ಬೆಂಗಳೂರಿನ ಜಾನಪದ ಕುಟೀರದಲ್ಲಿ ಕನ್ನಡ ಜಾನಪದ ಪರಿಷತ್ ಅಂಗ ಸಂಸ್ಥೆಯ ಜಾನಪದ ಯುವ ಬ್ರಿಗೇಡ್ ಧಾರವಾಡ ಜಿಲ್ಲಾ ಸಂಚಾಲಕರನ್ನಾಗಿ ರೈಲ್ವೇ ಇಲಾಖೆಯ ಮಹೇಶ ಶೇ ತಳವಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ತಿಳಿಸಿದರು.
“ಮಹೇಶ ಶೇ ತಳವಾರ ಅವರು ಯುವ ಜಾನಪದ ಕಲಾವಿದ, ಬಯಲಾಟ(ದೊಡ್ಡಾಟ) ಕಲಾವಿದ, ರಂಗಭೂಮಿ ಹಿನ್ನೆಲೆಯಿಂದ ಬಂದ ಬರಹಗಾರರೂ ಆಗಿದ್ದಾರೆ” ಎಂದು ಹೇಳಿದರು.
“ಕನ್ನಡ ನಾಡಿನ ಜಾನಪದ ಸಂರಕ್ಷಣೆ ಹಾಗೂ ಬೆಳವಣಿಗೆ, ಜಾಗೃತಿಗಾಗಿ ಜಿಲ್ಲಾದ್ಯಂತ ಯುವಕರನ್ನು ಸಂಘಟಿಸಲಿ ಮತ್ತು ಯುವಕರಲ್ಲಿ ಜಾನಪದದ ಬಗ್ಗೆ ಹೆಚ್ಚೆಚ್ಚು ಆಸಕ್ತಿ ಬರುವಂತೆ ಧಾರವಾಡ ಜಿಲ್ಲಾದ್ಯಂತ ಶಾಲೆ ಕಾಲೇಜುಗಳಲ್ಲಿ ಹಾಗೂ ಹಳ್ಳಿಪಟ್ಟಣದ ಮಟ್ಟದಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಜಾನಪದದ ಬಗ್ಗೆ ಆಸಕ್ತಿ ಮೂಡುವಂತೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಶಿಬಿರ, ಕಾರ್ಯಕ್ರಮಗಳಂತಹ ಜಾನಪದವೇ ಸತ್ಯ, ಜಾನಪದವೇ ನಿತ್ಯ ಎಂಬ ಘೋಷವಾಕ್ಯದೊಂದಿಗೆ ಜಾನಪದ ಉಳಿವುಗಾಗಿ ಸೇವೆಯನ್ನು ಆಸ್ಥೆಯಿಂದ ಮಾಡುವಂತಾಗಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಕ್ಫ್ ವಿಚಾರ ಇಟ್ಟುಕೊಂಡು ವ್ಯವಸ್ಥಿತವಾಗಿ ದ್ವೇಷ ಹರಡುವ ಹುನ್ನಾರ: ಚಿಂತಕ ಶಿವಸುಂದರ್
ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಡಾ. ರಿಯಾಜ್ ಪಾಷ, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.