ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜತೆಗೆ ವೃತ್ತಿಗಳ ಕಡೆಗೊ ಗಮನ ಹರಿಸಬೇಕು ಎಂದು ಡಾ ನಾಲತವಾಡ ಅವರು ಸಲಹೆ ನೀಡಿದರು.
ಧಾರವಾಡ ನಗರದ ಹಜರತ್ ನಿಜಾಮುದ್ದೀನ್ ಪ್ರೌಢಶಾಲೆ ಹಾಗೂ ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ ಆಯೋಜಿಸಿದ್ದ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಮೊಹಮ್ಮದ್ ಅಫ್ಜಲ್ ಸವಣೂರು ಮಾತನಾಡಿ, ಎಎಂಪಿ ದೇಹ ಉದ್ದೇಶ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ತಿಳಿಸಿ ವೈದ್ಯಕೀಯ ವಿಭಾಗದಲ್ಲಿರುವ ವೃತ್ತಿ ಅವಕಾಶಗಳ ಬಗ್ಗೆ ವಿವರಿಸಿದರು. ಡಾ. ಮುಸದ್ದಿಕಾ ಖಾನಂ ಕಿತ್ತೂರ್, ಮಾನಸಿಕ ಸಂತೋಲನ ಹಾಗೂ ವಿದ್ಯಾಭ್ಯಾಸದ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಅಫ್ತಾಬ್ ಅತ್ತಾರ್, ಸ್ಟಡಿ ಟೆಕ್ನಿಕ್ಸ್ ವಿಷಯದ ಕುರಿತು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ‘ಗೃಹಲಕ್ಷ್ಮಿ’ ಹಣದಲ್ಲಿ ಹೋಳಿಗೆ ಊಟ ಹಾಕಿಸಿದ್ದ ಅಕ್ಕಾತಾಯಿಗೆ ಸಿಎಂ ಸನ್ಮಾನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಇಸ್ಮಾಯಿಲ್ ತಾಡಪತ್ತರಿ, ಎಎಂಪಿ ವತಿಯಿಂದ ಬಂದಂತಹ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದ ವ್ಯಕ್ತಪಡಿಸಿ ಇಂಥ ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆಯುತ್ತಿರಬೇಕು. ಶಾಲೆಯ ಮುಖ್ಯ ಶಿಕ್ಷಕ ಸಿರಾಜ್ ಅಹಮದ್ ಮನಿಯಾರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಎಸ್ಎ ಖಲಾಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜನಾಬ್ ಇನಾಮದಾರ್, ಜನಾಬ್ ಮುಳಗುಂದ್, ಇನಾಮದಾರ್, ನದಾಫ್ ಹಾಗೂ ವಿದ್ಯಾರ್ಥಿಗಳು ಇದ್ದರು.