ಧಾರವಾಡ | ಜಾನಪದ ಸಂರಕ್ಷಣೆ ಯುವಕರ ಹೊಣೆಯಾಗಿದೆ: ಡಾ. ಎಸ್ ಬಾಲಾಜಿ

Date:

Advertisements

ಯುವಕರು ಜನಪದದತ್ತ ಆಸಕ್ತಿ ವಹಿಸಬೇಕು, ಜನಪದ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು. ಜನಪದ ಸಂರಕ್ಷಣೆ ಯುವಕರ ಹೊಣೆಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಹಾಗೂ ಜಾನಪದ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಹಾಗೂ ಐಸಿಸಿಆರ್ ಸದಸ್ಯ ಡಾ. ಎಸ್ ಬಾಲಾಜಿ ಹೇಳಿದರು.

ನಗರದ ಸರಕಾರಿ ಪ್ರೌಢಶಾಲೆ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ, ಕನ್ನಡ ಜಾನಪದ ಪರಿಷತ್ ಅಂಗಸಂಸ್ಥೆ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಮತ್ತು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಜನಪದದತ್ತ ಆಸಕ್ತಿ ವಹಿಸಬೇಕು, ಜನಪದ ಉಳಿಸಿ ಬೆಳೆಸುವಂತ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಜಾನಪದದ ವ್ಯಾಪ್ತಿ ಬಹು ವಿಸ್ತಾರವಾಗಿದ್ದು ಅದರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಅಗತ್ಯವಿದೆ. ಮತ್ತು ನೂತನ ಪದಪತ್ರ ಪಡೆದ ಜಿಲ್ಲಾ ಮತ್ತು ತಾಲೂಕ ಸಂಚಾಲಕ, ಸಹ ಸಂಚಾಲಕರು ಜನಪದ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲ್ಲಿ ಎಂದು ಹಾರೈಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಶ್ರೀದೇವಿ ಲದ್ದಿಮಠ ಅಧ್ಯಕ್ಷತೆ ವಹಿಸಿದ್ದರು, ಪ್ರಾಸ್ತಾವಿಕವಾಗಿ ಕನ್ನಡ ಜಾನಪದ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಸ್ ಕೌಜಲಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಧಾರವಾಡ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಇದ್ದರು. ಕುಂದಗೋಳ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಬಿ ಎಸ್ ಶಿರಿಯಪ್ಪಗೌಡರ ಮತ್ತು ಧಾರವಾಡ ಕಜಾಪ ಅಧ್ಯಕ್ಷ ಈರಪ್ಪ ಕ ಎಮ್ಮಿ ಮಾತನಾಡಿದರು.

Advertisements

ಈ ವರದಿ ಓದಿದ್ದೀರಾ? ಧಾರವಾಡ | ಆಕಾಶವಾಣಿ ಎದುರು ಮರಕ್ಕೆ ಡಿಕ್ಕಿ ಹೊಡೆದ ಕಾರು: ಗಾಯಾಳು ಆಸ್ಪತ್ರೆಗೆ ದಾಖಲು

ಧಾರವಾಡ ಜಿಲ್ಲಾ ಸಂಚಾಲಕರಾಗಿ ಮಹೇಶ ಎಸ್ ತಳವಾರ, ಜಿಲ್ಲಾ ಸಹ ಸಂಚಾಲಕರಾಗಿ ರಾ.ಹ‌.ಕೊಂಡಕೇರ, ಕುಂದಗೋಳ ತಾಲೂಕ ಸಂಚಾಲಕರಾಗಿ ಮಾರುತಿ ಗೊಲ್ಲರ, ಧಾರವಾಡ ತಾಲೂಕ ಸಂಚಾಲಕರಾಗಿ ದೇವರಾಜ ಅರ್ಟಗಲ್ಲ, ಸಹ ಸಂಚಾಲಕರಾಗಿ ಜಂಗಪ್ಪ ಜೋಗಿ, ನವಲಗುಂದ ಸಂಚಾಲಕರಾಗಿ ಪ್ರಶಾಂತ ನಾಯ್ಕರ ಪದಗ್ರಹಣ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X