ಜೋಡಮನಿ ಫೌಂಡೇಶನ್ ವತಿಯಿಂದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದರು. ಫೌಂಡೇಷನ್’ನ ಸಂಸ್ಥಾಪಕ ಮತ್ತು ಅಧ್ಯಕ್ಷ ಹಜರತ್ಅಲಿ ಜೋಡಿಮನಿಯವರ ನೇತೃತ್ವದಲ್ಲಿ ನಡೆದಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನೆರವೇರಿತು.
ಈ ಕುರಿತು ಸಂಸ್ಥೆಯ ಸಂಸ್ಥಾಪಕ ಹಜರತ್ಅಲಿ ಜೋಡಮನಿ ಮಾತನಾಡಿ, ಈ ಮೊದಲು ನಾವು ಸುಮಾರು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ಪ್ರಥಮ ಬಾರಿಗೆ ಜೋಡಮನಿ ಫೌಂಡೇಶನ್ ವತಿಯಿಂದ ಆರೋಗ್ಯ ತಪಸಣೆ ಶಿಬಿರ ಹಮ್ಮಿಕೊಂಡಿದ್ದೇವೆ. ಈ ಶಿಬಿರದಲ್ಲಿ ಕಣ್ಣಿನ ತಪಾಸನೆ, ಶುಗರ್ ತಪಾಸಣೆ, ಅಸ್ತಮಾ, ಇನ್ನಿತರ ಕಾಯಿಲೆಗಳಿಗೆ ಸಂಬಂಧಿಸಿದ ರೋಗಗಳಿಗೆ ತಪಾಸಣೆ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಶಿಕ್ಷಣ, ಉದ್ಯೋಗ ಸೃಷ್ಠಿಯ ಕುರಿತು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ನಿವೃತ್ತ ಪ್ರಧಾನ ಶಿಕ್ಷನ ನದಾಫ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆಗಳು ಬಹಳಷ್ಟು ಉಂಟಾಗುತ್ತಿವೆ. ಹೀಗಾಗಿ ಆರೋಗ್ಯವೇ ಭಾಗ್ಯವಾಗಿದೆ. ನಮಗೆ ಏನೂ ಸಿಗದಿದ್ದರೂ ಸರಿಯಾದ ಸಮಯಕ್ಕೆ ಆರೋಗ್ಯ ದೊರಕಬೇಕು. ಹೀಗಾಗಿ ಎಲ್ಲರೂ ಆರೋಗ್ಯ ತಪಾಸಣಾ ಶಿಬಿರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಜಾನಪದ ಸಂರಕ್ಷಣೆ ಯುವಕರ ಹೊಣೆಯಾಗಿದೆ: ಡಾ. ಎಸ್ ಬಾಲಾಜಿ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು ಪುಟ್ಟಣ್ಣನವರ ಇದ್ದರು. ಹಿರಿಯರು, ಗ್ರಾಮಸ್ಥರು ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಂಡರು.