ಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಿದ್ದು ನಾಯಕ್ (25) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಾಡ ಅಳ್ನಾವರ ಮಾರ್ಗಮಧ್ಯದಲ್ಲಿ ಜ.13 ರಂದು ಸಂಭವಿಸಿದೆ.
ಕಾರು ಧಾರವಾಡದ ಕಡಗೆ ಹಾಗೂ ಬೈಕ್ ಮೂಲಕ ಇಬ್ಬರು ಸವಾರರು ಧಾರವಾಡದಿಂದ ಅಳ್ನಾವರ ಕಡೆಗೆ ಚಲಿಸುತ್ತಿದ್ದು, ಇವೆರಡು ಪರಸ್ಪರ ಡಿಕ್ಕಿಹೊಡೆದು ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಸಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ಸವಾರ ಮತ್ತು ಕಾರು ಚಾಲಕನಿಗೆ ಗಾಯಗಳಾಗಿದ್ದು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವರದಿ ಓದಿದ್ದೀರಾ? ಧಾರವಾಡ | ಆಸ್ತಿಗಾಗಿ ತಂದೆ, ತಾಯಿಯನ್ನು ಕೊಂದ ಮಗ; ಬೆಚ್ಚಿಬಿದ್ದ ಜನ
ಅಳ್ಳಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.