಸ್ಸಿಗೆ ನಕಲಿ ಗಾಂಧಿವಾದಿಗಳ ನೇತೃತ್ವ ಎಂದು ವ್ಯಂಗ್ಯವಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಧಾರವಾಡದಲ್ಲಿ ಮಾತನಾಡಿ, ನಾವು ನಕಲಿ ಗಾಂಧಿವಾದಿಗಳೆಂದು ಹೇಳುವ ಬಿಜೆಪಿಗರು ಅಸಲಿ ಗೋಡ್ಸೆಗಳಾಗಿದ್ದಾರೆ ಎಂದು ತಿರುಗೇಟು ನೀಡಿದರು. ಈ ವೇಳೆ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಮಾತನಾಡುತ್ತ, ಹೋರಾಟದಲ್ಲಿ ಕಾಣೆಯಾಗಿ ಪ್ರತ್ಯೇಕ ಪಾಲಿಕೆ ಘೋಷಣೆಯಾದಮೇಲೆ ನಾವೇ ಮಾಡಿದೆವು ಎನ್ನುವಂತೆ ಶಾಸಕ ಅರವಿಂದ ಬೆಲ್ಲದ ಬ್ಯಾನರ್ ಹಾಕಿಕೊಳ್ಳುತ್ತಾರೆ. ಅವರಿಗೆ ಅಷ್ಟೊಂದು ಖಾಳಜಿ ಇದ್ದರೆ ಧಾರವಾಡ ಮಹಾನಗರ ಪಾಲಿಕೆ ಪ್ರಸ್ತಾವನೆ ಕಳುಹಿಸಲಿ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ನಕಲಿ ಕಾಂಗ್ರೆಸ್ಸಿಗೆ ನಕಲಿ ಗಾಂಧಿಗಳ ನೇತೃತ್ವ: ಪ್ರಲ್ಹಾದ್ ಜೋಶಿ ವ್ಯಂಗ್ಯ
ಈ ಸಂದರ್ಭದಲ್ಲಿ ರವಿ ಮಾಳಿಗೇರ. ವಸಂತ ಅರ್ಕಾಚಾರ. ವೀರಣ್ಣಾ ಇರೇಶಿ. ಆನಂದ ಮುಶನವರ. ಇನ್ನೀತರು ಉಪಸ್ಥಿತರಿದ್ದರು.