ತಾಲೂಕಿನ ಹೆಬ್ಬಳ್ಳಿಯಲ್ಲಿ 91 ಪಿಓಪಿ ಗಣಪತಿಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ರಚಿಸಿದ ಕಾರ್ಯ ಪಡೆಯ ಸದಸ್ಯರಾದ ಪರಿಸರ ಇಲಾಖೆಯ ಪ್ರಾದೇಶಿಕ ಅಧಿಕಾರಿ ಜಗದೀಶ್ ಐ.ಎಚ್. ಹಾಗೂ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ ತಪಾಸಣೆ ಮಾಡಿ, ವಶಪಡಿಸಿಕೊಂಡು ವಿಗ್ರಹಗಳನ್ನು ಗ್ರಾಮ ಪಂಚಾಯಿತಿಯ ವಶಕ್ಕೆ ನೀಡಿದರು.
ಗ್ರಾಮದ ಶಂಕರ ಕಂಬಾರ, ಬಸವರಾಜ ಗೂಳಪ್ಪ ಕಮ್ಮಾರ, ಬಸವರಾಜ ವಿರೂಪಾಕ್ಷಪ್ಪ ಕಮ್ಮಾರ, ಕರಿಯಪ್ಪ ಕಮ್ಮಾರ ಮನೆ ಮತ್ತು ದಾಸ್ತಾನದಲ್ಲಿರುವ ಒಟ್ಟು 91 ಪಿಓಪಿ ಗಣೇಶ ಮೂರ್ತಿ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಅಮ್ಮಿನಭಾವಿ ವಲಯದ ಕಂದಾಯ ನಿರೀಕ್ಷಕ ಸಂಪತಕುಮಾರ ಒಡೆಯರ್ ಮತ್ತು ಗ್ರಾಮ ಆಡಳಿತ ಅಧಿಕಾರಿ ರಾಮಚಂದ್ರ ನಾಯಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮದನಬಾವಿ, ಹೆಬ್ಬಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಜಿ.ಎಸ್ ಬಡಿಗೇರ ಮತ್ತು ಪೊಲೀಸ್ ಇಲಾಖೆಯ ಇ.ಎಸ್.ಐ ಮಂಜುನಾಥ ತಡಹಾಳ ಹಾಗೂ ತಂಡದವರಿದ್ದರು.