ನಗರದ ಅಂಜುಮನ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಶನಿವಾರ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿಟಲ್ ಕಾಲೇಜಿನ ಪ್ರಾಚಾರ್ಯೆ ಡಾ.ರೇಖಾ ಜೋಗುಳ್ ಮಾತನಾಡಿ ಸಿಕ್ಕ ಅವಕಾಶ ಸದ್ಬಳಕೆಯಾಗಲಿ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಓರ್ವ ಮಹಿಳೆ ತಾಯಿ, ಅಕ್ಕ-ತಂಗಿ, ಮಡದಿಯಾಗಿ ವ್ಯಕ್ತಿಯ ಜೀವನ ಬೆಳಗುತ್ತಾಳೆ. ಹೀಗಾಗಿ ಆಕೆಗೆ ಗೌರವಿಸಬೇಕು. ಸಮಾಜದ ಕಟ್ಟುಪಾಡು ಮೀರಿ ಬೆಳೆದ ಆಧುನಿಕ ಮಹಿಳೆ ಸಾಧನೆಯ ಶಿಖರ ಮುಟ್ಟಿದ್ದಾಳೆ. ಎಲ್ಲ ರಂಗದಲ್ಲೂ ಛಾಪು ಮುಡಿಸಿದ್ದಾಳೆ ಎಂದರು.
ಪ್ರಾಚಾರ್ಯ ಡಾ.ಐ.ಎ. ಮುಲ್ಲಾ ಮಾತನಾಡಿ, ಲಿಂಗ ಸಮಾನತೆ ತೊರೆದು ಮಹಿಳೆಯರಿಗೆ ಸಮಾನ ಅವಕಾಶ ದೊರಕಿವೆ. ಮಹಿಳಾ ದಿನಾಚರಣೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಸರ್ವ ಕ್ಷೇತ್ರಗಳ ಮಹಿಳೆಯರಿಗೆ ಸಮರ್ಪಿತವಾಗಿದೆ ಎಂದರು.
ಸಮಾರಂಭದಲ್ಲಿ ವಿದ್ಯಾರ್ಥಿನಿಯರು ದೇಶದ ವಿವಿಧ ಗಣ್ಯ ಮಹಿಳಾ ಪ್ರತಿನಿಧಿಗಳ ಛದ್ಮ ವೇಷ ತೊಟ್ಟು ಪ್ರದರ್ಶಿಸಿದರು. ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಡಾ. ಎಸ್.ಎಸ್.ಅದೋನಿ, ಡಾ. ಎನ್.ಬಿ.ನಾಲತವಾಡ, ಡಾ.ಆಸಮಾ ನಾಜ್ ಬಳ್ಳಾರಿ, ಡಾ.ಸೈಯದ್ ತಾಜುನೀಸಾ ಸ್ವಾಗತಿಸಿದರು, ಬಾನುಬಿ ನದಾಫ್ ಪರಿಚಯಿಸಿದರು. ಡಾ. ಬಿಬಿ ಆಯಿಶಾ ಚಕೋಲಿ, ಶ್ವೇತಾ ವರ್ಚಗಿ, ಎಸ್. ಕೆ.ಜಾದವ ನಿರೂಪಿಸಿದರು. ಕು.ದಫೇದಾರ ವಂದಿಸಿದರು.
ಇದೆ ಸಂದರ್ಭದಲ್ಲಿ ಮಲಬಾರ ಗೋಲ್ಡ್ ವತಿಯಿಂದ ಲಕ್ಕಿ ಡ್ರಾ ಮೂಲಕ ಮೂವರು ವಿದ್ಯಾರ್ಥಿಗಳಿಗೆ 10, 05 ಹಾಗು 03 ಗ್ರಾಮ್ ಬೆಳ್ಳಿಯ ನಾಣ್ಯವನ್ನು ನೀಡಿ ಕೇಕ್ ಕತ್ತರಿಸಿದರು. ಕಾರ್ಯಕ್ರಮದಲ್ಲಿ ಮಲಬಾರ ಗೋಲ್ಡ್’ನ ಧಾರವಾಡ ಶಾಖೆಯ ಇರಫಾನ ಬಳ್ಳಾರಿ, ನಿಯಾಜ್ ಚೌದರಿ, ಆಯಿಶಾ ರಸಿಸವಾಲೆ ಹಾಗು ಅಂಬಿಕಾ ಮತ್ತಿತರರು ಹಾಜರಿದ್ದರು.