ಧಾರವಾಡ ನಗರದ ಕೆಲವು ಬಡಾವಣೆಗಳಿಗೆ ಕಸ ಸಂಗ್ರಹ ವಾಹನಗಳು ವಾರಕ್ಕೊಮ್ಮೆ ಬರುತ್ತಿದ್ದು, ರಸ್ತೆ ಬದಿ, ಕೆರೆ ದಂಡೆ, ನಿವೇಶನ, ಪಾಳುಕಟ್ಟಡ ಪ್ರದೇಶಗಳಲ್ಲಿ ಕಸ ಎಸೆಯುವ ಪರಿಪಾಟ ಹೇಳತೀರದಾಗಿದೆ.
ಕೆಲವು ಕಡೆಗಳಿಗೆ ಕಸ ಸಂಗ್ರಹ ವಾಹನಗಳು ಬರುವುದಿಲ್ಲ. ಇಂಥ ಓಣಿ, ಪ್ರದೇಶಗಳಲ್ಲಿ ರಸ್ತೆ ಬದಿ, ನಿವೇಶನಗಳಲ್ಲಿ ಕಸ ಸುರಿಯವುದು ಹೇರಳವಾಗಿದೆ.
“ರಸ್ತೆ ಬದಿ, ನಿವೇಶನಗಳಲ್ಲಿ ಕಸ ಸುರಿದರೆ ದಂಡ ವಿಧಿಸಲಾಗುವುದು ಎಂಬ ಫಲಕಗಳು ನಾಮಕಾವಸ್ತೆಗೆ ಎಂಬಂತಾಗಿದೆ. ಈ ಫಲಕಗಳ ಬುಡದಲ್ಲಿಯೇ ಕಸ ಸುರಿಯುತ್ತಾರೆ. ಕಸ ವಿಲೇವಾರಿ ಘಟಕವಿರುವ ಹೊಸ ಯಲ್ಲಾಪುರ ಸುತ್ತಲಿನ ಪ್ರದೇಶಗಳ ನಿವಾಸಿಗಳು ಕಸದ ದುರ್ನಾತದ ಸಮಸ್ಯೆಯಿಂದ ನಲುಗುವಂತಾಗಿದೆ” ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
“ಮೂರು ದಿನಕ್ಕೊಮ್ಮೆಯಾದರೂ ನಿಯಮಿತವಾಗಿ ಎಲ್ಲ ಬಡಾವಣೆಗಳಲ್ಲಿ ಕಸ ಸಂಗ್ರಹ ವಾಹನ ಬರುವಂತೆ ವ್ಯವಸ್ಥೆ ಮಾಡಬೇಕು. ಬೀದಿ ಬದಿಗಳಲ್ಲಿ ಕಸ ಸುರಿಯುವುದನ್ನು ತಪ್ಪಿಸಬೇಕು” ಎಂದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಆರಂಭಿಸಲು ಕಸಾಪ ಆಗ್ರಹ
“ಕಸ ಸಂಗ್ರಹ ವಾಹನ ಮತ್ತು ಸಿಬ್ಬಂದಿ ಕೊರತೆ ಇದೆ. ಹೊಸದಾಗಿ ಆಟೊ, ಟಿಪ್ಪರ್‌ಗಳ ಖರೀದಿ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಹೊಸ ವಾಹನಗಳು ಕಸ ಸಂಗ್ರಹ, ವಿಲೇವಾರಿಯ ಬಹುಪಾಲು ಸಮಸ್ಯೆ ಪರಿಹಾರವಾಗಲಿದೆ” ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.