12 ನೇ ಶತಮಾನದಲ್ಲಿ ಶರಣ ಕ್ರಾಂತಿಯ ಪ್ರಮುಖರಾಗಿ ಗುರುತಿಸಿಕೊಂಡಿರುವ ಮಡಿವಾಳ ಮಾಚಿದೇವರು ಬಸವನಿಷ್ಠರು ಮತ್ತು ಅವರ ಭಕ್ತಿ, ಪರಾಕ್ರಮಗಳು ಇತರರಿಗೆ ಮಾದರಿಯಾಗಿದ್ದವು. ಜೀವನ ಮಾರ್ಗ ತೊರಿಸುವ ವಚನಗಳು ಮುಂದಿನ ಪೀಳಿಗೆಯವರಿಗೆ ಹಸ್ತಾಂತರವಾಗಬೇಕು ಎಂದು ಧಾರವಾಡ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ಅವರು ಫೆ.1ರಂದು ನಗರದ ಆಲೂರು ವೆಂಕಟರಾವ್ ಸಾಂಸ್ಕಂತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
12 ನೇ ಶತಮಾನದ ಶರಣರಲ್ಲಿ ಮಡಿವಾಳ ಮಾಚಿದೇವರೂ ಒಬ್ಬರು. ಮಡಿವಾಳ ಮಾಚಿದೇವರು ಹಿಮಾಲಯದಷ್ಟು ಅಚಲಹಾಗೂ ದೃಢ ನಿರ್ಧಾರ ಹೊಂದಿದವರು ಎಂದರು. ಕನ್ನಡನಾಡಿಗೆ ಹೊಸ ಭರವಸೆ, ಸಾಮಾಜಿಕ ಬದಲಾವಣೆಗಳನ್ನು ಮೂಡಿಸಿದ್ದ ಶರಣರ ವಚನಗಳನ್ನು ಮಕ್ಕಳು ಪಠಣೆ ಮಾಡಿ, ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಿಯಾತ್ಮಕವಾದ ಕಾರ್ಯಗಳು ಆಗಬೇಕು ಎಂದು ಹೇಳಿದರು.
ಜನರಲ್ಲಿ ನಮ್ಮ ರಾಜ್ಯದ ಮತ್ತು ರಾಷ್ಟ್ರದ ಸಾಮಾಜಿಕ, ಧಾರ್ಮಿಕ ವೈವಿಧ್ಯತೆಗಳನ್ನು, ಭಾವೈಕ್ಯತೆಯನ್ನು ಮತ್ತು ಸಹಿಷ್ಣುತೆಯನ್ನು ಮೂಡಿಸುವದಕ್ಕಾಗಿ ಅನೇಕ ಮಹಾತ್ಮರ, ಶರಣರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಶರಣರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವಾಗಬೇಕೆಂದು ಹೇಳಿದರು.
ಬೆಳಗಾವಿ ನಗರದ ಎಂ.ಎಚ್.ಪಿ.ಎಸ್ ನಂ-12 ರ ಸಂಪನ್ಮೂಲ ವ್ಯಕ್ತಿ ಹಾಗೂ ಸಂಶೋಧಕ ಡಾ. ಬಾಳಪ್ಪ ಈರಪ್ಪ ಚಿನಗುಡಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯೆ ಅನಿತಾ ಸಂತೋಷ ಚಳಗೇರಿ, ಧಾರವಾಡ ಜಿಲ್ಲಾ ಮಡಿವಾಳರ ಸಂಘ ಗೌರವಾಧ್ಯಕ್ಷ ವಾಯ್. ಡಿ. ನವಲಗುಂದ, ಅಧ್ಯಕ್ಷ ಮಡಿವಾಳಪ್ಪ ಎಫ್. ಮಡಿವಾಳರ, ಉಪಾಧ್ಯಕ್ಷ ಯಲ್ಲಪ್ಪ ಬ. ಬೆಂಡಿಗೇರಿ ಸೇರಿದಂತೆ ಜಿಲ್ಲಾ ಸಂಘದ ವಿವಿಧ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ವರಸಿ ಓದಿದ್ದೀರಾ? ಧಾರವಾಡ | ಸ್ವಚ್ಛತಾ ಕಾರ್ಯಕ್ರಮದ ಮೂಲಕ ಗುರುವಿನ ಹುಟ್ಟುಹಬ್ಬ ಆಚರಿಸಿದ ವಿದ್ಯಾರ್ಥಿಗಳು
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.