ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅಪಾಯವಿರುವುದು ಭ್ರಮೆಯಲ್ಲ, ವಾಸ್ತವ ಸಂಗತಿಯಾಗಿದೆ. ರಾಜ್ಯಾದ್ಯಂತ ಆಂಗ್ಲ ಮಾಧ್ಯಮ ಶಾಲೆಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ ಎಂದು ಸಾಹಿತಿ ಡಾ. ಎಸ್.ಆರ್. ಗುಂಜಾಳ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ವಿದ್ಯಾವರ್ಧಕ ಸಂಘ ಸಭಾಭವನದಲ್ಲಿ ಜರುಗಿದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗೆ ಪರವಾನಿಗೆ ಪಡೆದು ಮಕ್ಕಳಿಗೆ ಆಂಗ್ಲದಲ್ಲಿ ಬೋಧನೆ ಮಾಡುತ್ತಿರುವ ಶಾಲೆಗಳ ಪೈಕಿ 1,416 ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಸರ್ಕಾರವು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕನ್ನಡ ಮಾಧ್ಯಮ ಶಾಲೆಗೆ ಪರವಾನಿಗೆ ಪಡೆದು ಮಕ್ಕಳಿಗೆ ಆಂಗ್ಲದಲ್ಲಿ ಬೋಧನೆ ಮಾಡುತ್ತಿದ್ದು, ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅಪಾಯವಿರುವುದು ವಾಸ್ತವ ಸಂಗತಿಯಾಗಿದೆ.
ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಹಣ ಸಂಪಾದಿಸಲು ಹೊರಟಿರುವುದು ನಾಗರಿಕ ಸಮಾಜದ ನಡುವಿನ ಹಗಲು ದರೋಡೆ. 4ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆ ಮೂಲಕ ಕಲಿಯುವುದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ತಳಹದಿ ಗಟ್ಟಿಯಾಗುತ್ತದೆ ಎಂದು ಹೇಳಿದರು.