ನವಜಾತ ಶಿಶುವಿನೊಳಗೆ ಮತ್ತೊಂದು ಮಗು (ಭ್ರೂಣ) ಇರುವ ಪ್ರಕರಣ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ(ಕೆಎಂಸಿಆರ್‌ಐ) ನಡೆದಿದೆ.
ಸೆ.23ರಂದು ಜಿಲ್ಲೆಯ ಕುಂದಗೋಳದ ಗರ್ಭಿಣಿಯೊಬ್ಬರು ಹುಬ್ಬಳ್ಳಿ ಕೆಎಂಸಿಆರ್‌ಐ’ನಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಮಗು ಆರೋಗ್ಯವಾಗಿದೆ. ಆದರೆ, ಆ ಮಗುವಿನೊಳಗೆ ಭ್ರೂಣ ಇರುವುದನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಶಸ್ತ್ರಚಿಕಿತ್ಸಕರು ಪತ್ತೆ ಮಾಡಿದ್ದಾರೆ.
ಈ ಸುದ್ಧಿ ಓದಿದ್ದೀರಾ? ಹುಬ್ಬಳ್ಳಿ | ಗಾಂಧೀಜಿ ವಿರುದ್ಧ ಅವಹೇಳನ; ವ್ಯಕ್ತಿ ಬಂಧನ
ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿದಾಗ ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರುವ ಭ್ರೂಣ ಪತ್ತೆಯಾಗಿದೆ. ನಂತರ ಎಂಆರ್‌ಐ ಸ್ಕ್ಯಾನ್ ಮಾಡಿಸಿದಾಗ ನವಜಾತ ಶಿಶುವಿನ ದೇಹದೊಳಗೊಂದು ಮಗು (ಫೆಟಸ್ ಇನ್ ಫೆಟು) ಇರುವುದು ಖಚಿತವಾಗಿದೆ. ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಲು ಎಲ್ಲಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.