ದೇಶದ ಮುಂದಿರುವ ಸವಾಲುಗಳನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಎದುರಿಸಿ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಉತ್ತುಂಗಕ್ಕೇರಿಸಬೇಕು ಎಂದು ಧಾರವಾಡ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಿ ಕೆ ಬಡಿಗೇರ ಹೇಳಿದರು.
ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ, “ಯುವಜನತೆಯು ದೇಶಪ್ರೇಮ, ಸ್ವತಂತ್ರ ವಿಚಾರಶೀಲತೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು. ಹಲವು ಮಹನೀಯರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಈ ಸ್ವಾತಂತ್ರ್ಯದ ಎಚ್ಚರ ನಮ್ಮಲ್ಲಿ ಜಾಗೃತವಾಗಿರಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯ ಮಲ್ಲಿಕಾರ್ಜುನ ಹಡಪದ, ಸುರೇಶ ಯಲಿಗಾರ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಸಂಚಾಲಕ ಡಾ. ಗಿರೀಶ ದೇಸೂರ ನಿರೂಪಿಸಿದರು. ರೇಂಜರ್ಸ ಮತ್ತು ರೋವರ್ಸ ಅಧಿಕಾರಿಗಳಾದ ಶಿವಾನಂದ ನರಹಟ್ಟಿ ಹಾಗೂ ಸುಮಿತ್ರಾ ಅಣ್ಣಿಗೇರಿ, ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ಡಿ.ಜಿ.ತಾಪಸ್, ಡಾ. ವಿಜಯಲಕ್ಷ್ಮಿ ದಾನರೆಡ್ಡಿ, ಡಾ. ಜಯಾನಂದಹಟ್ಟಿ, ಎನ್.ಸಿ.ಸಿ. ಅಧಿಕಾರಿ ಡಾ. ರೂಪಾ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಎನ್.ಸಿ.ಸಿ. ವಿದ್ಯಾರ್ಥಿಗಳು ಪರೇಡ್ ಮಾಡಿ ಗೌರವ ಧ್ವಜವಂದನೆ ಸಲ್ಲಿಸಿದರು.
ಇದನ್ನೂ ಓದಿ: ಧಾರವಾಡ | ನಿಜ ಜೀವನದಲ್ಲಿ ʼತಲೆದಂಡʼ ನಾಟಕದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಡಿಸಿ ದಿವ್ಯ ಪ್ರಭು