ದೇಶದಲ್ಲಿ ಕಾರ್ಮಿಕರು ಎದುರಿಸುತ್ತಿರುವ ವೇತನ ಅಸಮಾನತೆಯನ್ನು ಹೋಗಲಾಡಿಸುವುದು ಬಿಟ್ಟು ಪ್ರಧಾನಿ ಮೋದಿಯವರು ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ.ಮಹಾಂತೇಶ ಧಾರವಾಡದಲ್ಲಿ ಹೇಳಿದರು.
ನಗರದ ಅಕ್ಕನ ಬಳಗದಲ್ಲಿ ಸಮೃದ್ಧ-ಸೌಹಾರ್ದ ಕರ್ನಾಟಕಕ್ಕಾಗಿ ಧಾರವಾಡ, ಹಾವೇರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದ ಸಂದರ್ಬದಲ್ಲಿ ಪ್ರಧಾನಿ ಮೋದಿ ಮೌನದಿಂದ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯು ಮರೀಚಿಕೆ ಆಗಿರುವುದು ಸಾಬೀತಾಗಿದೆ. ದೇಶದಲ್ಲಿ ಶಿಕ್ಷಣ, ನಿರುದ್ಯೋಗ, ಆರೋಗ್ಯ, ವಸತಿ ಹಾಗೂ ಬೆಲೆ ಬಗ್ಗೆ ಚರ್ಚೆ ನಡೆಯುದೆ; ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ, ವೈಷಮ್ಯ ಹಚ್ಚಾಗಿದೆ. ಮೊದಲು ಒಂದು ದೇಶ ಒಂದು ವೇತನ ಜಾರಿಯಾಗಲಿ ಎಂದು ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಕಾರ್ಪೊರೇಟ್ ಬಂಡವಾಳಶಾಹಿ ಹಾಗೂ ಕೋಮುವಾದದ ಅನೈತಿಕ ಸ್ವರೂಪವಾಗಿರುವ ಮೋದಿ ಸರಕಾರ ಕಳೆದ ಹತ್ತು ವರ್ಷದಿಂದ ಜನ ವಿರೋಧಿ ನೀತಿ ನಡೆಸುತ್ತಿದೆ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಬದುಕಿನ ಜ್ಞಾನದೊಂದಿಗೆ ಕೌಶಲ್ಯ ಅಗತ್ಯ: ಡಾ. ಶೌಕತ್ ಅಜೀಮ್
ಮಂಡಳಿ ಸದಸ್ಯ ನಾಗರಾಜ್ ತಮಟೆ ಬಾರಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಹಿರಿಯ ನಾಯಕ ರುದ್ರಪ್ಪ ಜಾಬೀನ ಧ್ವಜಾರೋಹಣ ನೆರವೇರಿಸಿದರು. ಬಿ.ಎನ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಬಿ.ಎಸ್ ಸೊಪ್ಪಿನ, ಬಿ.ಐ ಈಳಿಗೇರ ಉಪಸ್ಥಿತರಿದ್ದರು. ಬಸವರಾಜ ಪೂಜಾರ ನಿರೂಪಿಸಿದರು. ಆನಂದ ಅರ್ಚಕ ಸ್ವಾಗತಿಸಿದರು. ಗುರುಸಿದ್ದಪ್ಪ ಅಂಬಿಗೇರ ವಂದಿಸಿದರು.