ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಸೇವೆಯಲ್ಲಿರುವವರು ಪರಸ್ಪರ ಪ್ರೀತಿ, ಗೌರವ, ವಿಶ್ವಾಸ ಹೊಂದಿರಬೇಕು. ಇವು ಸೇವೆಯ ಮೌಲ್ಯವನ್ನು ಮತ್ತು ವೃತ್ತಿ ಗೌರವವನ್ನು ಹೆಚ್ಚಿಸುತ್ತವೆ ಎಂದು ಹಿರಿಯ ಪತ್ರಕರ್ತ ಗುರುರಾಜ ಜಮಖಂಡಿ ಹೇಳಿದರು.
ಧಾರವಾಡದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿ ಸಂಗಪ್ಪ ಯರಗುದ್ದಿ ವರ್ಗಾವಣೆ ಹಿನ್ನಲೆಯಲ್ಲಿ ಜರುಗಿದ ಬಿಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಸೇವೆಯಲ್ಲಿದ್ದಾಗ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಆಗುವದರಿಂದ ಹೊಸ ಜನರ, ಪ್ರದೇಶಗಳ ಪರಿಚಯವಾಗುತ್ತದೆ. ಮತ್ತು ಸೇವೆಯಲ್ಲಿದ್ದಾಗ ಪರಸ್ಪರ ಪ್ರೀತಿ, ಗೌರವ, ವಿಶ್ವಾಸಗಳು ಸೇವೆಯ ಮೌಲ್ಯ ಹೆಚ್ಚಿಸುತ್ತವೆ ಎಂದರು.
ಜರ್ನಲಿಸ್ಟ ಗಿಲ್ಡ್ ಅಧ್ಯಕ್ಷ ಬಸವರಾಜ ಹೊಂಗಲ ಮಾತನಾಡಿ, ಸಂಗಪ್ಪ ಅವರು ಸಂಘ ಜೀವಿ ಆಗಿದ್ದಾರೆ. ಇಲಾಖೆಯ ಸಂಬಂಧಗಳ ಹೊರತಾಗಿಯೂ ಗ್ರಾಮೀಣ ಜೀವನ, ಮೂಲ ಸೌಲಭ್ಯಗಳ ಬಗ್ಗೆ ಹೆಮ್ಮೆ, ಕಾಳಜಿ ವ್ಯಕ್ತಪಡಿಸುತ್ತಿದ್ದರು ಎಂದರು. ಸಂಗಪ್ಪನವರು ಮಾಧ್ಯಮದವರಿಗೆ ಮತ್ತು ವಾರ್ತಾ ಇಲಾಖೆಗೆ ಕೊಂಡಿಯಂತೆ ಕೆಲಸ ಮಾಡಿದ್ದರು ಹಿರಿಯ ಪತ್ರಕರ್ತ ಬಸವರಾಜ ಹಿರೇಮಠ ಹೇಳಿದರು. ಹಿರಿಯ ಛಾಯಾಗ್ರಾಹಕ ಪ್ರಶಾಂತ ದಿನ್ನಿ ಮಾತನಾಡಿದರು. ವಾರ್ತಾ ಸಹಾಯಕ ಅಧಿಕಾರಿ ಡಾ.ಸುರೇಶ ಹಿರೇಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಕಸ ವಿಲೇವಾರಿ ವಾಹನ ಹರಿದು 6 ವರ್ಷದ ಬಾಲಕಿ ಸಾವು
ಕಾರ್ಯಕ್ರಮದಲ್ಲಿ ಪತ್ರಕರ್ತ ಧನ್ಯಪ್ರಸಾದ, ಡಿ.ವಿ.ಕಮ್ಮಾರ, ಜಾವಿದ ಅಧೋನಿ, ಮಿಲಿಂದ ಪಿಸೆ, ಮಂಜುನಾಥ ಯಡಳ್ಳಿ, ಶ್ರೀಧರ ಮುಂಡರಗಿ, ವಾಸಿಂ ಬಾವಿಮನಿ, ಉಳವನಗೌಡ ಪಾಟೀಲ, ಮಂಜುನಾಥ ಕವಳಿ, ಹನಮಂತ ಗುಡೆನ್ನವರ, ಅಕ್ಷಯ ಕಮತಗಿ, ವಿಜೇತ ಹೊಸಮಠ, ವಾರ್ತಾ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಭಾರತಿ ಮಟ್ಟಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಕಂಪ್ಲಿ, ಎಂ.ಎಸ್.ಚೊಪದಾರ, ಕಾವ್ಯಾ ಗೌಡರ, ಶಿವಾನಂದ ಭೋವಿ, ಮನೋಜ ಮಸನಿ ಇದ್ದರು.