ಧಾರವಾಡ | ಭೂಗೋಳಶಾಸ್ತ್ರ ವಿಷಯದತ್ತ ಎಲ್ಲರ ಚಿತ್ತ ಹೊರಳಬೇಕು: ಡಾ. ಐ ಎ ಮುಲ್ಲಾ

Date:

Advertisements

ಭೂಗೋಳಶಾಸ್ತ್ರ ಕೇವಲ ಒಂದು ವಿಷಯವಲ್ಲ, ಅದು ನಿರಂತರವಾದ ಅಭ್ಯಾಸವಾಗಿದೆ. ಭೂಗೋಳಶಾಸ್ತ್ರ ವಿಷಯದತ್ತ ಅನೇಕ ವಿಷಯಗಳ ಜತೆಗೆ ಭೂಗೋಳ ಶಾಸ್ತ್ರದ ನಂಟು ಬೆಳೆದುಕೊಂಡಿರುವುದರಿಂದ ಭೂಗೋಳ ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಎಲ್ಲರ ಚಿತ್ತ ಹೊರಳಬೇಕು ಎಂದು ಡಾ. ಐ ಎ ಮುಲ್ಲಾ ಹೇಳಿದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಡೆದ ಭೂಗೋಳಶಾಸ್ತ್ರ ಉಪನ್ಯಾಸಕರ ಸಂಘದಿಂದ ಏರ್ಪಡಿಸಿದ್ದ ನಿವೃತ್ತ ಪ್ರಾಧ್ಯಾಪಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಎನ್‌ಎಸ್‌ಎಸ್ ಅಧಿಕಾರಿ ಹಾಗೂ ಕೇಂದ್ರೀಯ ಮೌಲ್ಯಮಾಪನ ಮುಖ್ಯ ನಿರ್ವಾಹಕ ಡಾ. ಎಂ ಬಿ ದಳಪತಿ‌ ಮಾತನಾಡಿ, “ಭೂಗೋಳಶಾಸ್ತ್ರ ವಿಷಯದಲ್ಲಿ ಇನ್ನೂ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಬೇಕು” ಎಂದರು.

Advertisements

ಬಿ ವಿ ಮುನವಳ್ಳಿ ಮಾತನಾಡಿ, “ಭೂಗೋಳ ಶಾಸ್ತ್ರ ವಿಷಯವನ್ನು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಅಗ ಮಾತ್ರ ಆ ವಿಷಯವನ್ನು ಇನ್ನೂ ಉತ್ತುಂಗ ಮಟ್ಟಕ್ಕೆ ಏರಿಸಬಹುದು” ಎಂದರು.

ಸನ್ಮಾನಿತ ಡಾ. ಡಿ ಎ ಕೊಲ್ಲಾಪುರೆ ಮಾತನಾಡಿ, “ಭೂಗೋಳಶಾಸ್ತ್ರ ವಿಷಯ ಕುಗ್ಗುತ್ತಿದೆ, ಅದನ್ನು ನಾವೆಲ್ಲರೂ ಎತ್ತಿ ಹಿಡಿಯಬೇಕಿದೆ. ಭೂಗೋಳ ಶಾಸ್ತ್ರವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು. ಅದನ್ನು ನಾವೆಲ್ಲರೂ ಬೆಳೆಸುವಂತಹ ಕಾರ್ಯದಲ್ಲಿ ತೊಡಗಬೇಕು ಹಾಗೂ ಅನೇಕ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಭೂಗೋಳ ಶಾಸ್ತ್ರ ವಿಭಾಗವನ್ನು ಸ್ಥಾಪಿಸಿ ಇನ್ನೂ ಹೆಚ್ಚಿನ ಮಹತ್ವ ನೀಡಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮೂರು ಬಾರಿ ಶವವಿಟ್ಟು ಪ್ರತಿಭಟಿಸಿದರೂ ದಲಿತರಿಗೆ ಸಿಗಲಿಲ್ಲ ಸ್ಮಶಾನ ಭೂಮಿ

ಈ ಕಾರ್ಯಕ್ರಮದಲ್ಲಿ ಡಾ. ಕೊಲ್ಲಾಪುರೆ ಹಾಗೂ ಬಿ ವಿ ಮುನವಳ್ಳಿಯವರನ್ನು ಸನ್ಮಾನಿಸಿದರು. ಡಾ. ಜಿ ಎನ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿ ಎಂ ಕಳಕೇರಿ ಪ್ರಾರ್ಥನೆ ಗೀತೆ‌ ಹಾಡಿದರು. ಡಾ. ಎಲ್ ಟಿ ನಾಯಕ್ ಹಾಗೂ ಲಕ್ಷ್ಮಣ್ ಚಂದುಕರ್ ಅತಿಥಿಗಳನ್ನು ಪರಿಚಯಿಸಿದರು. ಡಾ. ಜಿ ಎನ್ ಕುಮ್ಮೂರ್ ಸ್ವಾಗತಿಸಿದರು. ಡಾ. ಎಸ್ ಎಸ್ ಮೋಟೆಬೆನ್ನೂರು ವಂದಿಸಿದರು. ಡಾ. ಎನ್‌ ಬಿ ನಾಲತವಾಡ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X