ಧಾರವಾಡದ ಮದಿಹಾಳ ಆದಿಶಕ್ತಿ ಕಾಲೋನಿ ಬಡಾವಣೆಯಲ್ಲಿ ಪ್ರತಿ ವರ್ಷದಂತೆ ನಡೆಯುವ ಎಮ್.ಸಿ.ಎಲ್ ಸೀಸನ್ 2 ಕ್ರಿಕೆಟ್ ಟೂರ್ನಮೆಂಟ್ ಸ್ಪರ್ಧೆಗೆ ಕಾಂಗ್ರೆಸ್ ನಾಯಕಿ ಗೌರಮ್ಮ ಬಳೋಗಿ ಉದ್ಘಾಟಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲ್ಲುವುದು ಮುಖ್ಯವಲ್ಲ. ಯುವಕರು ಸೋತರು ನಿಮ್ಮ ಗೆಳೆತನ ಬಿಡಬಾರದು. ಮತ್ತು ಕ್ರೀಡಾ ಸಮಯದಲ್ಲಿ ಕ್ರೀಡಾಪಟುಗಳು ಪರಸ್ಪರ ಜಗಳವಾಡದೆ ಶಾಂತವಾಗಿ ಆಟವಾಡಬೇಕು. ಯುವಕರು ಓದಿನ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿವಹಿಸಿದಾಗ ದೇಶದ ಉನ್ನತಿಗೆ ದಾರಿಯಾಗುತ್ತದೆ. ಕ್ರೀಡಾ ತಂಡಗಳು ನಂತರದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಬೆಳೆಯುವಂತಾಗಲಿ ಎಂದು ಹಾರೈಸಿದರು.
ಸ್ಪರ್ಧೆಯಲ್ಲಿ ಒಟ್ಟು 8 ಕ್ರಿಕೆಟ್ ತಂಡಗಳು ಭಾಗವಹಿಸಿದ್ದು, ಕ್ರಿಕೆಟ್ ಆಸಕ್ತರು, ಅಭಿಮಾನಿಗಳು ಇದ್ದರು.
ಈ ಸಂದರ್ಭದಲ್ಲಿ ಸತೀಶ್ ಸಿಂಧೆ ಮಾತನಾಡಿ, ಕ್ರಿಕೆಟ್ ಹಬ್ಬದ ವಾತಾವಾರಣ ನಿರ್ಮಾಣವಾಗಿದ್ದು, ಗೌರಮ್ಮ ಬಳೋಗಿ ಅವರು ಇಂತಹ ಕ್ರೇಡೆಗಳಿಗೆ ನಿರಂತರ ಪ್ರೊತ್ಸಾಹ ಮತ್ತು ಬೆಂಬಲಿಸುತ್ತ ಬಂದಿದ್ದಾರೆ ಎಂದರು.
ಈ ವೇಳೆ ಸಂಗಣ್ಣ ಬಡಗಿಗೌರ, ಯಮನಪ್ಪ ಮೇಟಿ, ದಿನೇಶ್ ದುಮ್ಮಾಳ, ಸುಭಾಷ್ ಸೂರ್ಯವಂಶಿ, ಮಹೇಶ್ ಸಿಂಧೆ, ಗುರುಬಸಪ್ಪ ತೋಟದ ಇನ್ನಿತರರು ವೇದಿಕೆ ಮೇಲಿದ್ದರು.