ಇತ್ತೀಚಿಗೆ ಧಾರವಾಡದ ಗರಗ ಗ್ರಾಮದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಕರಡಿಗುಡ್ಡ ಎಂಬುವವರ ಕೊಲೆಯಾದ ಹಿನ್ನೆಲೆಯಲ್ಲಿ ಪ್ರಕರಣದ 48ಗಂಟೆಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಗರಗ ಠಾಣಾ ಪೊಲೀಸರು ಯಶಸ್ವಿ ಆಗಿದ್ದಾರೆ.
ಮೃತ ಉದ್ಯಮಿ ಗಿರೀಶ್ ಅವರ ಮಗಳನ್ನು ಚುಡಾಯಿಸುತ್ತಿದ್ದ ನಾಲ್ವರಿಗೆ ತಾಕೀತು ಮಾಡಿದ್ದರು. ಆ ಸೇಡಿನಲ್ಲಿ ಪ್ರಮುಖ ಆರೋಪಿ ಖಂಡೋಬಾ ಪಟದಾರಿ ಜೊತೆಗೂಡಿ ಮಂಜುನಾಥ ಚಿಕ್ಕೊಪ್ಪ, ಪ್ರಜ್ವಲ ವಡ್ಡರ ಮತ್ತು ಆಕಾಶ ಮಾದಪ್ಪನವರ ನಾಲ್ವರು ಸೇರಿ ಮನೆಯಲ್ಲಿ ಗಿರೀಶ್ ಒಬ್ಬರೆ ಕುಳಿತಿದ್ದ ಸಂದರ್ಭವನ್ನು ಗಮನಿಸಿ ಏಕಾಏಕಿ ಮಾರಕಾಸ್ತ್ರಗಳಿಂದ ಎಲ್ಲೆಂದರಲ್ಲಿ ಚುಚ್ಚಿ ಹತ್ಯೆ ಮಾಡಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.
ಉದ್ಯಮಿ ಗಿರೀಶ್ ಕೊಲೆಯಾದ ಸಂದರ್ಭದಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಮತ್ತು ಕೊಲೆಯಾದ ಕಾರಣವೂ ಯಾರಿಗೂ ತಿಳಿದಿರಲಿಲ್ಲ. ಕೌಟುಂಬಿಕ ಕಲಹದಿಂದ ಕೊಲೆಯಾಗಿದೆ ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ ಎಂದು ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಮಾಧ್ಯಮಗಳಮುಂದೆ ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ? ಬೆಳಗಾವಿ | ಅನಾರೋಗ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಎಎಸ್ಐ ಅಧಿಕಾರಿ
ಈ ಕುರಿತು ಗರಗ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ ನೇತೃತ್ವದ ತಂಡವು ಎಲ್ಲಾ ಆಯಾಮಗಳಿಂದ ನಿರಂತರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.