“ಜೀವನದಲ್ಲಿ ಗುರಿ ಅತ್ಯಂತ ಅವಶ್ಯಕ. ಗುರಿ ಇಲ್ಲದ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೆ. ಅದಕ್ಕಾಗಿ ಯುವಜನರು ಮೊದಲು ತಮ್ಮ ಜೀವನದ ಗುರಿಯನ್ನು ಹೊಂದಿರುವುದು ಮುಖ್ಯ” ಎಂದು ಅತಿಥಿ ಗೌತಮ್ ರೆಡ್ಡಿ ತಿಳಿಸಿದರು.
ಧಾರವಾಡದ ಅಂಜುಮನ್ ಕಲಾವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಐಕ್ಯೂಎಸ್‌ಎ ಅಡಿಯಲ್ಲಿ ವಾಣಿಜ್ಯ ವಿಭಾಗ ಮತ್ತು ಸಮಾಜಶಾಸ್ತ್ರ ಹಾಗೂ ದಿನಾಚರಣೆ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಯುವಕರ ದಿನ” ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮ ನುಡಿಗಳಲ್ಲಿ ನೆಹರು ಯುವ ಕೇಂದ್ರದಿಂದ ಯುವಕರಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ವಿವರಿಸಿದರು. ಯುವಕರು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ, ಪ್ರಾಚಾರ್ಯ ಡಾ. ಎನ್ ಎಂ ಮಕಾನದಾರ ಮಾತನಾಡಿ, “ಯುವಶಕ್ತಿ ದೇಶದ ಬೆನ್ನೆಲುಬು. ಸದೃಢ ಯುವಕರಿಂದ ಸದೃಢ ದೇಶವಾಗಲು ಸಾಧ್ಯ. ನಿಮ್ಮಲ್ಲಿರುವ ಅಸಾಧಾರಣ ಸಾಮರ್ಥ್ಯವನ್ನು ನೀವು ಅರಿತುಕೊಳ್ಳಿ ಅಂದಾಗ ದೇಶದ ಪ್ರಗತಿ ಸಾಧ್ಯ” ಎಂಬ ಮಾತನ್ನು ಯುವಕರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ| ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ: ಪ್ರಾಂಶುಪಾಲ, ವಾರ್ಡನ್ ಅಮಾನತು
ಕಾರ್ಯಕ್ರಮದಲ್ಲಿ ಐಕ್ಯೂಎಸ್‌ಸಿ ಸಂಯೋಜಕ ಡಾ.ಏನ್.ಬಿ.ನಲತವಾಡ ಇದ್ದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರೊ.ಉಲ್ಲಾಸ್ ದೊಡ್ಡಮನಿ ನೆರವೇರಿಸಿದರು. ಕು.ಉಸ್ಮಾನ್ ಅತ್ತಾರ್ ಕುರಾನ್ ಪಟ್ಟಣದ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು.